
ಪಡುಬಿದ್ರೆಯ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನಕ್ಕೆ ಸಂಬಂಧಪಟ್ಟ ಪಂಚದೈವಗಳಿಗೆ ಪಡುಬಿದ್ರಿ ಗಣಪತಿ ಪ್ರೌಢಶಾಲಾ ಹಳೆ ವಿದ್ಯಾರ್ಥಿ ಸಂಘದ ಸಹಭಾಗಿತ್ವದಲ್ಲಿ ದೇಗುಲದ ಪುಷ್ಕರಣಿ ತಟದಲ್ಲಿ ನಿರ್ಮಿಸಲ್ಪಡುವ ಅಂದಾಜು 15 ರಿಂದ 20 ಲಕ್ಷ ರೂ ವೆಚ್ಚದ ನೂತನ ಗುಡಿಗಳ ಕಾಮಗಾರಿಯ ಶಿಲಾನ್ಯಾಸವು ಫೆಬ್ರವರಿ 18 ರಂದು ಜರಗಿತು. ಈ ಕುರಿತಾದ ಧಾರ್ಮಿಕ ವಿಧಿ ವಿಧಾನಗಳನ್ನು ದೇವಸ್ಥಾನದ ಅರ್ಚಕರಾದ ಗುರುರಾಜ ಭಟ್ ಎರ್ಮಾಳು ನೆರವೇರಿಸಿದರು. ಶಿಲಾನ್ಯಾಸವನ್ನು ಸಂಘದ ಹಿರಿಯ ಸದಸ್ಯ ಸದಾಶಿವ ಆಚಾರ್ ನೆರವೇರಿಸಿದರು.


ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಕೆ ರಾಜಗೋಪಾಲ ಉಪಾಧ್ಯಾಯ, ಅನುವಂಶಿಕ ಮೊಕ್ತೇಸರ ಭವಾನಿಶಂಕರ ಹೆಗ್ಡೆ, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ರವೀಂದ್ರನಾಥ ಜಿ ಹೆಗ್ಡೆ, ಕಾರ್ಯದರ್ಶಿ ಶ್ರೀನಾಥ್ ಹೆಗ್ಡೆ, ಮುರಳಿನಾಥ್ ಶೆಟ್ಟಿ, ಅನಿಲ್ ಶೆಟ್ಟಿ ಪೇಟೆ ಮನೆ, ನವೀನ್ ಎನ್ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನವೀನ್ ಚಂದ್ರ ಜೆ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಮಾಕಾಂತ್ ರಾವ್, ಕೋಶಾಧಿಕಾರಿ ಕಸ್ತೂರಿ ರಾಮಚಂದ್ರ, ಸರ್ವಜ್ಞ ಆಚಾರ್, ಪ್ರಕಾಶ್ ಶೆಟ್ಟಿ ಪೇಟೆ ಮನೆ, ಮಾಧವ ಸಿ ಶೆಟ್ಟಿ, ಮಧುಕರ್ ಶೆಣೈ, ರಾಜೇಂದ್ರ ಶೆಣೈ, ಸತೀಶ್ ಆಚಾರ್ಯ, ಸುಮತಿ ವಿ ಹೆಗ್ಡೆ, ಪೂರ್ಣಿಮಾ ಜಯಶಂಕರ, ಅನಸೂಯ ಶೆಣೈ ಹಾಗೂ ಉಭಯ ಶಾಲಾ ಅಧ್ಯಾಪಕರು ಉಪಸ್ಥಿತರಿದ್ದರು.

























































































































