
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಉಪ್ಪಿನಂಗಡಿ ಘಟಕದ 9ನೇ ವಾರ್ಷಿಕೋತ್ಸವವು ಉಪ್ಪಿನಂಗಡಿ ಹುಣ್ಣಿಮೆಯ ನಡುಮಖೆ ಜಾತ್ರೆ ಸಂದರ್ಭದಲ್ಲಿ ಸಹಸ್ರಲಿಂಗಲೇಶ್ವರ ದೇವಸ್ಥಾನದ ಮುಂಭಾಗ ನಡೆಯಿತು. ಉಪ್ಪಿನಂಗಡಿ ಘಟಕದ ಅಧ್ಯಕ್ಷರಾದ ಕೆ. ಜಗದೀಶ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಕೆ. ರಾಧಾಕೃಷ್ಣ ನಾಯ್ಕ್, ಸ್ಥಾಪಕಾಧ್ಯಕ್ಷರಾದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ, ಇಂದ್ರಪ್ರಸ್ಥ ವಿದ್ಯಾಲಯದ ಅಧ್ಯಕ್ಷ ಕರುಣಾಕರ ಸುವರ್ಣ, ಶ್ರೀ ರಾಮ ಶಾಲೆ ವೇದಶಂಕರನಗರ ಇದರ ಸಂಚಾಲಕರಾದ ಯು. ಜಿ. ರಾಧ, ಕಹಳೆ ನ್ಯೂಸ್’ನ ಶ್ಯಾಮ್ ಸುದರ್ಶನ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಪಾವಂಜೆ ಮೇಳದ ರಂಗಕರ್ಮಿ ರಘು ಶೆಟ್ಟಿ ನಾಳ, ಯಕ್ಷಗಾನ ಪೋಷಕ ವಿಶ್ವನಾಥ ಶೆಟ್ಟಿ ಕಂಗ್ವೆ ಹಾಗೂ ಪುತ್ತೂರು ತಾಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಯು. ಎಲ್. ಉದಯ್ ಕುಮಾರ್ ಇವರನ್ನು ಗೌರವ ಧನದೊಂದಿಗೆ ಸಂಮಾನಿಸಲಾಯಿತು.





ಯಕ್ಷ ಸಂಗಮ ಉಪ್ಪಿನಂಗಡಿ ವತಿಯಿಂದ ಶ್ರೀ ರಾಮ ಶಾಲೆಯಲ್ಲಿ ನಡೆಯುತ್ತಿರುವ ಯಕ್ಷ ಶಿಕ್ಷಣ ಹಾಗೂ ಫಲಾನುಭವಿಗಳಿಗೆ ಗೃಹ ನಿರ್ಮಾಣದ ಸಲುವಾಗಿ ಗಣೇಶೋತ್ಸವ ಸಮಿತಿಗೆ ಸಹಾಯ ಧನವನ್ನು ನೀಡಲಾಯಿತು. ಸುಧಾಕರ್ ಕಾರ್ಯಕ್ರಮ ನಿರೂಪಿಸಿ ರವೀಶ್ ಹೆಚ್. ಟಿ. ವಂದಿಸಿದರು. ಪಾವಂಜೆ ಮೇಳದವರಿಂದ “ಶ್ರೀ ತುಳಸಿ” ಯಕ್ಷಗಾನ ಪ್ರದರ್ಶನ ನಡೆಯಿತು.

























































































































