ಸೃಜನಾ ಮುಂಬಯಿ ಕನ್ನಡ ಲೇಖಕಿಯರ ಬಳಗದ ವಿಚಾರಗೋಷ್ಠಿಯು ಮೈಸೂರು ಅಸೋಸಿಯೇಷನ್ ನ ಮೊದಲ ಮಹಡಿಯ ಕಿರು ಸಭಾಗೃಹ, ಬಾವುದಾಜಿ ರಸ್ತೆ, ಮಾಟುಂಗಾ ಪೂರ್ವ ಮುಂಬಯಿ ಇಲ್ಲಿ ಜೂನ್ 10 ರಂದು ಶನಿವಾರ ಸಂಜೆ 4 ಗಂಟೆಯಿಂದ ನಡೆಯಲಿದೆ. ಅಂದು ಮುಖ್ಯ ಅತಿಥಿಯಾಗಿ ಬಹುಭಾಷಾ ಪಂಡಿತ ನಾಗರಹಳ್ಳಿ ಪ್ರಹ್ಲಾದಾಚಾರ್ಯರು ಆಗಮಿಸಲಿದ್ದಾರೆ.
ಕಥಾ ಸಾಹಿತ್ಯದಲ್ಲಿ ಮಹಿಳಾ ಚಿತ್ರಣ ಎಂಬ ವಿಚಾರಗೋಷ್ಠಿಯ ವಿಷಯ ಮಂಡನೆಗೆ ಇಂಗ್ಲಿಷ್ ಕಥೆಗಳ ಬಗ್ಗೆ ಶ್ಯಾಮಲಾ ಮಾಧವ ಸಾಹಿತಿ, ಖ್ಯಾತ ಅನುವಾದಕಿ, ತಮ್ಮ ಅನುಭವದ ಸಾರವನ್ನು ಹಂಚಿಕೊಳ್ಳಲಿದ್ದಾರೆ. ಕನ್ನಡ ಕಥೆಗಳಲ್ಲಿನ ಒಳ ಹೊರನೋಟದ ಬಗ್ಗೆ ಸಾ. ದಯಾ ಕವಿ, ಸಾಹಿತಿ, ರಂಗನಿರ್ದೇಶಕ, ನಟ ಮಾತನಾಡಲಿದ್ದಾರೆ.
ಮರಾಠಿ ಕಥೆಗಳಲ್ಲಿನ ವಿಚಾರ ವಿಷಯಗಳನ್ನು ಕನ್ನಡ ಮರಾಠಿ ಸಾಹಿತಿ, ಖ್ಯಾತ ಅನುವಾದಕಿ ಅಕ್ಷತಾ ಪ್ರಸಾದ್ ದೇಶಪಾಂಡೆ ವಿಷಯ ಮಂಡಿಸಲಿದ್ದಾರೆ. ಸಾಹಿತ್ಯ ಹಾಗೂ ಕನ್ನಡ ಅಭಿಮಾನಿಗಳಿಗೆ ಮುಂಬಯಿ ಕನ್ನಡ ಲೇಖಕಿಯರ ಬಳಗ ಸೃಜನಾ ಆದರದ ಸ್ವಾಗತ ಕೋರಿದೆ.