ಕೊಡವೂರು ತೋಟದ ಮನೆ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಗುರುಪೂರ್ಣಿಮೆ ಆಚರಣೆಯು ಕೆ. ದಿವಾಕರ ಶೆಟ್ಟಿಯವರ ಸಾರಥ್ಯದಲ್ಲಿ ಜುಲೈ 29 ರಂದು ಬುಧವಾರ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರಗಲಿರುವುದು. ಬೆಳಿಗ್ಗೆ 5.00 ಘಂಟೆಗೆ ಕಾಕಡ ಆರತಿಯೊಂದಿಗೆ ಮೋದಲ್ಗೊಂಡ ಗುರುಸೇವೆ ಕಾರ್ಯಕ್ರಮವು ರಾತ್ರಿ 9.00 ಘಂಟೆಗೆ ಶೇಜಾರತಿಯೊಂದಿಗೆ ಸಂಪನ್ನಗೊಳ್ಳಲಿದೆ. ಬೆಳಿಗ್ಗೆ 6.00 ಘಂಟೆಗೆ ಮಂಗಳ ಸ್ನಾನ ನಂತರ ಶಿರಡಿ ಮಾಝೆ ಪಂಡರಪುರ ಶೀರ್ಷಿಕೆಯಡಿ ಸಾಯಿಕೀರ್ತನೆ ನಡೆಯಲಿದ್ದು, 9.00 ಘಂಟೆಗೆ ಶ್ರೀ ಸಾಯಿ ಸತ್ಯನಾರಾಯಣ ಪೂಜೆ, ಪ್ರಸಾದ ವಿತರಣೆ, ನೈವೇದ್ಯ ಸಮರ್ಪಣೆ, 12.00 ಗಂಟೆಗೆ ಮಹಾ ಪೂಜೆ ನಡೆದು ಆ ಬಳಿಕ ಮಹಾಪ್ರಸಾದ ರೂಪದಲ್ಲಿ ಅನ್ನ ಸಂತರ್ಪಣೆ ಜರಗಲಿದೆ.



ಅದೇ ದಿನ ಅಪರಾಹ್ನ 1.00 ಘಂಟೆಯಿಂದ ಭಜನಾ ಕಾರ್ಯಕ್ರಮ ನಡೆದು, 6.45ಕ್ಕೆ ಸರಿಯಾಗಿ ಧೂಪಾರತಿ ಬಳಿಕ 9.00 ಘಂಟೆಯ ತನಕ ಅನ್ನ ಸಂತರ್ಪಣೆ ನಡೆಯಲಿದೆ. ಈ ಮಧ್ಯೆ ಭಜನೆ ಶೇಜಾರತಿ ಇರುತ್ತದೆ. ಗುರುತ್ರಯರ ಸಾನಿಧ್ಯದಲ್ಲಿ ಜರಗಲಿರುವ ಈ ಪುಣ್ಯ ಕಾರ್ಯದಲ್ಲಿ ಗುರುಭಕ್ತರು ಭಾಗವಹಿಸಿ, ಪ್ರಸಾದ ಸ್ವೀಕರಿಸಿ ಗುರು ಕೃಪೆಗೆ ಪಾತ್ರರಾಗಬೇಕೆಂದು ಕ್ಷೇತ್ರದ ಆಡಳಿತ ಮೊಕ್ತೇಸರ ಕೆ. ದಿವಾಕರ ಶೆಟ್ಟಿ ಹಾಗೂ ಆಡಳಿತ ಸಮಿತಿ ಪದಾಧಿಕಾರಿಗಳು, ಸದಸ್ಯರು ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿಕೊಂಡಿದ್ದಾರೆ.




















































































































