
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನ ದ.ಕ ಜಿಲ್ಲಾ ಘಟಕದ ಅಧ್ಯಕ್ಷೆಯಾಗಿ ಸಾಹಿತಿ ವೀಣಾ ಟಿ ಶೆಟ್ಟಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಲತೇಶ ಬಾಕ್ರಬೈಲ್, ಜತೆ ಕಾರ್ಯದರ್ಶಿಗಳಾಗಿ ಗೀತಾ ಲಕ್ಷ್ಮೀಶ, ಶ್ರೀಲಕ್ಷ್ಮೀ ಮಠದಮೂಲೆ, ಕೋಶಾಧಿಕಾರಿಯಾಗಿ ರತ್ನಾವತಿ ಬೈಕಾಡಿ, ಮಾಧ್ಯಮ ಪ್ರಮುಖರಾಗಿ ಚಂದ್ರಶೇಖರ ಕುಳವರ್ಮ, ಮಹಿಳಾ ಪ್ರಕಾರ ಪ್ರಮುಖರಾಗಿ ಸುಮಂಗಲ ರತ್ನಾಕರ, ಮಕ್ಕಳ ಪ್ರಕಾರ ಪ್ರಮುಖರಾಗಿ ರಮೇಶ ಮಯ್ಯ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪಿ.ಬಿ ಹರೀಶ್ ರೈ, ಡಾ. ಸುರೇಶ ನೆಗಳಗುಳಿ, ಪ್ರಕಾಶ ನಾರಾಯಣ ಚಾರ್ಮಾಡಿ, ರವೀಂದ್ರ ಶೆಟ್ಟಿ ಆಯ್ಕೆಯಾಗಿದ್ದಾರೆ.



























































































































