
ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ, ಸವಣೂರಿನ ಶಿಕ್ಷಣ ಕ್ರಾಂತಿಯ ಹರಿಕಾರ ಸವಣೂರು ಕೆ. ಸೀತಾರಾಮ ರೈ ಮತ್ತು ಕಸ್ತೂರಿಕಲಾ ಎಸ್ ರೈ ದಂಪತಿಯ ವೈವಾಹಿಕ ಜೀವನದ 5೦ರ ಸಂಭ್ರಮ ನಡೆಯಲಿದೆ. ಮೇ 23 ರಂದು ಅಪರಾಹ್ನ ೩-೦೦ರಿಂದ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ ಸಂಗೀತ ಗಾನ ಸಂಭ್ರಮ ಜರಗಲಿದೆ. ಸಂಜೆ ಗಂಟೆ ೫-೩೦ ರಿಂದ ಸಭಾ ಕಾರ್ಯಕ್ರಮದಲ್ಲಿ ಶ್ರೀ ಸುಬ್ರಹ್ಮಣ್ಯ ಮಠದ ಮಠಾಧೀಶರಾದ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಮತ್ತು ಒಡಿಯೂರು ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಮಂಗಳೂರಿನ ಲಕ್ಷ್ಮೀ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ನ ಡಾ| ಎ.ಜೆ ಶೆಟ್ಟಿ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ಸನ್ಮಾನ ಸಮಾರಂಭ ನಡೆಸಿಕೊಡಲಿದ್ದಾರೆ.


ಮುಖ್ಯ ಅತಿಥಿಗಳಾಗಿ ಮಂಗಳೂರು ಕ್ಷೇತ್ರದ ಸಂಸದ ಕ್ಯಾ. ಬ್ರಿಜೇಶ್ ಚೌಟ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಸುಳ್ಯ ಶಾಸಕಿ ಕು. ಭಾಗೀರಥಿ ಮುರುಳ್ಯ ಭಾಗವಹಿಸಲಿದ್ದಾರೆ. ಕೊಂಬೆಟ್ಟು ಸರಕಾರಿ ಜೂನಿಯರ್ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಕಾವ್ಯ ಶೆಟ್ಟಿ ಅಭಿನಂದನಾ ನುಡಿಗಳನ್ನು ಆಡಲಿದ್ದಾರೆ. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ನ ಸಂಸ್ಥಾಪಕ ಪಟ್ಲ ಸತೀಶ್ ಶೆಟ್ಟಿ, ಕಂಬಳ ಉದ್ಘೋಷಕ ಮತ್ತು ತೀರ್ಪುಗಾರರಾದ ಎಡ್ತೂರು ರಾಜೀವ್ ಶೆಟ್ಟಿ ಮತ್ತು ಕನ್ನಡ ಚಲನಚಿತ್ರ ರಂಗದ ನಿರ್ಮಾಪಕ ರವಿ ರೈ ಕಳಸ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಸವಣೂರು ಸೀತಾರಾಮ ರೈಯವರ ಪುತ್ರಿ ರಶ್ಮಿ ಎ. ಶೆಟ್ಟಿ ಮತ್ತು ಅಳಿಯ ಅಶ್ವಿನ್ ಎಲ್. ಶೆಟ್ಟಿ ಸವಣೂರು, ಸೊಸೆ ಪಲ್ಲವಿ ಎಂ. ರೈ ಮತ್ತು ಪುತ್ರ ಮಹೇಶ್ ರೈ ಸವಣೂರು (ಅಮೇರಿಕಾ), ಸೊಸೆ ಅಶ್ವಿತಾ ಆರ್ ರೈ ಮತ್ತು ಪುತ್ರ ಡಾ. ರಾಜೇಶ್ ರೈ ಸವಣೂರು ( ಇಂಗ್ಲೆಂಡ್), ಮೊಮ್ಮಕ್ಕಳಾದ ಇಶಾನ್ ರೈ, ಅಥರ್ವ ಶೆಟ್ಟಿ, ಅವಿ ಶೆಟ್ಟಿರವರುಗಳು ಕಾರ್ಯಕ್ರಮ ಸಂಯೋಜನೆ ಮಾಡಲಿದ್ದಾರೆ.

























































































































