ಕರ್ನಾಟಕದ ಕರಾವಳಿ ಜಿಲ್ಲೆಗಳ ಸಮುದ್ರಕ್ಕೆ ಹತ್ತಿರವಿರುವ ಪ್ರದೇಶಗಳಲ್ಲಿ ಸಮುದ್ರ ಕೊರತೆಗಳು ವಿಪರೀತವಾಗಿದ್ದು ಈ ಬಗ್ಗೆ ಸಂತಾಕ್ರೂಸ್ ಪೂರ್ವ ಬಿಲ್ಲವ ಭವನದ ಸಭಾಗೃಹದಲ್ಲಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ಪತ್ರಿಕಾ ಗೋಷ್ಠಿ ನಡೆಸಲಾಯಿತು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷರಾದ ಎಲ್ ವಿ ಅಮೀನ್ ಅವರು ಕರಾವಳಿಯ ಕಡಲ ತೀರದ ಜನಸಾಮಾನ್ಯರ ರಕ್ಷಣೆ ಹಾಗೂ ಅವರ ಆಸ್ತಿ ಪಾಸ್ತಿ ರಕ್ಷಣೆಗೆ ಈ ತನಕ ಶಾಶ್ವತ ಪರಿಹಾರ ಸಿಗಲಿಲ್ಲ. ಸರಕಾರವು ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದರೂ ಅದಕ್ಕೆ ಶಾಶ್ವತ ಪರಿಹಾರ ಸಿಗಲಿಲ್ಲ. ಆದ್ದರಿಂದ ನಮ್ಮ ಸಮಿತಿಯು ಸರಕಾರಕ್ಕೆ ಈಗಾಗಲೇ ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಸರಕಾರಕ್ಕೆ ಹಲವಾರು ಮಾರ್ಗದರ್ಶಕ ಸೂಚನೆಗಳನ್ನು ನೀಡಲು ಮನವಿಗಳನ್ನು ಸಿದ್ಧಪಡಿಸಿದೆ. ಮಳೆಯ ಸಂದರ್ಭದಲ್ಲಿ ನಮ್ಮ ಜಿಲ್ಲೆಯಲ್ಲಿ ಕಡಲು ಕೊರತೆ ಕಂಡುಬಂದಿದ್ದು ಅದಕ್ಕೆ ಸರಕಾರ ಶೀಘ್ರವಾಗಿ ಕ್ರಮ ಕೈಗೊಳ್ಳಬೇಕು. ಪ್ರತಿ ವರ್ಷ ಸರಕಾರ ಕೋಟಿಗಟ್ಟಲೆ ರೂಪಾಯಿಯನ್ನು ಖರ್ಚು ಮಾಡಿ ತಡೆಗೋಡೆ ಹಾಕುವುದಕ್ಕಿಂತ ಭದ್ರವಾದ ಕಾಂಕ್ರೀಟ್ ಗೋಡೆ ನಿರ್ಮಾಣದಿಂದ ಒಮ್ಮೆಯೇ ಕಡಲು ಕೊರೆತದ ಸಮಸ್ಯೆ ಪರಿಹಾರವಾಗುವುದಲ್ಲದೆ ಅಲ್ಲಿನ ಜನರು ಮಳೆಗಾಲದಲ್ಲಿ ರಾತ್ರಿ ನಿದ್ದೆ ಮಾಡಿಯಾರು. ಈ ಸಮಸ್ಯೆಯಿಂದಾಗಿ ನಮ್ಮ ಕರಾವಳಿಯ ಹೆಚ್ಚಿನ ಜನರು ರಾತ್ರಿ ನಿದ್ದೆ ಮಾಡೋದಿಲ್ಲ. ಪರಿಸರ ಪ್ರೇಮಿ ಸಮಿತಿ ಜಿಲ್ಲೆಯ ಅಭಿವೃದ್ಧಿಗಾಗಿ ಸರ್ಕಾರದ ಮೂಲಕ ಹಲವಾರು ಮಹತ್ತರ ಯೋಜನೆಗಳನ್ನು ಜನರಿಗೆ ತಲುಪಿಸಿದೆ ಕಡಲ್ ಕೊರತೆಯ ಬಗ್ಗೆ ಸರಕಾರ ಕ್ರಮ ಕೈಗೊಳ್ಳಬೇಕು ಎಂದರು .
