ಪಡುಬಿದ್ರಿ ಬಂಟರ ಸಂಘದ ವತಿಯಿಂದ ಸಮಾಜದ ಆರ್ಥಿಕ ದುರ್ಬಲರಿಗೆ, ಆಶಕ್ತರಿಗೆ, ಅನಾರೋಗ್ಯ, ಪೀಡಿತರಿಗೆ, ಆರ್ಥಿಕ ಹಿಂದುಳಿದ ವಿದ್ಯಾರ್ಥಿ – ವಿದ್ಯಾರ್ಥಿನಿಯರಿಗೆ ಪಡುಬಿದ್ರಿ ಬಂಟರ ಸಂಘದ ಸಹಭಾಗಿತ್ವದ ಸಿರಿಮುಡಿ ದತ್ತಿ ನಿಧಿ ಯೋಜನೆಯಡಿ ಸುಮಾರು 20 ಲಕ್ಷ ರೂ ಸಹಾಯಧನವನ್ನು ಅಕ್ಟೋಬರ್ 1ರ ಆದಿತ್ಯವಾರ ಬೆಳಗ್ಗೆ 10 ಗಂಟೆಗೆ ವಿತರಿಸಲಾಗುವುದೆಂದು ಬಂಟರ ಸಂಘದ ಅಧ್ಯಕ್ಷರಾದ ಡಾ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಹೇಳಿದ್ದಾರೆ.
ಬಂಟರ ಸಂಘದ ವ್ಯಾಪ್ತಿಯಲ್ಲಿ ಪ್ರಪ್ರಥಮ ಬಾರಿಗೆ ಸಮಾಜದ ವೃದ್ದರಿಗೆ ನಮ್ಮ ಸಂಘವು ಆಶ್ರಯವಾಗಬೇಕೆಂಬ ದೃಷ್ಟಿಯಿಂದ ಸುಮಾರು 6ಎಕರೆ ಜಾಗದಲ್ಲಿ ಬಂಟಾಶ್ರಯ, ಕುಟುಂಬ ಸೇವಾಶ್ರಮ ಎಂಬ ವೃದ್ದಾಶ್ರಮ ನಿರ್ಮಿಸಿರುವ ಯೋಜನೆ ಹಾಕಿಕೊಳ್ಳಲಾಗಿದೆ.
ಪಡುಬಿದ್ರಿ ಬಂಟರ ಸಂಘದ ಸಹಭಾಗಿತ್ವದಲ್ಲಿ ಆರ್ಥಿಕ ಸಬಲೀಕರಣ ಮತ್ತು ಎಲ್ಲಾ ಸಮಾಜದವರಿಗೂ ಅನುಕೂಲವಾಗುವಂತೆ ಸಿರಿಮುಡಿ ಕ್ರೆಡಿಟ್ ಕೋ -ಆಪರೇಟಿವ್ ಬ್ಯಾಂಕ್ ಸ್ಥಾಪನೆಗೆ ಚಾಲನೆ ನೀಡಲಾಗುತ್ತದೆ.
ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರಿಗೆ ಸಮಾಜದ ವತಿಯಿಂದ ಅಭಿನಂದನೆ ನಡೆಯಲಿದ್ದು, ಹುಬ್ಬಳ್ಳಿಯ ಉದ್ಯಮಿ ರಾಜೇಂದ್ರ ಶೆಟ್ಟಿ ವಿವಿಧ ಗಣ್ಯರನ್ನು ಗೌರವಿಸಲಿದ್ದಾರೆ. ಮುಂಬೈ ಬಂಟರ ಸಂಘದ ಅಧ್ಯಕ್ಷ ಏರ್ಮಾಳ್ ಚಂದ್ರಹಾಸ್ ಶೆಟ್ಟಿ, ಮುಂಬೈ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಸಿ ಎ ಸುರೇಂದ್ರ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಕಾರ್ಯಕ್ರಮವನ್ನು ಆದಾನಿ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಕಿಶೋರ ಆಳ್ವ ಉದ್ಘಾಟಿಸಲಿದ್ದು. ಹಿರಿಯ ಉದ್ಯಮಿ ಹೇರಂಬ ಇಂಡಸ್ಟ್ರೀ ಮಾಲೀಕರಾದ ಕನ್ಯಾನ ಸದಾಶಿವ ಶೆಟ್ಟಿಯವರು ಕ್ರೆಡಿಟ್ ಕೋ – ಆಪರೇಟಿವ್ ಬ್ಯಾಂಕ್ ಗೆ ಚಾಲನೆ ನೀಡಲಿದ್ದಾರೆ.
ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರು ಆಶಕ್ತರಿಗೆ ನೆರವು ವಿತರಿಸಲಿದ್ದಾರೆ. ಮುಂಬೈ ಉದ್ಯಮಿ ಎಲ್ಲೂರಿನ ಪ್ರವೀಣ ಭೋಜ ಶೆಟ್ಟಿಯವರು ಬಂಟಾಶ್ರಯಕ್ಕೆ ಚಾಲನೆ ನೀಡಲಿದ್ದಾರೆ. ಪತ್ರಿಕಾ ಪರಿಷತ್ತಿನಲ್ಲಿ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷರಾದ ಎರ್ಮಾಳು ಶಶಿಧರ್ ಶೆಟ್ಟಿ ಸಿರಿಮುಡಿ ದತ್ತಿ ನಿಧಿಯ ಅಧ್ಯಕ್ಷರು ಸಂತೂರು ಭಾಸ್ಕರ ಶೆಟ್ಟಿ, ಸಂಘದ ಕಾರ್ಯದರ್ಶಿ ಪ್ರಕಾಶ ಶೆಟ್ಟಿ ಪಡುಹಿತ್ಲು, ಕೋಶಾಧಿಕಾರಿ ರವಿ ಶೆಟ್ಟಿ ಗುಂಡ್ಲಾಡಿಯವರು, ಯುವ ಬಂಟರ ಸಂಘದ ಅಧ್ಯಕ್ಷ ನವೀನ್ ಎನ್ ಶೆಟ್ಟಿ, ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷ ಜಯ ಶೆಟ್ಟಿ ಪದ್ರ, ಮಹಿಳಾ ವಿಭಾಗದ ಜ್ಯೋತಿ ಶೆಟ್ಟಿ ಉಪಸ್ಥಿತರಿದ್ದರು.