2026-27ನೇ ಸಾಲಿನ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧಕರ ಸಂಘದ (KSCAA) ಅಧ್ಯಕ್ಷರಾಗಿ ಸಿಎ ಸುನೀಲ್ ಭಂಡಾರಿಯವರು ಆಯ್ಕೆಯಾಗಿದ್ದಾರೆ. ಸಿಎ ಸುನೀಲ್ ಭಂಡಾರಿ ಅವರ ನಾಯಕತ್ವ, ವೃತ್ತಿಯ ಮೇಲಿನ ಬದ್ಧತೆ ಮತ್ತು ಎಲ್ಲರನ್ನೂ ಒಗ್ಗೂಡಿಸುವ ಸಾಮರ್ಥ್ಯವು ಕರ್ನಾಟಕದ ಚಾರ್ಟರ್ಡ್ ಅಕೌಂಟೆಂಟ್ ಸಮುದಾಯದಲ್ಲಿ ನಿಸ್ಸಂದೇಹವಾಗಿ ಅರ್ಥಪೂರ್ಣ ಬದಲಾವಣೆಯನ್ನು ತರಲಿದೆ. ಸಿಎ ಸುನೀಲ್ ಭಂಡಾರಿ ಅವರು ಬೊಳಿಯಾರು ತಾರಿಪಾಡಿ ದಿ. ಕಾಂತಣ್ಣ ಭಂಡಾರಿ ಹಾಗೂ ಬಜ್ಪೆ ಪೆಲಪಾಡಿ ವಸಂತಿ ಕೆ ಭಂಡಾರಿಯವರ ಸುಪುತ್ರರಾಗಿದ್ದಾರೆ. ಈ ಹೊಸ ಜವಾಬ್ದಾರಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಅವರು ತಿಳಿಸಿದ್ದಾರೆ.



















































































