ಪತ್ರಕರ್ತ ದಯಾಸಾಗರ ಚೌಟ ಅವರು ಕರಾವಳಿಯ ಕಡಲ್ಕೊರೆತ ಹಾಗೂ ಜನಸಾಮಾನಯ ಸಮಸ್ಯೆ ಬಗ್ಗೆ ವಿವರಿಸಿದರು.
ಸಮಿತಿಯ ಉಪಾಧ್ಯಕ್ಷ ನಿತ್ಯಾನಂದ ಡಿ, ಕೋಟ್ಯಾನ್ ಅವರು ಪತ್ರಿಕಾ ಗೋಷ್ಠಿ ಉದ್ದೇಶದ ಬಗ್ಗೆ ತಿಳಿಸಿದರು.
ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಸಾಲ್ಯಾನ್ ಮುಂಡ್ಕೂರು ಅವರು ವಂದನಾರ್ಪಣೆ ಮಾಡಿದರು. ಸಭೆಯಲ್ಲಿ ಬಂಟರ ಸಂಘದ ಉನ್ನತ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಸಿಎ. ಐ. ಆರ್. ಶೆಟ್ಟಿ, ದೇವಾಡಿಗ ಮಹಾ ಮಂಡಳದ ಅಧ್ಯಕ್ಷರಾದ ಧರ್ಮಪಾಲ ಯು ದೇವಾಡಿಗ, ಕರ್ನಾಟಕ ವಿಶ್ವಕರ್ಮ ಅಸೋಷಿಯೇಶನ್ನಿನ ಅಧ್ಯಕ್ಷ ಸದಾನಂದ ಆಚಾರ್ಯ, ಮಾಜಿ ಅಧ್ಯಕ್ಷ ಜಿ ಟಿ. ಆಚಾರ್ಯ, ತೀಯಾ ಸಮಾಜ ಮುಂಬಯಿಯ ಮಾಜಿ ಅಧ್ಯಕ್ಷ ಚಂದ್ರಶೇಖರ ಬೆಳ್ಚಡ, ಸಾಫಲ್ಯ ಸೇವಾ ಸಂಘದ ಅಧ್ಯಕ್ಷರಾದ ಶ್ರೀನಿವಾಸ ಸಾಫಲ್ಯ, ಭಂಡಾರಿ ಸೇವಾ ಸಮಿತಿಯ ಮಾಜಿ ಅಧ್ಯಕ್ಷ ನ್ಯಾ, ಅರ್. ಎಂ. ಭಂಡಾರಿ, ಕುಲಾಲ ಸಂಘ ಮುಂಬಯಿಯ ಮಾಜಿ ಅಧ್ಯಕ್ಷರುಗಳಾದ ದೇವದಾಸ ಕುಲಾಲ್ ಮತ್ತು ಗಿರೀಶ್ ಬಿ. ಸಾಲ್ಯಾನ್, ವಿದ್ಯಾದಾಯಿನಿ ಸಭಾದ ಗೌರವ ಪ್ರಧಾನ ಕಾರ್ಯದರ್ಶಿ ಚಿತ್ರಾಪು ಕೆ. ಎಂ. ಕೋಟ್ಯಾನ್, ಗಾಣಿಗ ಸಮಾಜದ ಗೌರವ ಅಧ್ಯಕ್ಷ ರಾಮಚಂದ್ರ ಗಾಣಿಗ, ಗಣೇಶ್ ಶೆಟ್ಟಿ, ಪರಿಸರ ಪ್ರೇಮಿ ಸಮಿತಿಯ ಪದಾಧಿಕಾರಿಗಳಾದ ಸಂಜೀವ ಪೂಜಾರಿ ತೋನ್ಸೆ, ಹ್ಯಾರಿ ಸಿಕ್ವೇರಾ, ರಾಕೇಶ್ ಭಂಡಾರಿ . ಜಿತೇಂದ್ರ ಜಿತೇಂದ್ರ ಗೌಡ ಮೊದಲಾದವರು ಉಪಸ್ಥಿತರಿದ್ದರು.
