
ಪಡುಬಿದ್ರಿಯ ಅಗ್ರಜ ಮಂಜುಶ್ರೀ ಕಟ್ಟಡದಲ್ಲಿ ಪ್ರಾರಂಭಿಸಲಾದ ಶಮಿತ್ ಶೆಟ್ಟಿ ನೇತೃತ್ವದ ಮಂಗಳೂರು ಗ್ರೂಪ್ ನ 25ನೇ ಶಾಖೆ ‘ಸೆವೆನ್ತ್ ಹೆವನ್ ಕೇಕ್ ಶಾಪ್’ ಅನ್ನು ಫೆಬ್ರವರಿ 15ರಂದು ಕಾಪು ಕ್ಷೇತ್ರದ ಜನಪ್ರಿಯ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿ, ತುಳುನಾಡಿನ ಯುವಕ ಶಮಿತ್ ಶೆಟ್ಟಿ ಅವರು ಸೆವೆನ್ತ್ ಹೆವನ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ಅವರಿಗೆ ಶುಭವಾಗಲಿ ಎಂದು ಹಾರೈಸಿದರು. ಅಲೆವೂರು ದೇವಿ ಪ್ರಸನ್ನ ಉಪಾಧ್ಯಾಯ ಶುಭಾಶಯಗೈದರು.

ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ವಂದನಾ ರೈ ಮಾತನಾಡಿ, ರುಚಿಗೆ ಸೆವೆನ್ತ್ ಹೆವನ್ ಮನೆ ಮಾತಾಗಲಿ ಎಂದರು. ಯೂಟ್ಯೂಬರ್ ಹೆಗ್ಗದ್ದೆ ಸಂದೀಪ್ ಶೆಟ್ಟಿ ಅವರು ಮಾತನಾಡಿದರು. ನೆರೆದ ಗಣ್ಯರನ್ನು ಗೌರವಿಸಲಾಯಿತು. ಕಿರಣ್, ಸುಧಾಕರ ಶೆಟ್ಟಿ, ದೇವಕಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಕೃತಿಶ್ರೀ ಶೆಟ್ಟಿ ಪ್ರಾಸ್ತಾವಿಸಿ, ಮುಂಬಯಿ ಮೂಲದ ಸಸ್ಯಾಹಾರಿ ಕೇಕ್ ಶಾಪ್ ಇದಾಗಿದ್ದು, ಇಲ್ಲಿ ಏಳು ನಿಮಿಷದಲ್ಲಿ ಕೇಕ್ ತಯಾರಿಸಿ ಕೊಡಲಾಗುವುದು. ಮುಂದೆ ಬ್ರಹ್ಮಾವರ, ರಾಣೆಬೆನ್ನೂರು ಮುಂತಾಡೆದೆಗಳಲ್ಲಿ ಶಾಖೆಗಳು ತೆರೆಯಲಿವೆ ಎಂದರು. ನಿತೇಶ್ ಶೆಟ್ಟಿ ಎಕ್ಕಾರು ಕಾರ್ಯಕ್ರಮ ನಿರ್ವಹಿಸಿದರು. ಕೇಕ್ ಕತ್ತರಿಸಿ ಸಮಾರಂಭದಲ್ಲಿ ಸಂಭ್ರಮಿಸಲಾಯಿತು.























































































































