ಬಂಟರ ಸಂಘ, ವಾಮದ ಪದವು ವಲಯದ ವತಿಯಿಂದ ‘ಪದವುಡು ಆಟಿದ ಕೂಟ’ ಅದ್ದೂರಿ ಕಾರ್ಯಕ್ರಮ 23-07-2023ರ ರವಿವಾರ ನಡೆಯಿತು. ವಾಮದಪದವಿನ ಆಲದಪದವಿನ ರಾಯಿ-ಮೂರ್ಜೆ ರಸ್ತೆ ಬಳಿಯ ಸಂಘದ ನಿವೇಶನದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಕಾರ್ಯಕ್ರಮ ಉದ್ಘಾಟಿಸಿದರು. ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಡಾ. ಎಂ. ಮೋಹನ್ ಆಳ್ವಾ ಅಧ್ಯಕ್ಷತೆ ವಹಿಸಿದರು. ಮಾಣಿ ವಲಯ ಬಂಟರ ಸಂಘದ ಉಪಾಧ್ಯಕ್ಷರು, ಕವಯತ್ರಿ ಹಾಗೂ ಬರಹಗಾರ್ತಿ ವಿಂದ್ಯಾ ಎಸ್. ರೈಯವರು ಮುಖ್ಯ ಭಾಷಣಕಾರರಾಗಿ ಉಪನ್ಯಾಸ ನೀಡಿದರು.
ಮಾಜಿ ಸಚಿವ ಬಿ, ರಮಾನಾಥ ರೈ, ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಯ ಸಂಚಾಲಕ ಸೀತಾರಾಮ್ ರೈ ಸವಣೂರು, ಬೆಳ್ತಂಗಡಿಯ ವಿಜಯ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಜಯರಾಮ್ ಶೆಟ್ಟಿ, ವಾಮದಪದವು ಟಿಎಸ್ಎನ್ ಇಂಡಸ್ಟ್ರೀಸ್ ಮಾಲಕ ಧೀರಜ್ ನಾಯ್ಕ್, ಬಂಟ್ವಾಳ ತಾಲೂಕು ಬಂಟರ ಸಂಘದ ಕಾರ್ಯದರ್ಶಿ ಜಗನ್ನಾಥ ಚೌಟ ಬದಿಗುಡ್ಡೆ, ಕೋಶಾಧಿಕಾರಿ ಲೋಕೇಶ್ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ರಮಾ ಎಸ್. ಭಂಡಾರಿ, ಮಾಜಿ ಅಧ್ಯಕ್ಷ ಕಿರಣ್ ಹೆಗ್ಡೆ, ಕಾವಳಕಟ್ಟೆ ವಲಯ ಬಂಟರ ಸಂಘದ ಗೌರವಾಧ್ಯಕ್ಷ ಪ್ರಮೋದ್ ಕುಮಾರ್ ರೈ ಕಾಡಬೆಟ್ಟು, ತಾಲೂಕು ಬಂಟರ ಸಂಘದ ಯುವ ಘಟಕದ ಅಧ್ಯಕ್ಷ ನಿಶಾನ್ ಆಳ್ವ ಮುಂತಾದವರು ಅತಿಥಿಗಳಾಗಿ ಭಾಗವಹಿಸಿದರು.
ವಲಯದ ಹಿರಿಯ ಬಂಟ ಬಂಧುಗಳಿಗೆ ಸನ್ಮಾನ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಮಕ್ಕಳಿಂದ ಹಾಡು, ನೃತ್ಯ, ಯಕ್ಷಗಾನದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.