ಬನ್ನಾಡಿ ಗ್ರಾಮದ ಉಪ್ಲಾಡಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ 2022-25ರ ಸಾಲಿನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಇವರು ಆಯ್ಕೆಯಾಗಿದ್ದಾರೆ.
ವ್ಯವಸ್ಥಾಪನಾ ಸಮಿತಿಯ ಕಾರ್ಯದರ್ಶಿಯಾಗಿ ಪ್ರಭಾಕರ ಪೂಜಾರಿ ಉಪ್ಲಾಡಿ ಬಡಾಬೆಟ್ಟು, ಕೋಶಾಧಿಕಾರಿಯಾಗಿ ಉಪ್ಲಾಡಿ ಶ್ರೀಧರ್ ಆರ್ ಶೆಟ್ಟಿ ಹಾಗೂ ಸದಸ್ಯರಾಗಿ ಉಪ್ಲಾಡಿ ಗೋಪಾಲಕೃಷ್ಣ ಭಟ್, ಉಪ್ಲಾಡಿ ವೆಂಕಟರಮಣ ಭಟ್, ಶಿವಾನಂದ ನಾೈರಿ ಬಡಾಬೆಟ್ಟು, ದಿನೇಶ ತೆಂಕಬೆಟ್ಟು, ಚೈತ್ರಾ ಬಡಾಬೆಟ್ಟು ಮತ್ತು ಪಲ್ಲವಿ ಬಡಾಬೆಟ್ಟು ಇವರನ್ನು ಮುಂದಿನ 3 ವರ್ಷಗಳ ಅವಧಿಗೆ, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮದಂತೆ, ಸಹಾಯಕ ಆಯುಕ್ತರು (ಪ್ರಭಾರ), ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ, ಉಡುಪಿ ಜಿಲ್ಲೆ ಇವರು ಆದೇಶಿಸಿರುತ್ತಾರೆ.