ಬಂಟರ ಸಂಘ ಮುಂಬಯಿ ಪ್ರಾಯೋಜಿತ ಉನ್ನತ ಶಿಕ್ಷಣ ಸಂಸ್ಥೆಗಳಾದ ಅಣ್ಣಲೀಲಾ ಕಾಲೇಜು ಆಫ್ ಕಾಮರ್ಸ್ ಅಂಡ್ ಎಕನಾಮಿಕ್ಸ್ ಹಾಗೂ ಶೋಭಾ ಜಯರಾಮ್ ಶೆಟ್ಟಿ ಬಿಎಂಎಸ್ ಕಾಲೇಜು ಕುರ್ಲಾ ಇದಕ್ಕೆ ಶಿಕ್ಷಣ ಕ್ಷೇತ್ರದ ಪ್ರತಿಷ್ಠಿತ ನ್ಯಾಕ್ (NAAC) ಮಾನ್ಯತೆ ಯು ದೊರೆತಿದ್ದು ಇದರ ಅಂಗವಾಗಿ ಉನ್ನತ ಶಿಕ್ಷಣ ಸಮಿತಿಯ ಮಾಜಿ ಕಾರ್ಯಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿಯವರ ನೇತ್ರತ್ವದಲ್ಲಿ ಅಭಿನಂದನೆ ಹಾಗೂ ಶಿಕ್ಷಣ ಸಂಸ್ಥೆಯ ಶಿಕ್ಷಕ ವೃಂದದವರಿಗೆ ಸಂತೋಷಕೂಟವನ್ನು ನವಿ ಮುಂಬಯಿ ಪ್ರಸಿದ್ಧ ತಾರ ಹೋಟೆಲ್ ಕಂಟ್ರಿ ಇನ್ ಆಂಡ್ ಸೂಟ್ಸ್ ಬೈ ರೆಡಿಸನ್ ಇಲ್ಲಿ ಆಯೋಜಿಸಲಾಗಿತ್ತು. ಸಮಾರಂಭದ ಅಧ್ಯಕ್ಷತೆಯನ್ನು ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷ ಚಂದ್ರಹಾಸ ಕೆ ಶೆಟ್ಟಿ ಅವರು ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಮ್ಮ ಉದ್ದೇಶ ಒಂದು ಅತ್ತ್ಯುತ್ತಮ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯನ್ನು ಸಮಾಜಕ್ಕೆ ನೀಡಬೇಕು ಎಂಬುದಾಗಿದ್ದು ಹೊರತು ಹಣ ಮಾಡುವ ಉದ್ದೇಶವಿಲ್ಲ. ಕರ್ಮಭೂಮಿಯಾದ ಮುಂಬಯಿ ನಮಗೆ ತುಂಬಾ ಕೊಟ್ಟಿದೆ ನಾವು ಈ ನಾಡಿಗೆ ಏನನ್ನಾದರೂ ಕೊಡಬೇಕು ಎಂಬುದೇ ನಮ್ಮ ಉದ್ದೇಶವಾಗಿದೆ ಮುಂಬಯಿಯಲ್ಲಿ ಒಂದು ಉತ್ತಮ ಗುಣಮಟ್ಟವಾದ ಉನ್ನತ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಬೇಕು ಎಂಬ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಇದೀಗ ನಮ್ಮ ಶಿಕ್ಷಣ ಸಂಸ್ಥೆಗಳಿಗೆ ಉತ್ತಮ ಮ್ಯಾನತೆಯೂ ದೊರೆತಿದ್ದು ಇದಕ್ಕಾಗಿ ನಾನು ಈ ಸಂಸ್ಥೆಗಾಗಿ ಸೇವೆ ಸಲ್ಲಿಸಿದ ನಗ್ರಿಗುತ್ತು ವಿವೇಕ್ ಶೆಟ್ಟಿಯವರನ್ನು ಮಾಜಿ ಅಧ್ಯಕ್ಷರುಗಳು ಹಾಗೂ ಸಮಿತಿ ಯವರನ್ನು ವಿಶೇಷವಾಗಿ ಈ ಸಂಸ್ಥೆಯ ಸಿಬ್ಬಂದಿ ವರ್ಗವನ್ನು ಅಭಿನಂದಿಸುತ್ತೇವೆ. ಬಂಟರ ಸಂಘದಲ್ಲಿ ಸೇವೆ ಮಾಡುವ ನಾವೆಲ್ಲರೂ ಸಮಾಜ ಸೇವೆ ಮಾಡಬೇಕು ಎಂಬ ಉದ್ದೇಶದಿಂದಲೇ ಹೆಚ್ಚಿನ ಸಮಯವನ್ನು ವಿನಿಯೋಗಿಸುತ್ತೇವೆ. ಅದರಿಂದ ನಮಗೆ ಆತ್ಮತೃಪ್ತಿ ದೊರೆಯುತ್ತದೆ ಎಂದರು.
