ಹಣಕ್ಕಿಂತ ಮನುಷ್ಯತ್ವ ದೊಡ್ಡದಾಗಿದ್ದು ಮನುಷ್ಯತ್ವ ಇಲ್ಲದವರು ವೈದ್ಯಕೀಯ ವೃತ್ತಿಗೆ ಬರಬಾರದು ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ ಡಾ ಸಿ ರಾಮಚಂದ್ರ ತಿಳಿಸಿದರು. ಬಂಟರ ಸಂಘ ಬೆಂಗಳೂರು ವತಿಯಿಂದ ಹಮ್ಮಿಕೊಂಡಿದ್ದ ಎರಡನೇ ವರ್ಷದ ಸೇವಾ ಚೇತನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಬಂಟರ ಸಂಘ ಬೆಂಗಳೂರು ಸಮಾಜಸೇವಾ ಸಮಿತಿ ಮತ್ತು ಸೇವಾದಳ ಜಂಟಿಯಾಗಿ ಆಯೋಜಿಸಿದ್ದ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಅಬಕಾರಿ ಸಚಿವ ಕೆ ಗೋಪಾಲಯ್ಯ ಉದ್ಘಾಟನೆ ಮಾಡಿದರು. ಇದೇ ವೇಳೆ ಸುವರ್ಣ ವಾಹಿನಿಯ ಕರೆಂಟ್ ಅಫೇರ್ ವಿಭಾಗದ ಸಂಪಾದಕರು ಜಯಪ್ರಕಾಶ್ ಶೆಟ್ಟಿ ಅವರನ್ನು ಸನ್ಮಾನಿಸಿದರು. ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಉಪೇಂದ್ರ ಆರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮಧುಕರ್ ಎಂ ಶೆಟ್ಟಿ, ಸಮಾಜಸೇವಾ ಸಮಿತಿ ಮತ್ತು ಸೇವಾದಳದ ಅಧ್ಯಕ್ಷ ಮಂದಾರ್ತಿ ಉಮೇಶ್ ಶೆಟ್ಟಿ, ಸಂಚಾಲಕ ಅಜಿತ್ ಶೆಟ್ಟಿ, ಭಾಸ್ಕರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.