ಕಣಂಜಾರು ಪಟೇಲರಾದ ಶೇಖರ್ ಹೆಗ್ಡೆಯವರ ಜನ್ಮ ಶತಾಬ್ದ ವರ್ಷ 2026ರ ಪ್ರಯುಕ್ತ ಮಡಿಬೆಟ್ಟು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಶ್ರೀ ಬ್ರಹ್ಮಲಿಂಗೇಶ್ವರ ಎಜುಕೇಶನ್ ಟ್ರಸ್ಟ್ ನ ಟ್ರಸ್ಟಿ ಕೆ ಹರಿದಾಸ ಹೆಗ್ಡೆಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧಕರ ಸಂಘದ ಅಧ್ಯಕ್ಷರಾದ ಸಿಎ ಸುನೀಲ್ ಭಂಡಾರಿ, ಟ್ರಸ್ಟಿಗಳಾದ ಸುಧೀರ್ ಹೆಗ್ಡೆ, ವಿಕ್ರಮ್ ಹೆಗ್ಡೆ, ಕೆಂಜೂರು ಶಶಿಧರ ಶೆಟ್ಟಿ, ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಹರಿದಾಸ್ ನಾಯಕ್, ಶಾಲಾ ಸಂಚಾಲಕ ಸಿಎ ಚಂದನ್ ಕುಮಾರ್ ಹೆಗ್ಡೆ, ಶಾಲಾ ಮುಖ್ಯೋಪಾಧ್ಯಾಯ ಅಶ್ವತ್ಥ್ ಭಾರದ್ವಾಜ್ ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ ದಿನೇಶ್ ಯು.ಎಸ್, ಟ್ರಸ್ಟ್ ನ ಖಜಾಂಚಿ ಪ್ರಕಾಶ್ ಪ್ರಭು, ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧಕರ ಸಂಘ ಪದಾಧಿಕಾರಿಗಳು, ಪೂರ್ವಾಧ್ಯಕ್ಷರುಗಳು, ಪೋಷಕರು, ಹಳೆ ವಿದ್ಯಾರ್ಥಿಗಳು, ವಿದ್ಯಾ ಅಭಿಮಾನಿಗಳು ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಟ್ರಸ್ಟಿ ವಿಕ್ರಮ್ ಹೆಗ್ಡೆ ಪ್ರಾಸ್ತಾವಿಸಿದರು. ಕಾರ್ಯಕ್ರಮ ನಿರೂಪಣೆಯನ್ನು ಅಶ್ವತ್ಥ್ ಭಾರದ್ವಾಜ್ ಕೆ ನೆರವೇರಿಸಿದರು.





















































































































