ಪುತ್ತೂರು ತಾಲೂಕು ಬಂಟರ ಸಂಘದ ಸಾರಥ್ಯದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಪುತ್ತೂರು ತಾಲೂಕು ಸಮಿತಿ ಇದರ ಮಾರ್ಗದರ್ಶನದಲ್ಲಿ ಮಹಿಳಾ, ಯುವ ಹಾಗೂ ವಿದ್ಯಾರ್ಥಿ ಬಂಟರ ವಿಭಾಗದ ಸಹಕಾರದಲ್ಲಿ ಅಕ್ಟೋಬರ್ 3ರಂದು ಪುತ್ತೂರು ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ನಡೆಯಲಿರುವ ‘ಬಂಟರೆ ಸೇರಿಗೆ -2026,’ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರಧಾನ, ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಸೆಪ್ಟೆಂಬರ್ 29ರಂದು ಪುತ್ತೂರು ಬಂಟರ ಭವನದಲ್ಲಿ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅವರು ಮಾತನಾಡಿ, ಅಕ್ಟೋಬರ್ 3ರಂದು ಪುತ್ತೂರು ಬಂಟರ ಸಂಘದ ಆಶ್ರಯದಲ್ಲಿ ನಡೆಯಲಿರುವ ಬಂಟೆರೆ ಸೇರಿಗೆ ಐತಿಹಾಸಿಕ ಕಾರ್ಯಕ್ರಮವಾಗಲಿದೆ. ಈ ಕಾರ್ಯಕ್ರಮದಲ್ಲಿ ಪುತ್ತೂರು ಮತ್ತು ಕಡಬ ತಾಲೂಕು ವ್ಯಾಪ್ತಿಯ ಬಂಟ ಬಾಂಧವರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮಕ್ಕೆ ಶೋಭೆಯನ್ನು ತರಬೇಕು ಎಂದರು. ಅಕ್ಟೋಬರ್ 3ರಂದು ಬೆಳಗ್ಗೆ 9:00 ಗಂಟೆಗೆ ದರ್ಬೆ ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾಭವನದ ಬಳಿಯಿಂದ ಬಂಟರ ಭವನದ ತನಕ ಸಮಾರಂಭದಲ್ಲಿ ಭಾಗವಹಿಸಲಿರುವ ಅತಿಥಿಗಳನ್ನು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 15 ಮಂದಿ ಚಿನ್ನದ ಪದಕ ಪುರಸ್ಕೃತರನ್ನು ಎರಡು ರಥಗಳ ಮೂಲಕ ವೈಭವದ ಮೆರವಣಿಗೆಯಲ್ಲಿ ತರಲಾಗುವುದು ಎಂದು ಹೇಳಿದ ಹೇಮನಾಥ ಶೆಟ್ಟಿ ಅವರು ಬಂಟೆರೆ ಸೇರಿಗೆ ಕಾರ್ಯಕ್ರಮ ಅರ್ಥಪೂರ್ಣ ರೀತಿಯಲ್ಲಿ ನಡೆಯಲಿದೆ ಎಂದರು.
ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ‘ಸಹಕಾರ ರತ್ನ’ ದಂಬೆಕ್ಕಾನ ಸದಾಶಿವ ರೈ ಅವರು ಮಾತನಾಡಿ, ಬಂಟೆರೆ ಸೇರಿಗೆಯಲ್ಲಿ ಎಲ್ಲರೂ ಭಾಗವಹಿಸುವಂತೆ ವಿನಂತಿ ಮಾಡಿದರು. ಬಂಟರ ಭವನವನ್ನು 1 ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಣ ಮಾಡುವ ಕಾರ್ಯ ಆರಂಭಗೊಂಡಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು. ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ಬೂಡಿಯರ್ ರಾಧಾಕೃಷ್ಣ ರೈ ಅವರು ಮಾತನಾಡಿ, ಪುತ್ತೂರು ತಾಲೂಕು ಬಂಟರ ಸಂಘಕ್ಕೆ ಶಾಸಕ ಅಶೋಕ್ ಕುಮಾರ್ ರೈ ಮೂಲಕ ಸರಕಾರದಿಂದ ಮಂಜೂರಾದ 5.50 ಎಕ್ರೆ ಜಾಗದಲ್ಲಿ ಸುಂದರವಾದ ಮದುವೆ ಹಾಲ್, ಶೈಕ್ಷಣಿಕ ಕೆಲಸಗಳಿಗೆ ಕಟ್ಟಡ ನಿರ್ಮಾಣ ಸಹಿತ ಅನೇಕ ಅಭಿವೃದ್ಧಿ ಕಾರ್ಯಗಳು ಅದಷ್ಟು ಶೀಘ್ರ ಆಗಬೇಕು ಎಂದು ಹೇಳಿ, ಬಂಟ ಸಮಾಜ ಬಾಂಧವರು ಪೂರ್ಣ ರೀತಿಯ ಸಹಕಾರವನ್ನು ನೀಡಬೇಕು ಎಂದರು. ತಾಲೂಕು ಮಹಿಳಾ ಬಂಟರ ವಿಭಾಗದ ಅಧ್ಯಕ್ಷೆ ಗೀತಾ ಮೋಹನ್ ರೈ ಅವರು ಮಾತನಾಡಿ, ಅಕ್ಟೋಬರ್ 3ರಂದು ನಡೆಯುವ ಬಂಟೆರೆ ಸೇರಿಗೆಯಲ್ಲಿ ಪುತ್ತೂರು ಮತ್ತು ಕಡಬ ತಾಲೂಕು ವ್ಯಾಪ್ತಿಯ ಬಂಟ ಮಹಿಳೆಯರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿಸಿದರು. ತಾಲೂಕು ಯುವ ಬಂಟರ ವಿಭಾಗದ ಅಧ್ಯಕ್ಷ ಭಾಗ್ಯೇಶ್ ರೈ ಅವರು ಮಾತನಾಡಿ, ಯುವ ಬಂಟರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಿಕೆ ಮೂಲಕ ಬಂಟರೆ ಸೇರಿಗೆಯನ್ನು ಯಶಸ್ವಿಗೊಳಿಸಬೇಕು ಎಂದು ವಿನಂತಿಸಿದರು








ತಾಲೂಕು ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ ಸ್ವಾಗತಿಸಿ, ಕೋಶಾಧಿಕಾರಿ ಸಂತೋಷ್ ಕುಮಾರ್ ಶೆಟ್ಟಿ ಸಾಜ ವಂದಿಸಿದರು. ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿಯ ಸಹ ಸಂಚಾಲಕ ಸಾಜ ರಾಧಾಕೃಷ್ಣ ಆಳ್ವ, ನಿರ್ದೇಶಕ ಜಯಪ್ರಕಾಶ್ ರೈ ನೂಜಿಬೈಲು, ನಿರ್ದೇಶಕರಾದ ವತ್ಸಲಾ ಪಿ ಶೆಟ್ಟಿ, ಮಾಜಿ ನಿರ್ದೇಶಕಿ ವಾಣಿ ಶೆಟ್ಟಿ ನೆಲ್ಯಾಡಿ, ನಾಮ ನಿರ್ದೇಶಿತ ನಿರ್ದೇಶಕರುಗಳಾದ ಜೈರಾಜ್ ಭಂಡಾರಿ ನೋಣಾಲು, ದಯಾನಂದ ರೈ ಕೋರ್ಮಂಡ, ತಾಲೂಕು ಬಂಟರ ಸಂಘದ ಉಪಾಧ್ಯಕ್ಷರುಗಳಾದ ಸುಭಾಸ್ ಕುಮಾರ್ ಶೆಟ್ಟಿ ಅರುವಾರು, ಪ್ರತಾಪ್ ಚಂದ್ರ ರೈ ಕುದ್ಮಾರುಗುತ್ತು, ಜೊತೆ ಕಾರ್ಯದರ್ಶಿಗಳಾದ ಸ್ವರ್ಣಲತಾ ರೈ, ಹರಿಣಾಕ್ಷಿ ಶೆಟ್ಟಿ, ಪುಲಸ್ಯ ರೈ, ನಿರ್ದೇಶಕರುಗಳಾದ ನಿತಿನ್ ಪಕ್ಕಳ ಮರೀಲ್, ರವೀಂದ್ರ ಶೆಟ್ಟಿ ನುಳಿಯಾಲು, ಸದಾಶಿವ ರೈ ಸೂರಂಬೈಲು, ಶಶಿಕಿರಣ್ ರೈ ನೂಜಿಬೈಲು, ಶಿವನಾಥ ರೈ ಮೇಗಿನಗುತ್ತು, ಪ್ರಕಾಶ್ ರೈ ಸಾರಕೆರೆ, ಇಂದುಶೇಖರ್ ಶೆಟ್ಟಿ, ರವಿಪ್ರಸಾದ್ ಶೆಟ್ಟಿ ಬನ್ನೂರು, ತಾಲೂಕು ವಿದ್ಯಾರ್ಥಿ ಬಂಟರ ಸಂಘದ ಅಧ್ಯಕ್ಷ ಸಮೃದ್ ರೈ, ವಿಶೇಷ ಅಹ್ವಾನಿತರಾದ ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಸಂದೇಶ್ ರೈ, ಕಾರ್ತಿಕ್ ರೈ, ಸುಜೀರ್ ಶೆಟ್ಟಿ ನುಳಿಯಾಲು, ತಾಲೂಕು ಮಹಿಳಾ ಬಂಟರ ವಿಭಾಗದ ಪ್ರಧಾನ ಕಾರ್ಯದರ್ಶಿ ಕುಸುಮಾ ಪಿ ಶೆಟ್ಟಿ ಕೆರೆಕ್ಕೋಡಿ, ಕೋಶಾಧಿಕಾರಿ ಅರುಣಾ ಡಿ ರೈ ಸಹಿತ ಅನೇಕ ಮಂದಿ ಉಪಸ್ಥಿತರಿದ್ದರು. ಬಂಟರ ಭವನದ ಮ್ಯಾನೇಜರ್ ರವಿಚಂದ್ರ ರೈ ಕುಂಬ್ರ ಮತ್ತು ಭಾಸ್ಕರ್ ರೈ ಅವರುಗಳು ಸಹಕರಿಸಿದರು.














































































































