
ಯುಎಇ ಯಲ್ಲಿ ಕಳೆದ 23 ವರ್ಷಗಳಿಂದ ಕನ್ನಡಪರ ಸೇವೆಗಳನ್ನು ಮಾಡುತ್ತಾ ವಿಶೇಷ ಮತ್ತು ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ಅನಿವಾಸಿ ಕನ್ನಡಿಗರಿಗೆ ಆಯೋಜನೆ ಮಾಡುವ ಹೆಮ್ಮಯ ಸಂಸ್ಥೆ ಕರ್ನಾಟಕ ಸಂಘ ಶಾರ್ಜಾ. ಈ ಸಂಸ್ಥೆಯ 2026-28 ರ ನೂತನ ಕಾರ್ಯಕಾರಿ ಸಮಿತಿ ರಚನೆಯಾಗಿದ್ದು, ಸಮಿತಿಯ ನೂತನ ಅಧ್ಯಕ್ಷರಾಗಿ ಯುಎಇ ಯಲ್ಲಿ ಹಲವಾರು ರಂಗಭೂಮಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ಯಶಸ್ವಿಗೊಳಿಸಿದ ರಂಗಸಾರಥಿ ವಿಶ್ವನಾಥ್ ಶೆಟ್ಟಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಂತೇಯೆ ಸಂಘದ ಸಲಹಾ ಸಮಿತಿಯ ನಿರ್ದೇಶಕರಾಗಿ ವಕ್ವಾಡಿ ಪ್ರವೀಣ್ ಶೆಟ್ಟಿ, ಹರೀಶ್ ಶೇರಿಗಾರ್, ಜೋಸೆಫ್ ಮಥಾಯಿಸ್, ರಾಮಚಂದ್ರ ಹೆಗ್ಡೆಯವರು ಮುಂದುವರಿಯಲಿದ್ದಾರೆ. ಸಂಘದ ಸಲಹೆಗಾರರಾಗಿ ಎಂ.ಇ ಮೂಳುರು, ಗಣೇಶ್ ರೈ, ಸತೀಶ್ ಪೂಜಾರಿ ಮತ್ತು ನೋಯೆಲ್ ಡಿ ಅಲ್ಮೆಡಾ ಮುಂದುವರಿಯಲಿದ್ದಾರೆ.



























































































































