ಪತಂಜಲಿ ಯೋಗ ಸಮಿತಿ ಭಾರತ್ ಸ್ವಾಭಿಮಾನ್ ಟ್ರಸ್ಟಿನ ಜಿಲ್ಲಾಧ್ಯಕ್ಷ ಯೋಗ ಗುರು ಡಾ| ಎಂ ಜಗದೀಶ್ ಶೆಟ್ಟಿ ಬಿಜೈ ಇವರು ಸಾರ್ವಜನಿಕ ಗಣೇಶೋತ್ಸವ ಸಮಿತಿ ಓಂಕಾರ ಕ್ರೀಡೊತ್ಸವ ಸಮಿತಿಯ ಆಶ್ರಯದಲ್ಲಿ ಸಂತ ಫ್ರಾನ್ಸಿಸ್ ಕ್ಸೆವಿಯರ್ ಹಿರಿಯ ಪ್ರೈಮರಿ ಶಾಲೆ ಬಿಜೈ ಮಂಗಳೂರು ಇಲ್ಲಿ ತನ್ನ 250ನೇ ಉಚಿತ ಯೋಗ ಶಿಬಿರವನ್ನು ಆಯೋಜಿಸಿದರು. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬಂಟ್ಸ್ ಹಾಸ್ಟೆಲ್ ಇದರ ಅಧ್ಯಕ್ಷರಾದ ಜಯಶೀಲ ಅಡ್ಯoತಾಯ ಅಡ್ಯಾರು ಗುತ್ತು ಇವರು ಉಚಿತ ಯೋಗ ಶಿಬಿರವನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಅಡ್ಯಾಂತಾಯರನ್ನು ಅವರು ನೂತನವಾಗಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಯೋಗ ಗುರು ಡಾ| ಜಗದೀಶ್ ಶೆಟ್ಟಿ ಇವರು ಅಭಿನಂದಿಸಿ ಗೌರವಿಸಿದರು. ನಂತರ ಮಾತನಾಡಿದ ಜಯಶೀಲ ಅಡ್ಯಂತಾಯರು, ಯೋಗದಿಂದ ದೇಹ ಮನಸ್ಸು ಸುರಕ್ಷಿತ ಮತ್ತು ಜ್ಞಾನವೃದ್ಧಿಗೆ ಅತ್ಯುತ್ತಮ ಸಾಧನ ಎಂದು ಹೇಳಿ 250 ಉಚಿತ ಶಿಬಿರಗಳನ್ನು ಮಾಡಿದ ಯೋಗ ಗುರು ಡಾ| ಎಂ ಜಗದೀಶ್ ಶೆಟ್ಟಿ ಇವರ ಸಾಧನೆಗೆ ತನ್ನ ಹೃದಯಾಂತರಾಳದ ಮೆಚ್ಚುಗೆ ವ್ಯಕ್ತಪಡಿಸಿದರು.
ನವಮಂಗಳೂರು ಬಂದರು ಮಂಡಳಿಯ ಮಾಜಿ ಟ್ರಸ್ಟಿ ಪಿ ಸುಧಾಕರ್ ಕಾಮತ್ ಮಾತನಾಡುತ್ತಾ, ಡಾ| ಜಗದೀಶ್ ಶೆಟ್ಟಿ ಇವರು ನಿರಂತರ ಯೋಗಾಭ್ಯಾಸವನ್ನು ‘ಯೋಗ ಉಚಿತ ಆರೋಗ್ಯ ಖಚಿತ’ ಧ್ಯೇಯ ವಾಕ್ಯದಡಿ ಯೋಗ ಶಕ್ತಿ, ಭಕ್ತಿ ಶಕ್ತಿ, ಆರೋಗ್ಯ ಶಕ್ತಿ ಸಂಚಯನಗೊಳಿಸಿದವರು. ಜೀವನ ಮೌಲ್ಯವನ್ನು ವೃದ್ಧಿಸಿ, ಸಮಾಜದ ಸ್ವಾಸ್ತ್ಯ ಕಾಪಾಡಿ ಸಹಸ್ರಾರು ಜನರ ಜೀವನದಲ್ಲಿ ಉತ್ಸಾಹ ಹುಮ್ಮಸ್ಸು ತುಂಬಿ ಲವಲವಿಕೆಯಿoದಿರಲು ಕಳೆದ 20 ವರ್ಷಗಳಿಂದ ನಿರಂತರ ಯೋಗಾಭ್ಯಾಸ ಶಿಬಿರಗಳನ್ನು ನಡೆಸಲು ಶ್ರಮಿಸಿದ ಯೋಗ ಗುರುಗಳ ಅರ್ಪಣಾ ಮನೋಭಾವವನ್ನು ಶ್ಲಾಘಿಸಿದರು. ಮತ್ತೊರ್ವ ಅತಿಥಿ ಕೊಟ್ಟಾರ ಕೋಡಿಕಲ್ ಬಂಟರ ಸಂಘದ ಕಾರ್ಯದರ್ಶಿ ಲಕ್ಷ್ಮಣ್ ಶೆಟ್ಟಿ ಈ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶಾಲೆಯ ಮುಖ್ಯ್ಯೊಪಾದಾಯಿನಿ
ನಿರ್ಮಲ ಸಿಲ್ವಿಯಾ ಡಿಸೋಜಾ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು. ಆಶಾ ಶಿವರಾಮ್ ಶೆಟ್ಟಿ, ಯೋಗ ಸಹಶಿಕ್ಷಕಿ ಭಾರತಿ ಶೆಟ್ಟಿ, ಎಲಿಜ ಕೆ, ಶಾಂತಿ ಮರಿಯಾ ವೇಗಸ್, ಧನಲಕ್ಷ್ಮೀ ಶೆಟ್ಟಿ, ಸೆಲಿನ ಪಾಯ್ಸ್, ರೇಚಲ್ ಡಿಸೋಜಾ, ಗೀತಾ ಹಾಗೂ ಸುಮಾರು 200ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಯೋಗಾಭ್ಯಾಸ ಮಾಡಿದರು.

























































































