ಮುಂಬಯಿಯ ಮೆರಿನ್ ಡ್ರೈವ್ ಮಾದರಿಯಲ್ಲಿ ನೆಲಮಟ್ಟದಿಂದ ಗೋಡೆ ನಿರ್ಮಿಸಬೇಕು:
ತೋನ್ಸೆ ಜಯಕೃಷ್ಣ ಶೆಟ್ಟಿ
ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಶೆಟ್ಟಿಯವರು ಮಾತನಾಡುತ್ತಾ ಈ ವರ್ಷ ನಮ್ಮ ಜಿಲ್ಲೆಗಳ ಕರಾವಳಿ ಪ್ರದೇಶಗಳಲ್ಲಿ ಸಮುದ್ರ ಕೊರತೆಗಳು ವಿಪರೀತವಾಗಿದ್ದು ಹಲವಾರು ಜೀವ ಹಾನಿಯಾಗಿದೆ. ಮಾತ್ರವಲ್ಲದೆ ಹಲವರ ಸಂಪತ್ತು ಕೂಡ ನಾಶವಾಗಿದೆ. ಮುಂಬಯಿಯ ಮೆರಿನ್ ಡ್ರೈವ್ ಮಾದರಿಯಲ್ಲಿ ನೆಲಮಟ್ಟದಿಂದ 8 ಅಡಿ ಆಳಕ್ಕೆ ಕಾಂಕ್ರೀಟ್ ಗೋಡೆ ನಿರ್ಮಿಸಬೇಕು. ಅದು ಕೂಡ ಬಲಿಷ್ಠವಾಗಿರಬೇಕು. ಕಳೆದ ಸುಮಾರು 40 ವರ್ಷಗಳಿಂದ ಇಷ್ಟು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸರ್ಕಾರವು ತಡೆ ಗೋಡೆ ಮಾಡಿ ಕಡಲ ಕೊರೆತ ತಡೆಯುವ ಪ್ರಯತ್ನ ಮಾಡಿದೆ. ಆದರೂ ಪ್ರತಿ ಮಳೆಗಾಲದಲ್ಲಿ ಕರಾವಳಿಯಲ್ಲಿ ಕಷ್ಟ ನಷ್ಟಗಳು ಕಡಲ ಕೊರೆತದಿಂದ ಉಂಟಾಗುತ್ತಿದೆ. ಆಗ ಮಾತ್ರ ಸಮುದ್ರ ಕೊರತೆಯನ್ನು ತಡೆಯಲು ಸಾಧ್ಯ. ಈ ಬಗ್ಗೆ ಸರಕಾರಕ್ಕೆ ಈಗಾಗಲೇ ಇ-ಮೇಲ್ ಮೂಲಕ ಮನವಿ ಸಲ್ಲಿಸಿದ್ದು ಮುಂದಿನ ವಾರ ನಾವು ಸಂಮಂಧಪಟ್ಟವರನ್ನು ಸ್ವತ: ಭೇಟಿಯಾಗಿ ಸಮಸ್ಯೆಯನ್ನು ಬಗೆಯರಿಸುವ ಬಗ್ಗೆ ಅವರನ್ನು ಒತ್ತಯಿಸಲಿದ್ದೇವೆ. ಅಲ್ಲದೆ ಈ ಸಮಸ್ಯೆಯನ್ನು ರಾಜ್ಯ ಹಾಗೂ ಕೇಂದ್ರ ಸರಕಾರದ ಗಮನಕ್ಕೆ ತರುವ ಪ್ರಯತ್ನವನ್ನು ಮಾಡಲಿದ್ದೇವೆ. ಕರಾವಳಿ ಪ್ರದೇಶದಲ್ಲಿ ಹೆಚ್ಚಾಗಿ ಮೊಗವೀರ ಬಾಂಧವರು ವಾಸಿಸುತ್ತಿದ್ದು ಅವರ ಈ ಸಮಸ್ಯೆಯನ್ನು ನಮ್ಮ ಸಮಿತಿಯ ಮೂಲಕ ಸರಕಾರದ ಗಮನಕ್ಕೆ ತಂದು ಅದನ್ನು ನಿವಾರಿಸಲು ಕಾಂಕ್ರೀಟ್ ಗೋಡೆಯನ್ನು ನಿರ್ಮಿಸಲು ವಿನಂತಿಸುತ್ತೇವೆ. ಮುಖ್ಯಮಂತ್ರಿಯವರಿಗೆ ಕೂಡ ಈ ಬಗ್ಗೆ ಮನವಿಯನ್ನು ನೀಡಿದ್ದು ಈ ಸಮಸ್ಯೆ ಆದಷ್ಟು ಬೇಗನೆ ಪರಿಹಾರ ಆಗಬೇಕಾಗಿದೆ. ಇದಲ್ಲದೆ ನಮ್ಮ ಜಿಲ್ಲೆಗೆ ಬೇರೆಬೇರೆ ಪ್ರದೇಶದಿಂದ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ಮಳೆಗಾಲದಲ್ಲಿ ಅನೇಕ ಸಾವು ನೋವುಗಳು ನಮ್ಮ ಜಿಲ್ಲೆಯಲ್ಲಿ ಆಗುತ್ತಿ್ದ್ದು, ಮುಖ್ಯವಾಗಿ ಮಳೆಗಾಲದಲ್ಲಿ ಕರಾವಳಿಯಲ್ಲಿ ಕೋಷ್ಟಲ್ ಗಾರ್ಡ್ ನೇಮಿಸಬೇಕಾಗಿದೆ. ಜೀವ ರಕ್ಷಕ ಕೋಷ್ಟಲ್ ಗಾರ್ಡ್ ಅಳವಡಿಸಬೇಕಾಗಿದೆ. ಆಕಸ್ಮಿತವಾಗಿ ಮುಳುಗಡೆಯಾದಲ್ಲಿ ವಿದ್ಯಾರ್ಥಿಗಳು ಅವಘಡದಿಂದ ಮುಳುಗಿದ್ದಲ್ಲಿ ಕೂಡಲೇ ಸಂಬಂಧಪಟ್ಟ ರಕ್ಷಣಾ ವ್ಯವಸ್ಥೆಗೆ ಸೂಚನೆ ನೀಡುವಂತಹ ವ್ಯವಸ್ಥೆ ನಮ್ಮ ಕರಾವಳಿಗೆ ಆಗಬೇಕಾಗಿದೆ, ಕರಾವಳಿ ಪ್ರದೇಶದ ಈ ಸಮಸ್ಯೆಯು ಮಾಧ್ಯಮದ ಮೂಲಕ ಸರಕಾರದ ಪ್ರಮುಖರಿಗೆ ತಲಪುದರಿಂದ ಸಮಸ್ಯೆ ಶೀಘ್ರವಾಗಿ ಪರಿಹಾರ ಗೊಳ್ಳಲಿ ಎಂದರು.
Next Article ಬಂಟರ ಸಂಘ ಸಿದ್ದಕಟ್ಟೆ ವಲಯ : ಕೆಸರ್ಡ್ ಒಂಜಿ ದಿನ