ವಿದ್ಯಾಗಿರಿ( ಮೂಡುಬಿದಿರೆ): ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ವಿಭಾಗದ ಆಹಾರ ವಿಜ್ಞಾನ ಮತ್ತು ಪೆÇೀಷಣಾ ವಿಭಾಗವು ಆಮ್ವೇ ಗ್ಲೋಬಲ್ ಸರ್ವೀಸ್ ಇಂಡಿಯಾದ ಜೊತೆ ಶೈಕ್ಷಣಿಕ ಒಡಂಬಡಿಕೆ ಮಾಡಿಕೊಂಡಿದೆ. ಆಮ್ವೇ ಕಂಪನಿಯ ವಿವಿಧ ಸಂಶೋಧನಾ ಕ್ರಮಗಳನ್ನು ಬೆಂಬಲಿಸಲು ಹಾಗೂ ಪೌಷ್ಟಿಕಾಂಶ, ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿಯ ವೈಜ್ಞಾನಿಕ
ಸಂಶೋಧನೆ ಕುರಿತು ವಿಶ್ವಾಸ ಹೆಚ್ಚಿಸುವ ಉದ್ದೇಶವಾಗಿದೆ.
ಆಮ್ವೇ ಕಂಪನಿಯ ನಿರ್ದೇಶಕ ಡಾ. ಶ್ಯಾಮ ರಾಮಕೃಷ್ಣನ್ ಹಾಗೂ ಹಿರಿಯ ವ್ಯವಸ್ಥಾಪಕ ಡಾ. ಪಳನಿಯಮ್ಮನ್ ದೊರೈರಾಜ್ ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಪ್ರಾಂಶುಪಾಲ ಡಾ. ಕುರಿಯನ್ ಹಾಗೂ ವಿಭಾಗದ ಮುಖ್ಯಸ್ಥೆ ಡಾ.ಅರ್ಚನ ಪ್ರಭಾತ್ ಇದ್ದರು.