
ಮಾನವೀಯ ಸೇವೆಯೇ ರೆಡ್ ಕ್ರಾಸ್ ಸಂಸ್ಥೆಯ ಧ್ಯೇಯವಾಗಿದ್ದು ರಕ್ತನಿಧಿ ಸೇವೆ, ಅಗತ್ಯ ಇರುವ ವಿಕಲ ಚೇತನರಿಗೆ ಗಾಲಿಕುರ್ಚಿ ವಿತರಣೆ, ಉಚಿತ ವೈದ್ಯಕೀಯ ಶಿಬಿರ ಮುಂತಾದ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಅಶಕ್ತರ ಸೇವೆಗೆ ದಕ್ಷಿಣ ಕನ್ನಡ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆ ಸದಾ ಭದ್ದವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ರೆಡ್ ಕ್ರಾಸ್ ಸಮಿತಿಯ ಚೇರ್ಮನ್ ಸಿಎ ಶಾಂತರಾಮ ಶೆಟ್ಟಿ ಹೇಳಿದರು. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಪದವಿನಂಗಡಿಯ ಮಹಿಳೆಗೆ ರೆಡ್ ಕ್ರಾಸ್ ಸಮಿತಿ ವತಿಯಿಂದ ವಿಶೇಷ ಆರಾಮದಾಯಕ ಮಂಚ ವಿತರಿಸಿ ಮಾತನಾಡಿದರು.


ಮಾಜಿ ಮೇಯರ್ ಜಯಾನಂದ ಅಂಚನ್, ರೆಡ್ ಕ್ರಾಸ್ ಜಿಲ್ಲಾ ಸಮಿತಿ ನಿರ್ದೇಶಕ ಪಿ.ಬಿ ಹರೀಶ್ ರೈ, ಕಾರ್ಯದರ್ಶಿ ಕಿಶೋರ್ ಚಂದ್ರ ಹೆಗ್ಡೆ, ಪ್ರಮುಖರಾದ ಪ್ರಜ್ವಲ್ ಶೆಟ್ಟಿ, ಹರಿಪ್ರಸಾದ್, ಉಮೇಶ್ ಶೆಟ್ಟಿ, ರವೀಂದ್ರ ಅಮೀನ್, ಸಂಜೀತ್ ಶೆಟ್ಟಿ, ಸರೋಜಿನಿ, ದಿವ್ಯಾ, ಜಯ ಮೇರಿಹಿಲ್, ಮಾಧವ, ಫಲಾನುಭವಿಯ ತಾಯಿ ಮೀನಾಕ್ಷಿ, ರೆಡ್ ಕ್ರಾಸ್ ಸಿಬ್ಬಂದಿ ಗಿರೀಶ್ ಕುಮಾರ್, ಅನಿತಾ ಮೊದಲಾದವರು ಉಪಸ್ಥಿತರಿದ್ದರು.

























































































































