ದಿನಾಂಕ 10/09/2022 ರ ಶನಿವಾರ ಅಪರಾಹ್ನ 2 ಗಂಟೆಯಿಂದ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಲೋಕಾರ್ಪಣೆಗೊಳ್ಳಲಿರುವ ಶ್ರೇಷ್ಠ ಸಂಘಟಕರೂ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರ “ಸಾರ್ವಭೌಮ ಗ್ರಂಥ” ಬಿಡುಗಡೆ ಸಮಾರಂಭದ ಪೂರ್ವಭಾವಿ ಸಭೆ, ಬಂಟರ ಸಂಘ ಮುಂಬಯಿಯ ಸಮಾಜ ಕಲ್ಯಾಣ ಎನೆಕ್ಸ್ ಕಟ್ಟಡದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಐಕಳ ಹರೀಶ್ ಶೆಟ್ಟಿ, ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಗುರು ಜಿ ಎನ್ ಉಪಾಧ್ಯ, ಕರ್ನಾಟಕ ಮಲ್ಲದ ಸಂಪಾದಕರಾದ ಚಂದ್ರಶೇಖರ ಪಾಲೆತ್ತಾಡಿ, ಡಾ.ಪೂರ್ಣಿಮ ಶೆಟ್ಟಿ, ಅಶೋಕ್ ಪಕ್ಕಳ, ಕರ್ನೂರು ಮೋಹನ್ ರೈ ಮತ್ತು ಪತ್ರಕರ್ತರಾದ ದಿನೇಶ್ ಕುಲಾಲ್ ರವರು ಉಪಸ್ಥಿತರಿದ್ದರು.
Previous Articleಕುಂದಾಪುರ ವಕೀಲರ ಸಂಘದಿಂದ ಪ್ರತಿಭಟನೆ
Next Article ಸಕಲಕಲಾ ವಲ್ಲಭ ನ್ಯಾಯವಾದಿ ಯಂ ದಾಮೋದರ ಶೆಟ್ಟಿ