ಮುಂಬಯಿ (ಆರ್ ಬಿ ಐ ), ಅ.02: ಉಪನಗರ ಕಾಂದಿವಿಲಿ ಪಶ್ಚಿಮದಲ್ಲಿನ ಚಾರ್ಕೋಪ್ ಕನ್ನಡಿಗರ ಬಳಗದ ಉಪಾಧ್ಯಕ್ಷ, ಹಾಗೂ ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಸಕ್ರಿಯ ಕಾರ್ಯಕರ್ತ ಚಂದ್ರಶೇಖರ ಎಸ್.ಶೆಟ್ಟಿ ಅವರ ಮಾತೃಶೀ ಸುಶೀಲಾ ಶುಭಕರ ಶೆಟ್ಟಿ (86.) ಅಲ್ಪಕಾಲದ ಅಸೌಖ್ಯದಿಂದ ಇಂದು ಮಧ್ಯಾಹ್ನ ಉಡುಪಿ ಕೆಮ್ತೂರು ಅಲ್ಲಿನ ಸ್ವಗೃಹ ಶುಭ ನಿಲಯದಲ್ಲಿ ನಿಧನ ಹೊಂದಿದರು.
ಮೃತರು ಚಂದ್ರಶೇಖರ ಶೆಟ್ಟಿ ಸಹಿತ ಮೂವರು ಪುತ್ರರು, ಓರ್ವ ಸುಪುತ್ರಿ, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗ ಅಗಲಿರುತ್ತಾರೆ.
ಸುಶೀಲಾ ಅವರ ಅಗಲುವಿಕೆಗೆ ಚಾರ್ಕೋಪ್ ಕನ್ನಡಿಗರ ಬಳಗದ ಅಧ್ಯಕ್ಷ ಎಂ.ಕೃಷ್ಣ ಶೆಟ್ಟಿ, ಕಾರ್ಯದರ್ಶಿ ರಘುನಾಥ ಎನ್.ಶೆಟ್ಟಿ ಹಾಗೂ ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ನಿಟ್ಟೆ ಎಂ.ಜಿ ಶೆಟ್ಟಿ ಮತ್ತು ಉಭಯ ಸಂಸ್ಥೆಗಳ ಪಧಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರುಗಳು ವಿಶ್ವಸ್ಥರು ಸಂತಾಪ ಸೂಚಿಸಿದ್ದಾರೆ.