ಬೈಂದೂರು-ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನ ಮೊಗೇರಿ ಗೋಪಾಲಕೃಷ್ಣ ಅಡಿಗ ರಂಗಮಂಟಪದಲ್ಲಿ ನಡೆದ ಕಾಲೇಜು ವಿಭಾಗದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಟೊರ್ಪೆಡೋಸ್ ಗೌತಮ್ ಶೆಟ್ಟಿ ಮಾತನಾಡಿ “ಯುವಕರು ಸಮಯ ಪಾಲನೆಯ ಮಹತ್ವವನ್ನು ಅರಿಯಬೇಕು. ಜೀವನದಲ್ಲಿ ಧನಾತ್ಮಕ ಚಿಂತನೆಯನ್ನು ಬೆಳೆಸಿಕೊಂಡು ಸೋಲು ಗೆಲುವು ಎರಡನ್ನು ಸಮಾನವಾಗಿ ಸ್ವೀಕರಿಸಿ ಜೀವನವನ್ನು ಮುನ್ನಡೆಸಬೇಕು” ಎಂದು ಹೇಳಿದರು. ಈ ಸಂದರ್ಭ ಬೈಂದೂರು ಅಂಜಲಿ ಹಾಸ್ಪಿಟಲ್ ನ ಡಾ.ಅಣ್ಣಪ್ಪ ಶೆಟ್ಟಿ, ಹರ್ಷ ಮಾಡರ್ನ್ ಡಯಾಗ್ನೊಸ್ಟಿಕ್ಸ್ ಸರ್ವಿಸಸ್ ಮಂಗಳೂರು ಆಡಳಿತ ನಿರ್ದೇಶಕರಾದ ಡಾ.ಪ್ರಿಯದರ್ಶಿನಿ, ಉಪ ಅರಣ್ಯಾಧಿಕಾರಿ ಶ್ರೀಧರ್.ಪಿ,ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತಿನ ಅಧ್ಯಕ್ಷ ಡಾ. ರವಿ ಶೆಟ್ಟಿ, ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಗಿರೀಶ್ ಬೈಂದೂರು, ಉಪ ಪ್ರಾಂಶುಪಾಲ ಶ್ರೀ ಪದ್ಮನಾಭ, ರಾಜ್ಯ ಮತ್ತು ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ವಿಜೇತ ಎಸ್.ಜೆ.ಕೈರಣ್ಣ ಹೊನ್ನಾವರ, ಪ್ರಾಂಶುಪಾಲರಾದ ಶ್ರೀ ಮಂಜುನಾಥ ನಾಯಕ್ ಉಪಸ್ಥಿತರಿದ್ದರು.