ಮುಂಡ್ಕೂರು ಜಾರಿಗೆ ಕಟ್ಟೆ ನಿವಾಸಿ ತಾಳಿಪಾಳಿ ಮೂಡ್ರಗುತ್ತು ಲಯನ್ ರಮೇಶ್ ಶೆಟ್ಟಿ ಅವರು ನಿಧನ ಹೊಂದಿದರು. ಇವರು ಪ್ರಗತಿಪರ ಕೃಷಿಕರು ಆಗಿದ್ದು, ರೈಸ್ ಮಿಲ್ ಉದ್ಯಮದಿಂದ ಚಿರಪರಿಚಿತರಾಗಿ ಎಲ್ಲರ ಒಡನಾಡಿಗಳಾಗಿ ಬಾಳಿ ಬದುಕಿದವರು. ಮುಂಡ್ಕೂರು ಕಡಂದಲೆ ಲಯನ್ಸ್ ಕ್ಲಬ್ಬಿನ ಅಧ್ಯಕ್ಷರಾಗಿ ಲಯನ್ಸ್ ವಲಯದಲ್ಲಿ ಮನೆ ಮಾತಾಗಿ ಸೇವಾ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಎಲ್ಲರ ಮನ ಗೆದ್ದವರು. ಎಲ್ಲರ ಪ್ರೀತಿ ವಿಶ್ವಾಸವನ್ನು ಗಳಿಸಿಕೊಂಡವರು.
ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕರಾಗಿದ್ದ ರಮೇಶ್ ಶೆಟ್ಟಿಯವರು ಸಕ್ರಿಯವಾಗಿ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರಕ್ಕೆ ಕೊಡುಗೆಯನ್ನು ನೀಡಿ ಧನ್ಯತೆಯನ್ನು ಕಂಡವರು. ಇತ್ತೀಚೆಗೆ ತಾಳಿಪಾಡಿ ಮೂಡ್ರಗುತ್ತಿನ ಕಾರಣಿಕ ದೈವಗಳ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವದ ಧಾರ್ಮಿಕ ಪ್ರಕ್ರಿಯೆಯಲ್ಲಿ ಮುಂಚೂಣಿಯಲ್ಲಿ ನಿಂತು ಸೇವೆಯನ್ನು ಮಾಡಿ ಧರ್ಮ ದೈವಗಳ ಶ್ರೀರಕ್ಷೆಗೆ ಪಾತ್ರರಾದವರು. ಊರಿಗೆ ಊರೇ ಇವರನ್ನು ಕೊಂಡಾಡುವ ಸರಳ ಸಜ್ಜನಿಕೆಯ ಪ್ರತಿ ಮೂರ್ತಿಯಾಗಿ, ಪ್ರಾಮಾಣಿಕರಾಗಿ ಸಮಾಜದಲ್ಲಿ ಗುರುತಿಸಿಕೊಂಡವರು. ಇವರ ನಿಧನದಿಂದ ಸಮಾಜಕ್ಕೆ ಅಪಾರ ನಷ್ಟವಾಗಿದೆ. ಅವರನ್ನಗಲಿದ ಅವರ ಪತ್ನಿ ಅವರ ಮಕ್ಕಳು, ಮೊಮ್ಮಕ್ಕಳು ಅಳಿಯ, ಕುಟುಂಬಿಕರು ಹಾಗೂ ಬಂಧುಗಳು ದುಖಿತರಾಗಿದ್ದಾರೆ. ಅಗಲಿದ ಅವರ ಆತ್ಮವು ಪರಮಾತ್ಮನಲ್ಲಿ ಲೀನವಾಗಲಿ. ಎಲ್ಲರಿಗೂ ದುಃಖವನ್ನು ಸಹಿಸುವ ಶಕ್ತಿಯನ್ನು ಪರಮಾತ್ಮ ಕರುಣಿಸಲಿ ಎಂದು ಪ್ರಾರ್ಥಿಸಿ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸುತ್ತಿದ್ದೇವೆ.