
ಮುಂಬಯಿಯ ಪ್ರತಿಷ್ಠಿತ ಬಂಟ ಬಾಂಧವರ ಸಂಸ್ಢೆಗಳಲ್ಲಿ ಒಂದಾದ ಬಾಂಬೆ ಬಂಟ್ಸ್ ಅಸೋಸಿಯೇಷನ್ ಇದರ ವಲಯ ಸಮಿತಿಯ ಉದ್ಘಾಟನಾ ಸಮಾರಂಭ ಅಸೋಸಿಯೇಶನ್ ನ ಅಧ್ಯಕ್ಷ ನ್ಯಾಯವಾದಿ ಡಿ.ಕೆ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಏಪ್ರಿಲ್ 12 ರವಿವಾರದಂದು ಅಪರಾಹ್ನ 2.30ಕ್ಕೆ ಸರಿಯಾಗಿ ಸೌಮ್ಯಲತಾ ಸದಾನಂದ ಶೆಟ್ಟಿ ಸಭಾಗೃಹ ಬಂಟ್ಸ್ ಸೆಂಟರ್ ಜೂಯಿನಗರ ಇಲ್ಲಿ ಬಹಳ ಸಂಭ್ರಮ ಹಾಗೂ ವಿಜೃಂಭಣೆಯಿಂದ ವೈವಿದ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು. ಅಧ್ಯಕ್ಷರಾದ ನ್ಯಾಯವಾದಿ ಡಿ.ಕೆ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರೆ, ಸಭಾ ಕಾರ್ಯಕ್ರಮದಲ್ಲಿ ನವಿಮುಂಬಯಿ ಮಹಾನಗರ ಪಾಲಿಕೆಯ ಮಹಾ ಪೌರರಾದ ಶ್ರೀಮತಿ ಸುಜಾತ
ಸೂರಜ್ ಪಾಟೀಲ್ ಇವರು ಕಾರ್ಯಕ್ರಮದ ಉದ್ಘಾಟಕರಾಗಿ ಭಾಗವಹಿಸಿದರು. ಮಾಜಿ ಅಧ್ಯಕ್ಷ ಜಯರಾಮ ಎಸ್ ಮಲ್ಲಿ ಮುಖ್ಯ ಅತಿಥಿಯಾಗಿ, ಮುಲುಂಡ್ ಬಂಟ್ಸ್ ಅಧ್ಯಕ್ಷ ಸಿ.ಎ ಕರುಣಾಕರ್ ಶೆಟ್ಟಿ ಹಾಗೂ ಥಾಣೆ ಬಂಟ್ಸ್ ಅಧ್ಯಕ್ಷ ಅಶೋಕ್ ಎಮ್ ಶೆಟ್ಟಿ ಗೌರವ ಅತಿಥಿಗಳಾಗಿ ಆಗಮಿಸಿದರು. ಬಾಂಬೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ನ್ಯಾಯವಾದಿ ಡಿ.ಕೆ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಮತ್ತು ಮಾರ್ಗದರ್ಶನದಲ್ಲಿ ಹಾಗೂ ವಲಯದ ಕಾರ್ಯಾಧ್ಯಕ್ಷರುಗಳಾದ ಗೋಪಾಲ ವೈ ಶೆಟ್ಟಿ ಮತ್ತು ಶಂಕರ ಎ ಶೆಟ್ಟಿ ಅವರ ಮುಂದಾಳತ್ವದಲ್ಲಿ ಕಾರ್ಯಕ್ರಮ ನಡೆಯಿತು. ಅಸೋಸಿಯೇಷನ್ ಉಪಾಧ್ಯಕ್ಷ ಕಿಶೋರ್ ಕೆ ಶೆಟ್ಟಿ, ಗೌ ಕಾರ್ಯದರ್ಶಿ ನ್ಯಾಯವಾದಿ ಶೇಖರ್ ಆರ್ ಶೆಟ್ಟಿ, ಕೋಶಾಧಿಕಾರಿ ಸಿ.