

ಬೆಳಿಯೂರು ಗುತ್ತು ಪ್ರೊಡಕ್ಷನ್ ಹೌಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ‘ವಿಲೇಜ್ ಬಾಯ್ಸ್’ ಕನ್ನಡ ಚಲನಚಿತ್ರದ ಮುಹೂರ್ತ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಿತು. ದೇವಸ್ಥಾನ ಅನುವಂಶಿಕ ಪ್ರಧಾನ ಅರ್ಚಕರಾದ ಶ್ರೀ ಹರಿ ಅಸ್ರಣ್ಣರು ದೇವರ ಸಾನಿಧ್ಯದಲ್ಲಿ ಕ್ಯಾಮೆರಾ ಪೂಜೆ ಸಲ್ಲಿಸಿ, ಸಿನಿಮಾ ಕ್ಲಾಪ್ ಬೋರ್ಡ್ ಮಾಡಿ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣರು ಸಿನಿಮಾ ತಂಡಕ್ಕೆ ಆಶೀರ್ವಾವಚನ ನೀಡಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ತುಳು ರಂಗಭೂಮಿಯ ಖ್ಯಾತ ರಂಗ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್ ಬೈಲ್, ನಿವೃತ್ತ ಸೇನಾಧಿಕಾರಿ ರಂಗನಾಥ್ ಎಸ್ ರೈ, ಬನ ಸಿನಿಮಾ ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ, ಬನ ಸಿನಿಮಾದ ನಿರ್ಮಾಪಕ ಮನೋಹರ್ ರೈ, ಅನಾರ್ಕಲಿ ಸಿನಿಮಾದ ನಿರ್ದೇಶಕ ಹರ್ಷಿತ್ ಸೋಮೇಶ್ವರ, ನವೋದಯ ಪ್ರೌಢ ಶಾಲೆ ಬೆಟ್ಟಂಪಾಡಿ ಇದರ ಅಧ್ಯಕ್ಷರಾದ ಪುಷ್ಪರಾಜ್ ಇರ್ದೆ ಮತ್ತು ಕಾರ್ಯದರ್ಶಿಗಳಾದ ಚಂದ್ರಶೇಖರ್ ಮೂರೂರು, ಆನಂದ್ ಶೆಟ್ಟಿ ಕುಕ್ಕುಂದೂರು ಅಥಿತಿಗಳಾಗಿ ಉಪಸ್ಥಿತರಿದ್ದು ಚಿತ್ರೀಕರಣಕ್ಕೆ ಶುಭ ಹಾರೈಸಿದರು.


ವಿಲೇಜ್ ಬಾಯ್ಸ್ ಕನ್ನಡ ಸಿನಿಮಾಕ್ಕೆ ನಿರ್ಮಾಪಕರಾಗಿ ರೈ ಸುಮತಿ ಎಜುಕೇಶನ್ ಟ್ರಸ್ಟ್ ನ ಕಾರ್ಯಾಧ್ಯಕ್ಷ ಡಾ| ಅರುಣೋದಯ ಎಸ್ ರೈಯವರು ಬಂಡವಾಳ ಹೂಡಿದ್ದು, ಕೀರ್ತನ್ ಶೆಟ್ಟಿ ಸುಳ್ಯ ಮತ್ತು ಬಾಬಾ ಪ್ರಸಾದ್ ಅರಸ ಕುತ್ಯಾರು ನಿರ್ದೇಶನ ಮಾಡಲಿದ್ದಾರೆ. ತಾರಾಂಗಣದಲ್ಲಿ ನವೀನ್ ಡಿ ಪಡೀಲ್, ಪ್ರಕಾಶ್ ತುಮಿನಾಡು, ಬಾಬಾ ಪ್ರಸಾದ್ ಅರಸ ಕುತ್ಯಾರು, ದಯಾನಂದ ರೈ ಬೆಟ್ಟಂಪಾಡಿ, ವಿಜಯ ಹರಿ ರೈ, ಅಕ್ಷತಾ ಶೆಟ್ಟಿ, ಶಶಿರಾಜ್, ಚಂದ್ರಶೇಖರ್ ಸಿದ್ಧಕಟ್ಟೆ, ಶರತ್ ಆಳ್ವ, ಮೋಹನ್ ಹೆಗ್ಡೆ, ಜ್ಯೋತಿ ಕುಲಾಲ್, ಸುಪಲಿತ ಹಾಗೂ ಅನೇಕ ಬಾಲ ಕಲಾವಿದರು ಮತ್ತು ಹಿರಿಯ ಕಲಾವಿದರು ಅಭಿನಯಿಸಲಿದ್ದಾರೆಂದು ಚಿತ್ರ ತಂಡ ಮಾಹಿತಿಯನ್ನು ಹಂಚಿಕೊಂಡಿದೆ.
ಈ ಚಿತ್ರದ ತಂತ್ರಜ್ಞಾನ ವಿಭಾಗದಲ್ಲಿ ಛಾಯಾಗ್ರಾಹಕರಾಗಿ ಚರಣ್ ಆಚಾರ್ಯ ಪುತ್ತೂರು, ಸಂಗೀತ ನಿರ್ದೇಶನ ಕಿಶೋರ್ ಶೆಟ್ಟಿ, ನವೀನ್ ನಿರೋಲ್ತಾಡಿ, ಸಹ ನಿರ್ದೇಶನ ವಿಭಾಗದಲ್ಲಿ ರಝಾಕ್ ಪುತ್ತೂರು, ದೀಕ್ಷಿತ್ ಶೆಟ್ಟಿ ಕಾರ್ಕಳ, ಯತೀಶ್ ಕುಲಾಲ್ ಬೆಟ್ಟಂಪಾಡಿ, ಸಾಗರ್, ಕಲಾ ವಿಭಾಗದಲ್ಲಿ ಹರ್ಷಕಿರಣ ಆಚಾರ್ಯ ಪ್ರತಾಪನಗರ, ದೀಕ್ಷಿತ್ ಕುಲಾಲ್ ಕಬಕ, ಬ್ರಿಜೇಶ್ ಕುಲಾಲ್ ಕುಂಡಡ್ಕ, ದಿಶಾನ್ ರೈ ಬೆಟ್ಟಂಪಾಡಿ, ಪ್ರೊಡಕ್ಷನ್ ಮ್ಯಾನೇಜ್ಮೆಂಟ್ ವಿಭಾಗದಲ್ಲಿ ಮೋಹನ್ ಹೆಗ್ಡೆ ಮುಂಬೈ, ಜೈದೀಪ್ ರೈ ಕೊರಂಗ ಮುಂತಾದವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾರ್ಯಕ್ರಮವನ್ನು ಬಾಬಾ ಪ್ರಸಾದ್ ಅರಸ ನಿರೂಪಿಸಿ, ವಂದಿಸಿದರು.





























































































































