ಪುಣೆಯ ಖ್ಯಾತ ಮಕ್ಕಳ ತಜ್ಞ ಡಾ. ಸುಧಾಕರ್ ಶೆಟ್ಟಿಯವರಿಗೆ ಪ್ರತಿಷ್ಠಿತ ಗೌರವ ಪುರಸ್ಕಾರ ಅವಾರ್ಡ್
ಪುಣೆಯ ಖ್ಯಾತ ಮಕ್ಕಳ ತಜ್ಞ ಡಾ. ಸುಧಾಕರ್ ಶೆಟ್ಟಿಯವರಿಗೆ ಖಾನ್ ಎಜ್ಯುಕೇಶನ್ ಫೌಂಡೇಶನ್ ವತಿಯಿಂದ ಪ್ರತಿಷ್ಠಿತ ಗೌರವ ಪುರಸ್ಕಾರ ಪ್ರಶಸ್ತಿ 2021-22 ಲಭಿಸಿದೆ. ಖಾನ್ ಎಜ್ಯುಕೇಶನ್ ಫೌಂಡೇಶನ್ನ ವಾರ್ಷಿಕ ಪ್ರಶಸ್ತಿಗಳಲ್ಲಿ 2021-22ಸಾಲಿನ ಪ್ರತಿಷ್ಠಿತ ಗೌರವ ಪುರಸ್ಕಾರ ಅವಾರ್ಡನ್ನು ಖ್ಯಾತ ಸಮಾಜಸೇವಕ, ಕೋವಿಡ್ ವಾರಿಯರ್ ಡಾ. ಸುಧಾಕರ್ ಶೆಟ್ಟಿಯವರಿಗೆ ಮೌಲನಾ ಅಬ್ದುಲ್ ಕಲಾಂ ಅಜಾದ್ ಮೆಮೋರಿಯಲ್ ಹಾಲ್, ಪುಣೆ ಮುನ್ಸಿಪಾಲ್ ಕಾರ್ಪೊರೇಷನ್ನಲ್ಲಿ ಗಣ್ಯರ ಸಮ್ಮುಖದಲ್ಲಿ ಪ್ರದಾನ ಮಾಡಲಾಯಿತು. ಪುಣೆಯ ಬೇಬಿ ಫ್ರೆಂಡ್ಸ್ ಮಕ್ಕಳ ಆಸ್ಪತ್ರೆಯ ಮಾಲಕರಾಗಿರುವ ಡಾ. ಸುಧಾಕರ ಶೆಟ್ಟಿಯವರು ಕಟೀಲ್ನಲ್ಲಿ ಸಂಚಾರಿ ಮಕ್ಕಳ ಕ್ಲಿನಿಕ್ ಅನ್ನು ಆರಂಭಿಸುವ ಯೋಜನೆ ಹೊಂದಿದ್ದು, ಪುಣೆಯಲ್ಲಿ ಪೊಲೀಸ್ ಆಸ್ಪತ್ರೆ, ಎಸ್ಆರ್ಪಿಎಫ್ ಹಾಸ್ಪಿಟಲ್, ಆರ್ಮಿಯಿಂದ ನಡೆಸಲ್ಪಡುವ ಕಂಟೋನ್ಮೆಂಟ್ ಆಸ್ಪತ್ರೆಗಳಲ್ಲಿ ಕೂಡಾ ಗೌರವ ತಜ್ಞರಾಗಿ ಕರ್ತವ್ಯ ನಿರತರಾಗಿದ್ದಾರೆ. ಸತತ 3 ವರ್ಷಗಳ ಕಾಲ 10 ಸಾವಿರಕ್ಕೂ ಮಿಕ್ಕಿ ಕೋವಿಡ್ ರೋಗಿಗಗಳಿಗೆ ಡಾ. ಸುಧಾಕರ ಶೆಟ್ಟಿ ಮತ್ತವರ ಅನುಭವಿ ತಜ್ಞರ ತಂಡವು ಸೂಕ್ತ ಚಿಕಿತ್ಸೆ ನೀಡಿ ಗುಣಪಡಿಸಿದ ದಾಖಲೆ ಹೊಂದಿದ್ದಾರೆ. ಇದರಲ್ಲಿ 1,500 ಮಂದಿ ಪುಣೆ, ಮಹಾರಾಷ್ಟ್ರದಲ್ಲಿರುವ ದಕ್ಷಿಣ ಕನ್ನಡ ಮೂಲದವರು ಎಂಬುವುದಿಲ್ಲಿ ಉಲ್ಲೇಖನೀಯವಾಗಿದೆ.
ಡಾ. ಸುಧಾಕರ ಶೆಟ್ಟಿ ಮತ್ತವರ ಕಂಟೋನ್ಮೆಂಟ್ ಹಾಸ್ಪಿಟಲ್ ತಂಡಕ್ಕೆ ಕೋವಿಡ್ ನಿರ್ವಹಣೆಯಲ್ಲಿ ತೋರಿದ ಅತ್ಯುತ್ತಮ ಸೇವೆಗಾಗಿ ಕೇಂದ್ರ ಸರಕಾರದ ರಕ್ಷಾ ಅವಾರ್ಡ್ ನ್ನು ರಕ್ಷಣಾ ಮಂತ್ರಿ ರಾಜ್ನಾಥ್ ಸಿಂಗ್ ಅವರು ನೀಡಿರುತ್ತಾರೆ.
ಕೋವಿಡ್ 19 ನಲ್ಲಿ ತೋರಿದ ವೈದ್ಯಕೀಯ ಸೇವೆಗಾಗಿ ಪುಣೆ ಕಂಟೋನ್ಮೆಂಟ್ ಬೋರ್ಡ್ ನ ಸರ್ಟಿಫಿಕೇಟ್ ಆಫ್ ಎಕ್ಸಲೆನ್ಸಿ ಫಾರ್ ಔಟ್ ಸ್ಟ್ಯಾಂಡಿಂಗ್ ವರ್ಕ್ ಇನ್ ಕೋವಿಡ್ 19 ಪೆಂಡೆಮಿಕ್ (2022) ಬಂದಿದೆ. ಕೋವಿಡ್ ವಾರಿಯರ್ (ಸೌರ್ತನ್ ಸ್ಟಾರ್) ಪ್ರಶಸ್ತಿಯ ಸೌರ್ತನ್ ಕಮಾಂಡ್ ಆಫ್ ಡಿಫೆನ್ಸಿ ಮಿನಿಸ್ಟ್ರಿಯಿಂದ ದೊರಕಿದೆ. ವೈದ್ಯಕೀಯ ಸಮಾಜ ಸೇವೆಗಾಗಿ ಡಾ. ಸುಧಾಕರ ಶೆಟ್ಟಿಯವರಿಗೆ ಕರ್ನಾಟಕ ಸರಕಾರದ ಪ್ರತಿಷ್ಠಿತ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ – 2022 ದೊರಕಿತ್ತು.
ಡಾ. ಸುಧಾಕರ ಶೆಟ್ಟಿಯವರ ಮಗ ಡಾ. ವೀರೆನ್ ಶೆಟ್ಟಿಯವರು ಹೋಮಿಯೋಪತಿಯಲ್ಲಿ ಎಂ. ಡಿ. ಪಿಡಿಯಾಟ್ರಿಕ್ ಪದವಿ ಪಡೆದಿದ್ದು, ಹೆಸರಾಂತ ಯುವ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.