ಎ ವಿಶ್ವನಾಥ ಎಸ್ ಶೆಟ್ಟಿ, ಜೊತೆ ಕಾರ್ಯದರ್ಶಿ ಜಯರಾಜ್ ರೈ, ಉಪ ಕೋಶಾಧಿಕಾರಿ ಸಿ.ಎ ದಿವಾಕರ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಶಾಂತ ಎನ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಅಧ್ಯಕ್ಷರು ಮತ್ತು ಅತಿಥಿಗಳು ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿ, ಸಮಿತಿಯ ಸದಸ್ಯರು ಪ್ರಾರ್ಥನೆಗೈದರು. ವಲಯ ಕಾರ್ಯಾಧ್ಯಕ್ಷ ಗೋಪಾಲ ವೈ ಶೆಟ್ಟಿ ಸ್ವಾಗತ ಭಾಷಣದಲ್ಲಿ ಅತಿಥಿಗಳನ್ನು ಸ್ವಾಗತಿಸಿ, ಎರಡು ವಲಯ ಸಮಿತಿಗಳ ಜಂಟಿ ಆಶ್ರಯದಲ್ಲಿ ನಡೆಯುವ ಉದ್ಘಾಟನೆಯ ಬಗ್ಗೆ ಹಾಗೂ ವಲಯ ಸಮಿತಿಯ ಉದ್ಧೇಶ, ಆಶಯಗಳನ್ನು ವಿವರಿಸಿದರು. ಅನಂತರ ಅತಿಥಿಗಳನ್ನು ಪರಿಚಯಿಸಿ ಶಾಲು ಹೊದಿಸಿ, ಸ್ಮರಣಿಕೆ, ಪುಷ್ಷಗುಚ್ಛಗಳನ್ನು ನೀಡಿ ಗೌರವಿಸಿದರು. ಸರ್ವಶ್ರೀಗಳಾದ ಪೊಲ್ಯ ಲಕ್ಷ್ಮೀ ನಾರಾಯಣ ಶೆಟ್ಟಿ, ಸುರೇಶ್ ಜಿ ಶೆಟ್ಟಿ, ಸಂತೋಷ್ ಡಿ. ಶೆಟ್ಟಿ, ಧರ್ಮದರ್ಶಿ ಅಣ್ಣಿ ಸಿ ಶೆಟ್ಟಿ, ಭಾಸ್ಕರ್ ಬಿ ಶೆಟ್ಟಿ ದಕ್ಷಿಣ್ ಅವರುಗಳನ್ನು ಶಾಲು ಹೊದಿಸಿ, ಹಾರ, ಸ್ಮರಣಿಕೆ, ಪುಷ್ಷಗುಚ್ಛಗಳನ್ನು ನೀಡಿ ಸನ್ಮಾನಿಸಲಾಯಿತು.
ಸನ್ಮಾನಕ್ಕೆ ಪೊಲ್ಯ ಭಾಗವತರು ಕೃತಜ್ಞತೆಯನ್ನು ಸಲ್ಲಿಸುತ್ತಾ, ನಾನು ಈ ಮಟ್ಟಕ್ಕೆ ಏರಲು 5 ದಶಕಗಳ ಕಾಲದಿಂದ ಕಲಾರಸಿಕರಿಂದ ಲಭಿಸಿದ ಪ್ರೊತ್ಸಾಹವೇ ಕಾರಣ ಎಂದರು. ಧರ್ಮದರ್ಶಿ ಅಣ್ಣಿ ಸಿ ಶೆಟ್ಟಿಯವರು ಮಾತನಾಡಿ, ಎಲ್ಲರೂ ಅಹಂಕಾರದ ಮದವನ್ನು ತ್ಯಜಿಸಿ ನಡೆದರೆ ಒಳ್ಳೆಯದು ಎಂದು ಹಿತವಚನ ನೀಡಿದರು. ಸುರೇಶ್ ಜಿ. ಶೆಟ್ಟಿಯವರು ಮಾತನಾಡಿ, ನಾನು ಈ ಮನೆಯವನೇ. ಯಾಕೆಂದರೆ ನಾನು ಹಲವಾರು ವರ್ಷಗಳಿಂದ ಬಾಂಬೆ ಬಂಟ್ಸ್ ಅಸೋಸಿಯೇಷನ್ ಇದರ ವಿಶ್ವಸ್ಥನೂ ಹೌದು, ಸದಸ್ಯನೂ ಹೌದು. ಹಾಗಾಗಿ ನನ್ನ ಸಹಾಯ ಸಂಸ್ಥೆಗೆ ಸದಾ ಇದೆ ಎಂದರು. ಸಂತೋಷ್ ಡಿ ಶೆಟ್ಟಿಯವರು ಮಾತನಾಡಿ, ನಾನು ಕೂಡಾ ಈ ಸಂಸ್ಥೆಗೆ ಮೊದಲಿನಿಂದಲೂ ಪರಿಚಿತ ಹಾಗೂ ಎಲ್ಲಾ ಸದಸ್ಯರು ನಮ್ಮವರೇ ಆದ್ದರಿಂದ ನನ್ನ ಸಹಾಯ ಸದಾ ಇದೆ ಎಂದು ಆಶ್ವಾಸನೆಯ ಮಾತನ್ನಿತ್ತರು. ಅತಿಥಿಗಳಾದ ಶ್ರೀಮತಿ ಸುಜಾತ ಸೂರಜ್ ಪಾಟೀಲ್ ತಮ್ಮ ಭಾಷಣದಲ್ಲಿ ನನಗೆ ತುಳು ಕನ್ನಡ ಭಾಷೆ ಬಾರದಿದ್ದರೂ ಬಂಟರ ಸಂಸ್ಕೃತಿ, ಪರಂಪರೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ, ಹುಟ್ಟೂರನ್ನು ಬಿಟ್ಟು ಬಂದರೂ ನಿಮ್ಮ ಸಂಸ್ಕೃತಿಯನ್ನು ನೋಡುವಾಗ ಭಾಷೆಯಿಂದ ಭಾವನೆಯೇ ಮೇಲು ಎಂದೆಣಿಸುತ್ತದೆ ಎಂದು ನುಡಿದರು. ಅಲ್ಲದೇ ಬಂಟ್ಸ್ ಅಸೋಸಿಯೇಷನ್ ವತಿಯಿಂದ ನಡೆಯುವ ಕಾಲೇಜು ಕಟ್ಟಡ ವಿಸ್ತರಣೆಯ ಬಗ್ಗೆ ಜಾಗಕ್ಕಾಗಿ ನಾನೂ ಸಹಕರಿಸುವೆ ಎಂದು ಭರವಸೆಯ ಮಾತನ್ನಾಡಿದರು.
ಮುಖ್ಯ ಅತಿಥಿ ಜಯರಾಮ ಎಸ್ ಮಲ್ಲಿಯವರು ನಮ್ಮ ಅಸೋಸಿಯೇಶನ್ ನಲ್ಲಿ ಸ್ವಂತ ಕಟ್ಟಡ ಮತ್ತು ಇನ್ನಿತರ ಸವಲತ್ತುಗಳು ಇರುವುದರಿಂದ ಅದನ್ನು ಪೂರ್ಣ ಪ್ರಮಾಣದಲ್ಲಿ ಸದುಪಯೋಗಿಸಬೇಕು ಎಂದು ಹೇಳಿದರು. ಗೌರವ ಅತಿಥಿಗಳಲ್ಲೋರ್ವರಾದ ಸಿ.ಎ ಕರುಣಾಕರ ಶೆಟ್ಟಿಯವರು, ನಾನು ಕೆಲವು ವರ್ಷಗಳ ಕಾಲ ಬಾಂಬೆ ಬಂಟ್ಸ್ ಅಸೋಸಿಯೇಶನ್ ನ ಚುನಾವಣಾಧಿಕಾರಿ ಆಗಿದ್ದರಿಂದ ನನಗೂ ಅವರಿಗೂ ಅವಿನಾಭಾವ ಸಂಬಂಧ ಇದೆ ಎಂದರು. ಇನ್ನೋರ್ವ ಅತಿಥಿ ಅಶೋಕ್ ಎಮ್ ಶೆಟ್ಟಿಯವರು, ವಲಯಗಳು ಬರೀ ಹೆಸರಿಗೆ ಇರದೆ ಸಮಾಜದ ನೆಮ್ಮದಿಗಾಗಿ ಕೆಲಸ ಮಾಡುತ್ತಾ, ನಿಂತ ನೀರಾಗದೆ ಸದಾ ಹರಿಯುವ ನೀರಾಗಬೇಕು ಎಂದು ಹೇಳಿದರು. ಅಧ್ಯಕ್ಷ ಡಿ.ಕೆ ಶೆಟ್ಟಿ ಮಾತನಾಡುತ್ತಾ, ಒಂದು ಸಂಸ್ಥೆ ಹುಟ್ಟಿ ಅದರ ಬೆಳವಣಿಗೆ ಮತ್ತು ಅದರ ಸಾಮಾಜಿಕ ಕಾರ್ಯಗಳು ಎಲ್ಲಾ ಸಮಾಜ ಬಾಂಧವರಿಗೆ ತಲುಪಿ ಆದರಿಂದ ಪ್ರಯೋಜಿತರಾಗಬೇಕಾದರೆ ವಲಯ ಸಮಿತಿಯಿಂದಲೇ ಸಾಧ್ಯ ಎಂಬುದು ಎಲ್ಲರಿಗೂ ತಿಳಿದ ವಿಷಯ. ಆ ನಿಟ್ಟಿನಿಂದಲೇ ನಾನು ಮತ್ತು ನಮ್ಮ ಆಡಳಿತ ಮಂಡಳಿ ನನ್ನ ಕಾರ್ಯಕಾರಿ ಸಮಯದ ಪ್ರಾರಂಭದಲ್ಲಿಯೇ ಎರಡು ವಲಯಗಳನ್ನು ಸ್ಥಾಪಿಸಿದ್ದರೂ ಇಂದು ಅದರ ಪ್ರಾಸ್ಥಾವಿಕ ಉದ್ಘಾಟನೆಯನ್ನು ಗಣ್ಯರ ಸಮಕ್ಷಮದಲ್ಲಿ ಮಾಡುವ ನಿರ್ಧಾರವನ್ನು ಕೈಗೊಂಡು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಎಲ್ಲರಿಗೂ ತಿಳಿದ ಹಾಗೆ ಒಂದು ರಾಜ್ಯಕ್ಕೆ ಒಂದೇ ಉಚ್ಛ ನ್ಯಾಯಾಲಯ ಇದ್ದರೂ, ರಾಜ್ಯದ ಎಲ್ಲಾ ಭಾಗದ ಕಕ್ಷಿಗಾರರು ನ್ಯಾಯಾಲಯದ ಪ್ರಯೋಜತ್ವಕವನ್ನು ಪಡೆಯಲು ಸಾಧ್ಯವಾಗುವ ಉದ್ದೇಶದಿಂದ ಅದರ ವಿಭಾಗಿಯ ಪೀಠಗಳನ್ನು ಸ್ಥಾಪಿಸಿದ ರೀತಿಯಲ್ಲಿ ವಲಯ ಸಮಿತಿಗಳ ರಚನೆ ಮುಖ್ಯ ಎಂಬ ಸಿದ್ದಾಂತದೊಂದಿಗೆ ನಾವು ಈ ಹೆಜ್ಜೆಯನ್ನಿಟ್ಟದ್ದೇವೆ. ಆದ್ದರಿಂದ ಲಾಭಾರ್ಥಿಗಳು ಈ ವಲಯ ಸಮಿತಿಗಳ ಸದುಪಯೋಗವನ್ನು ಪಡೆಯಬೇಕಾಗಿ ವಿನಂತಿಸಿದರು. ಅಲ್ಲದೇ, ಅತಿಥಿಯಾಗಿ ಆಗಮಿಸಿದ ನವಿ ಮುಂಬಯಿಯ ಮಹಾ ಪೌರರಾದ ಶ್ರೀಮತಿ ಸುಜಾತ ಎಸ್ ಪಾಟೀಲ್ ನಮ್ಮ ಸಂಸ್ಥೆಯಿಂದ ನಡೆದುಕೊಂಡು ಬಂದ ಹಗಲು ಮತ್ತು ರಾತ್ರಿ ಕಾಲೇಜುಗಳಿಗೆ ಸೌಲಭ್ಯವಾಗುವಂತೆ ಸಿಡ್ಕೊದಿಂದ ಜಾಗವನ್ನು ತೆಗೆದುಕೊಡಿಸುವ ಕಾರ್ಯಕ್ಕೆ ನಾನು ಸಹಾಯ ಮಾಡುತ್ತೇನೆ ಮತ್ತು ಸಂಸ್ಥೆಯ ವಿಶ್ವಸ್ಥರು, ಸಮಿತಿ ಸದಸ್ಯರು ಮತ್ತು ನವಿಮುಂಬಯಿ ಪ್ರಸಕ್ತ ಪೌರ ಸದಸ್ಯರಾದ ಸುರೇಶ್ ಜಿ ಶೆಟ್ಟಿ ಮತ್ತು ನಮ್ಮವರೇ ಆದ ಮಾಜಿ ಪೌರ ಸದಸ್ಯ ಸಂತೋಷ್ ಡಿ ಶೆಟ್ಟಿ ಅವರು ಕೂಡ ಇವತ್ತಿನ ಸಭೆಯಲ್ಲಿ ಪಾಲುಗೊಂಡದ್ದರಿಂದ ನಮ್ಮ ಸಂಸ್ಥೆಗೆ ಬೇಕಾದ ಎಲ್ಲಾ ಕೆಲಸ ಕಾರ್ಯಗಳಿಗೂ ಸಹಾಯ ಹಸ್ತವನ್ನು ನೀಡುತ್ತಾರೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶಂಕರ ಎ ಶೆಟ್ಟಯವರೂ ಕೂಡಾ ವಲಯ ಸಮಿತಿಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಬೇರೆ ಬೇರೆ ಸಂಘ ಸಂಸ್ಥೆಗಳು ವಿವಿಧ ನ್ಯತ್ಯಗಳನ್ನು ಮಾಡಿದರೆ, ಗೀತಾ ಭಟ್ ಇವರ ತಂಡದಿಂದ ಪೊಲ್ಯ ಅವರ ಮಧುರ ಕಂಠದ ಭಾಗವತಿಗೆಯಿಂದ ‘ಅಂಬಾ ಶಪಥ’ ಎಂಬ ಯಕ್ಷಗಾನ ಕಿರು ಪ್ರಸಂಗವನ್ನು ಆಡಿದರು. ಕೊನೆಯಲ್ಲಿ ‘ಒಯ್ಕಿಲಾ ದಿನ ಬರೋಡು’ ಎಂಬ ನಾಟಕ ಅಭಿನವ ಮಂಟಪ ಮುಂಬಯಿ ತಂಡದವರು ಆಡಿ ತೋರಿಸಿದರು. ಅಲ್ಲದೇ ಕಾರ್ಯಕ್ರಮಕ್ಕೆ ಪ್ರೊತ್ಸಾಹವನ್ನಿತ್ತ ನಿಕಿತಾ ಜ್ಯುವೆಲ್ಲರ್ಸ್ ಅವರಿಂದ ಅತಿಥಿಗಳಿಗೆ ಉಡುಗೊರೆ ಚೀಟಿಗಳನ್ನು ಕೊಡಮಾಡಲಾಯಿತು. ಕಾರ್ಯಕ್ರಮವನ್ನು ಅಸೋಸಿಯೇಷನ್ ನ ಸಾಂಸ್ಕೃತಿಕ ಕಾರ್ಯಾಧ್ಯಕ್ಷ ಆದ್ಯಪಾಡಿ ಬಾಲಕ್ರಷ್ಣ ಶೆಟ್ಟಿ ನಿರೂಪಣೆಗೈದರೆ, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಲತಾ ಜಿ ಶೆಟ್ಟಿ, ಯುವ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ನಿವೇದಿತ ಶೆಟ್ಟಿ, ನಿರ್ವಿಕ ಶೆಟ್ಟಿ, ಸಹಾನಿ ವಿ ಶೆಟ್ಟಿ ಇನ್ನಿತರರು ಎಲ್ಲಾ ವಿಧದಲ್ಲಿಯೂ ಸಹಕರಿಸಿದರು. ಕೊನೆಯಲ್ಲಿ ನಿವೇದಿತ ಶೆಟ್ಟಿಯವರು ಧನ್ಯವಾದ ಸಮರ್ಪಣೆಗೈದರು. ಆನಂತರ ಎಲ್ಲರಿಗೂ ಪ್ರೀತಿ ಭೋಜನದ ವ್ಯವಸ್ದೆಯನ್ನು ಮಾಡಲಾಗಿತ್ತು.

























































































































