ಗ್ರಾಮ ಪಂಚಾಯತ್ ಸದಸ್ಯರಾಗಿ ಆರಂಭವಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ಅವರ ಜನಸೇವೆಯ ಪಯಣ ಜಿಲ್ಲಾ ಪಂಚಾಯತ್ ಸದಸ್ಯ, ಭಾರತೀಯ ಜನತಾ ಪಾರ್ಟಿಯಲ್ಲಿ ವಿವಿಧ ಜವಾಬ್ದಾರಿಗಳು, ಮಂಗಳೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಹಾಗೂ ಕರ್ನಾಟಕ ಸರ್ಕಾರದ ನಿಗಮ ಮಂಡಳಿಯ ಅಧ್ಯಕ್ಷರ ಹುದ್ದೆಯವರೆಗೆ ಬೆಳೆದಿರುವುದು ಅನೇಕ ಯುವಕರಿಗೆ ಸ್ಫೂರ್ತಿದಾಯಕ. ಆದರೆ ಅವರ ನಿಜವಾದ ಗುರುತು ಹುದ್ದೆಗಳಲ್ಲ. ಅವರ ಹೃದಯವಂತಿಕೆಯಲ್ಲಿ. ಸ್ವಂತ ವೆಚ್ಚದಲ್ಲಿ ಇದುವರೆಗೆ 8 ಅರ್ಹ ಕುಟುಂಬಗಳಿಗೆ ಮನೆ ನಿರ್ಮಿಸಿ ಹಸ್ತಾಂತರ ಮಾಡುವ ಮೂಲಕ ಹಲವಾರು ಕುಟುಂಬಗಳ ಬದುಕಿನಲ್ಲಿ ಹೊಸ ಬೆಳಕು ಮೂಡಿಸಿದ್ದಾರೆ. ಜಾತಿ, ಧರ್ಮ, ಪಕ್ಷ ಎಂಬ ಯಾವುದೇ ಭೇದವಿಲ್ಲದೆ ದೇವಸ್ಥಾನ, ದೈವಸ್ಥಾನ, ಮಸೀದಿ, ಮದರಸ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಸಂಸ್ಥೆಗಳಿಗೆ ಉದಾರವಾಗಿ ನೆರವಾಗುತ್ತಾ ಸಮಾಜಸೇವೆಯ ನಿಜವಾದ ಅರ್ಥವನ್ನು ತೋರಿಸಿದ್ದಾರೆ.



ಸಮಾಜಸೇವೆಯ ಜೊತೆಗೆ ಕಂಬಳದ ಅಡ್ಡಹಲಗೆ ವಿಭಾಗದಲ್ಲೂ ತಮ್ಮದೇ ಆದ ಛಾಪು ಮೂಡಿಸಿರುವ ನಾರ್ಯಗುತ್ತು ಕುವೆತ್ತಬೈಲು ಸಂತೋಷ್ ಕುಮಾರ್ ರೈ ಬೋಳಿಯಾರ್ ಇಂದು ಸಾವಿರಾರು ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಇತ್ತೀಚೆಗೆ ಕ್ಯಾನ್ಸರ್ಗೆ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿರುವ ಅವರ ಹುಟ್ಟುಹಬ್ಬವೂ ಸೇವೆಯ ಹಬ್ಬವಾಗಿಯೇ ಆಚರಣೆಯಾಯಿತು. ಆ ಶುಭ ಸಂದರ್ಭದಲ್ಲಿ ಮತ್ತೊಂದು ಕುಟುಂಬಕ್ಕೆ ಮನೆ ನಿರ್ಮಿಸಿ ನೀಡುವ ಘೋಷಣೆ, ತಾವು ಕಲಿತ ಶಾಲೆಯ ಸಭಾಂಗಣ ನಿರ್ಮಾಣಕ್ಕೆ ನೆರವು, ಮತ್ತೊಂದು ಶಾಲೆಗೆ ಧನಸಹಾಯ ನೀಡುವ ಮೂಲಕ ತಮ್ಮ ಸಾಮಾಜಿಕ ಬದ್ಧತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದರು.
ಅಷ್ಟೇ ಅಲ್ಲ, ಕ್ಯಾನ್ಸರ್ ಪೀಡಿತರಿಗೆ ನೆರವಾಗುವ ಟ್ರಸ್ಟ್ ಸ್ಥಾಪಿಸುವುದಾಗಿ ಘೋಷಿಸಿರುವುದು ಅವರ ಮಾನವೀಯತೆಯ ಮತ್ತೊಂದು ಮಹತ್ತರ ಹೆಜ್ಜೆ. “ಪರೋಪಕಾರಾರ್ಥಂ ಇದಂ ಶರೀರಂ” ಎಂಬ ಜೀವನ ಮೌಲ್ಯವನ್ನು ಅಕ್ಷರಶಃ ಪಾಲಿಸಿ ಬದುಕುತ್ತಿರುವ ಸಂತೋಷ್ ಕುಮಾರ್ ರೈ ಬೋಳಿಯಾರ್ ಅವರಿಗೆ ದೇವರು ಉತ್ತಮ ಆರೋಗ್ಯ, ದೀರ್ಘಾಯುಷ್ಯ, ನೆಮ್ಮದಿ ಹಾಗೂ ಇನ್ನಷ್ಟು ಜನಸೇವೆ ಮಾಡುವ ಶಕ್ತಿ ಕರುಣಿಸಲಿ.




















































































































