
ಕರ್ನಾಟಕ ಟಿವಿ ಪ್ರಸ್ತುತ ಪಡಿಸುವ ಲೀಡರ್ ಅವಾರ್ಡ್ಸ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಜೂನ್ 20 ರಂದು ಸಂಜೆ 4 ಗಂಟೆಗೆ ಬೆಂಗಳೂರು ಅರಮನೆ ಮೈದಾನದ ಗೇಟ್ ನಂಬರ್ 4 ಗಾಯತ್ರಿ ವಿಹಾರ್ ನಲ್ಲಿ ನಡೆಯಲಿದೆ. ಈ ಭವ್ಯ ಸಮಾರಂಭದಲ್ಲಿ ಬೈಂದೂರು ಕ್ಷೇತ್ರದ ಜನಪ್ರಿಯ ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರಿಗೆ ‘ಬೆಸ್ಟ್ ಎಂ.ಎಲ್.ಎ’ ಹಾಗೂ ಸಮಾಜಸೇವಕಿ, ಉದ್ಯಮ ಕ್ಷೇತ್ರದಲ್ಲಿ ಮಹಾನ್ ಸಾಧನೆ ಮಾಡಿದ ಶ್ರೀಮತಿ ಕಾಂತಿ ಶೆಟ್ಟಿಯವರಿಗೆ ‘ಬೆಸ್ಟ್ ನಾಯಕಿ’ ಪ್ರಶಸ್ತಿ ಪ್ರದಾನ ನಡೆಯಲಿದೆ.































































































