ಉನ್ನತ ಶಿಕ್ಷಣ ಸಮಿತಿಯ ಮಾಜಿ ಕಾರ್ಯಧ್ಯಕ್ಷ ಕಾರ್ಯಕ್ರಮದ ಸಂಯೋಜಕರಾದ ನಗ್ರಿಗುತ್ತು ವಿವೇಕ್ ಶೆಟ್ಟಿಯವರು ಮಾತನಾಡಿ, ನ್ಯಾಕ್ ಮಾನ್ಯತೆ ಪಡೆಯಲು ಕೈಗೊಂಡ ಸತತ ಪ್ರಯತ್ನಗಳ ಬಗ್ಗೆ ವಿವರಿಸಿದರು ಹಾಗೂ ಇದಕ್ಕಾಗಿ ಸಹಕರಿಸಿದ ನೌಕರ ವೃಂದ ಹಾಗೂ ಆಡಳಿತ ಸಮಿತಿಯನ್ನು ಅವರು ಅಭಿನಂದಿಸಿದರು. ಇನ್ನು ಮುಂದೆಯೂ ಈ ಕಾಲೇಜು ಮುಂಬಯಿಯಲ್ಲಿ ಒಂದು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿ ಬೆಳೆಯುವಲ್ಲಿ ಎಲ್ಲರ ಸಹಕಾರದ ಅಗತ್ಯವಿದೆ ಎಂದರು.
ಉನ್ನತ ಶಿಕ್ಷಣ ಸಮಿತಿಯ ಉಪ ಕಾರ್ಯಧ್ಯಕ ಕುತ್ಯಾರು ಕಿಶೋರ್ ಕುಮಾರ್ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಬಂಟರ ಸಂಘದ ನೇತೃತ್ವದ ಶಿಕ್ಷಣ ಸಂಸ್ಥೆಗಳು ಮಹಾನಗರದಲ್ಲಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿ ಬೆಳೆಯುವಲ್ಲಿ ಅದರ ನೌಕರ ವೃಂದ ಹಾಗೂ ಆಡಳಿತ ಸಮಿತಿಯವರ ಯೋಗದಾನ ತುಂಬಾ ಇದೆ ಇನ್ನು ಮುಂದೆಯೂ ನಮ್ಮ ಶಿಕ್ಷಣ ಸಂಸ್ಥೆಯು ಉತ್ತಮ ಶಿಕ್ಷಣ ನೀಡುವಲ್ಲಿ ಬೇಕಾದ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದರು.
ಪ್ರಾರಂಭದಲ್ಲಿ ನಗ್ರಿಗುತ್ತು ವಿವೇಕ್ ಶೆಟ್ಟಿ ಅವರು ಅತಿಥಿ ಗಣ್ಯರನ್ನು ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಾತೃಭೂಮಿ ಕ್ರೆಡಿಟ್ ಕೋ ಆಪ್ ಸೊಸೈಟಿಯ ನೂತನ ಅಧ್ಯಕ್ಷರು ಹಾಗೂ ಬಂಟರ ಸಂಘ ಮುಂಬಯಿ ಇದರ ಉಪಾಧ್ಯಕ್ಷ ಮೋಹನ್ ದಾಸ್ ಶೆಟ್ಟಿ, ಕೋಶಾಧಿಕಾರಿ ಸಿಎ ಹರೀಶ್ ಶೆಟ್ಟಿ, ಜತೆ ಕಾರ್ಯದರ್ಶಿ ಇಂದ್ರಾಳಿ ದಿವಾಕರ್ ಶೆಟ್ಟಿ. ಎಸ್ ಎಂ ಶೆಟ್ಟಿ ಸಂಸ್ಥೆ ಪೊವಾಯಿ ಇದರ ಕಾರ್ಯದರ್ಶಿ ಬಿ ಆರ್ ಶೆಟ್ಟಿ, ಉಪ ಕಾರ್ಯಧ್ಯಕ್ಷ ವಸಂತ್ ಎನ್ ಶೆಟ್ಟಿ ಪಲಿಮಾರ್, ಉನ್ನತ ಶಿಕ್ಷಣ ಸಂಸ್ಥೆಯ ಉಪ ಕಾರ್ಯಧ್ಯಕ್ಷ ಕುತ್ಯಾರು ಕಿಶೋರ್ ಕುಮಾರ್ ಶೆಟ್ಟಿ, ಉನ್ನತ ಶಿಕ್ಷಣ ಸಮಿತಿಯ ಮಾಜಿ ಕಾರ್ಯದರ್ಶಿ ಭಾಸ್ಕರ್ ಶೆಟ್ಟಿ ಕಾರ್ನಾಡ್, ಮಾಜಿ ಕೋಶಾಧಿಕಾರಿ ಸಿಎ ರಮೇಶ್ ಶೆಟ್ಟಿ, ಉನ್ನತ ಶಿಕ್ಷಣ ಸಂಸ್ಥೆ ಪ್ರಿನ್ಸಿಪಾಲರುಗಳಾದ ಡಾಕ್ಟರ್ ರಾಜೇಂದ್ರ ಪಾಟೀಲ್, ಚೆಫ್ ಯೋಗೇಶ್, ಡಾಕ್ಟರ್ ಕೃಷ್ಣ ಶೆಟ್ಟಿ, ಶ್ರೀಮತಿ ಶೈಲಾ ಶೆಟ್ಟಿ, ಮಾಜಿ ಪ್ರಿನ್ಸಿಪಾಲರಾದ ಸಂಯೋಜಿತ ಮೊರಾರ್ಜಿ, ಉನ್ನತ ಶಿಕ್ಷಣ ಸಂಸ್ಥೆಯ ಪ್ರಕಾಶ್ ಮೋರೆ, ಮೊದಲಾದವರು ಉಪಸ್ಥಿತರಿದ್ದರು.