ಕುಂದಾಪುರ ಡಾ. ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಯಕ್ಷಗಾನ ಸಂಘ ಹಾಗೂ ಕನ್ನಡ ವಿಭಾಗದ ಜಂಟಿ ಆಶ್ರಯದಲ್ಲಿ ಯಕ್ಷಗಾನ ಸಂಘದ ವಿದ್ಯಾರ್ಥಿಗಳಿಂದ ಸಾಂಪ್ರದಾಯಿಕ ಹೂವಿನ ಕೋಲು ಪ್ರದರ್ಶನ ಕಾಲೇಜಿನ ಮೂಕಾಂಬಿಕಾ ಸಭಾಂಗಣದಲ್ಲಿ ನಡೆಯಿತು. ಕಲಾವಿದರಾಗಿ ಭಾಗವತಿಕೆಯಲ್ಲಿ ಪಲ್ಲವಿ, ಮದ್ದಳೆಯಲ್ಲಿ ರಾಹುಲ್ ಅಮೀನ್, ಚಂಡೆಯಲ್ಲಿ ಸಂಪ್ರೀತ್ ಶೆಟ್ಟಿ ಹಾಗೂ ಅರ್ಥಧಾರಿಗಳಾಗಿ ಮೋಹಿತ್, ಸಜನಿ ಉತ್ತಮ ಪ್ರದರ್ಶನ ನೀಡಿ, ‘ಸುಧನ್ವ ಕಾಳಗ’ ಪ್ರಸಂಗದ ‘ಸುಧನ್ವ ಸುಗರ್ಬೆ’ ಸಂವಾದದ ಸನ್ನಿವೇಶವನ್ನು ಪ್ರಸ್ತುತಪಡಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ| ಕೆ ಉಮೇಶ್ ಶೆಟ್ಟಿ, ಯಕ್ಷಗಾನ ಸಂಘದ ಸಂಯೋಜಕರಾದ ಡಾ| ಚೇತನ್ ಶೆಟ್ಟಿ ಕೋವಾಡಿ, ರವಿನಂದನ್ ಭಟ್ ಕಾರ್ಯಕ್ರಮ ಸಂಯೋಜಿಸಿದರು. ಕಾರ್ಯಕ್ರಮದಲ್ಲಿ ಯಕ್ಷಗಾನ ಸಂಘ ಹಾಗೂ ಕನ್ನಡ ವಿಭಾಗದ ವಿದ್ಯಾರ್ಥಿಗಳು ಪಾಲ್ಗೊಂಡರು.





















































































































