ಕರಾವಳಿ ಲೇಖಕಿಯರ ವಾಚಕಿಯರ ಸಂಘ ಕೊಡಮಾಡುವ ಸಂಜೀವಿನಿ ನಾರಾಯಣ ಅಡ್ಯಂತಾಯ ಸ್ಮರಣಾರ್ಥ ‘ಸಂಜೀವಿನಿ ಪ್ರಶಸ್ತಿ’ ಗೆ ಲೀಲಾವತಿ ಆಚಾರ್ಯ ಪೈಕ ಗುತ್ತಿಗಾರು ಅವರನ್ನು ಆಯ್ಕೆ ಮಾಡಲಾಗಿದೆ. ಬದುಕಿನ ಏಳು ಬೀಳುಗಳನ್ನು ಆತ್ಮಸ್ಟೈರ್ಯದಿಂದ ಎದುರಿಸಿ ಮಕ್ಕಳಿಗೆ ಒಳ್ಳೆಯ ಸಂಸ್ಕಾರ, ನೆಲೆಯನ್ನು ಕಂಡುಕೊಳ್ಳುವಲ್ಲಿ ಶ್ರಮಿಸಿ ಕುಟುಂಬದ ಸಂಜೀವಿನಿಯಾಗುವ ಅಮ್ಮಂದಿರನ್ನು ಗುರುತಿಸಿ ನೀಡುವ ಈ ಪುರಸ್ಕಾರದ ಪ್ರಶಸ್ತಿ ಪ್ರಧಾನ ಸಮಾರಂಭವು ಎ. 27ರಂದು ಅಪರಾಹ್ನ 2.30ಕ್ಕೆ ಉರ್ವಸ್ಟೋರ್ ನ ಅಂಬೇಡ್ಕರ್ ಭವನದಲ್ಲಿ ನೇರವೇರಲಿದೆ ಎಂದು ಸಂಘದ ಪ್ರಕಟಣೆಯಲ್ಲಿ ರೂಪಕಲಾ ಆಳ್ವರವರು ತಿಳಿಸಿದ್ದಾರೆ.