ಸಿದ್ಧಕಟ್ಟೆ ಕೊಡಂಗೆ ಕಂಬಳ ಸಮಿತಿ ವತಿಯಿಂದ ಯುವ ಉದ್ಯಮಿ ಸಂದೀಪ್ ಶೆಟ್ಟಿ ಪೊಡುಂಬ ಅವರ ಅಧ್ಯಕ್ಷತೆಯಲ್ಲಿ, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕರಾದ ರಾಜೇಶ್ ನಾಯ್ಕ್ ಉಳೆಪಾಡಿ ಗುತ್ತು ಹಾಗೂ ಮಾಜಿ ಸಚಿವರಾದ ಬಿ ರಮಾನಾಥ ರೈಯವರ ಗೌರವಾಧ್ಯಕ್ಷತೆಯಲ್ಲಿ ವೀರವಿಕ್ರಮ ಜೋಡುಕರೆ ಕಂಬಳವು ನವೆಂಬರ್ 21 ರಂದು ಶನಿವಾರ ಬೆಳಿಗ್ಗೆ 7.30 ರಿಂದ ಆರಂಭವಾಗಲಿದ್ದು, ಗಣ್ಯರು ಜೋಡುಕರೆ ಕಂಬಳವನ್ನು ಉದ್ಘಾಟಿಸಲಿದ್ದಾರೆ. ಸಮಿತಿಯ ಸರ್ವ ಪದಾಧಿಕಾರಿಗಳ ಸಂಪೂರ್ಣ ಸಹಕಾರದೊಂದಿಗೆ ವಿಜೃಂಭಣೆಯಿಂದ ಜರಗಲಿರುವ ಈ ಜೋಡುಕರೆ ಕಂಬಳದಲ್ಲಿ ಕಂಬಳ ಪ್ರೇಮಿಗಳು, ಕೋಣಗಳ ಯಜಮಾನರು ಹಾಗೂ ಸಾರ್ವಜನಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಂಬಳವನ್ನು ಯಶಸ್ವಿಗೊಳಿಸಬೇಕೆಂದು ಸದ್ರಿ ಸಮಿತಿಯ ಮುಖ್ಯಸ್ಥರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




































































































































