ಬೆಂಗಳೂರಿನ ಕೇಂಬ್ರಿಡ್ಜ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಪ್ರಾಧ್ಯಾಪಕರಾದ ಸಂದೀಪ್ ಕುಮಾರ್ ರೈರವರು ಸಲ್ಲಿಸಿದ ಮಹಾಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಆ. 1 ರಂದು ನಡೆದ 23ನೇ ಘಟಿಕೋತ್ಸವದಲ್ಲಿ ಪಿ.ಹೆಚ್.ಡಿ ಪದವಿ ನೀಡಿದೆ.
ಸಂದೀಪ್ಕುಮಾರ್ ರೈರವರು ಆರ್.ಎನ್.ಎಸ್. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇನ್ಫರ್ಮೇಷನ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಡಾ. ಸುರೇಶ್. ಎಲ್ರವರ ಮಾರ್ಗದರ್ಶನದಲ್ಲಿ ‘ಸ್ಯಾಟಲೈಟ್ ಇಮೇಜ್ ಕ್ಲಾಸಿಫ಼ಿಕೇಷನ್ ಯೂಸಿಂಗ್ ಎನ್ಹ್ಯಾನ್ಸ್ಡ್ ಮೆಶಿನ್ ಲರ್ನಿಂಗ್ ಟೆಕ್ನಿಕ್ಸ್’ ಎಂಬ ಮಹಾ ಪ್ರಬಂಧವನ್ನು ಮಂಡಿಸಿದ್ದರು. ಇವರು ಕಡಬ ತಾಲ್ಲೂಕಿನ ಪುಣ್ಚಪ್ಪಾಡಿ ಗ್ರಾಮದ ನಡುಮನೆಯ ದಿ.ಸುಬ್ಬಣ್ಣರೈ ಮತ್ತು ಜಲಜಾಕ್ಷಿ ರೈರವರ ಪುತ್ರ.