

ಬಂಟರ ಯಾನೆ ನಾಡವರ ಮಾತೃ ಸಂಘದ ಮಂಗಳೂರು ತಾಲೂಕಿನ ಮುಂದಿನ ಸಂಚಾಲಕರಾಗಿ ಉದ್ಯಮಿ, ಧಾರ್ಮಿಕ ಮುಖಂಡರಾದ ದಿವಾಕರ ಸಾಮಾನಿ ಚೇಳ್ಯಾರು ಗುತ್ತು ಹಾಗೂ ಸಹ ಸಂಚಾಲಕರಾಗಿ ಯುವ ಉದ್ಯಮಿ ಅಶ್ವತ್ಥಾಮ ಹೆಗ್ಡೆಯವರು ಅವಿರೋಧವಾಗಿ ಆಯ್ಕೆಯಾದರು. ಈ ಸಂಧರ್ಭ ವಸಂತ ಶೆಟ್ಟಿ ಜೆಪ್ಪು, ಸಿಎ ರಾಮಮೋಹನ ರೈ, ಉಲ್ಲಾಸ್ ಶೆಟ್ಟಿ ಪೆರ್ಮುದೆ, ರತ್ನಾಕರ ಶೆಟ್ಟಿ ಎಕ್ಕಾರ್, ಉಮೇಶ್ ರೈ ಮೇಗಿನ ಮನೆ, ಎಂ ಸುಂದರ ಶೆಟ್ಟಿ, ಕೇಶವ ಮಾರ್ಲ, ಅಶೋಕ್ ಶೆಟ್ಟಿ ಮೂಲ್ಕಿ, ಜಗದೀಶ್ ಶೆಟ್ಟಿ ಬಿಜೈ, ಕೃಷ್ಣಪ್ರಸಾದ್ ರೈ, ಮನೀಶ್ ರೈ, ಶೋಭಾ ಹೆಗ್ಡೆ ಮೂಡಬಿದ್ರೆ ಹಾಗೂ ಸಬಿತಾ ಶೆಟ್ಟಿ ಉಪಸ್ಥಿತರಿದ್ದರು.































































































































