
ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ (ರಿ), ವಿಶ್ವಕರ್ಮ ಸಹಕಾರ ಬ್ಯಾಂಕ್ ಉಡುಪಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಷ್ಣುಮೂರ್ತಿ ಫ್ರೆಂಡ್ಸ್ (ರಿ) ದೊಡ್ಡಣ್ಣಗುಡ್ಡೆ, ವಿಷ್ಣುಮೂರ್ತಿ ಮಹಿಳಾ ಘಟಕ, ದೊಡ್ಡಣ್ಣಗುಡ್ಡೆ ನಾಥ ಪಂಥ ಅಲೆಮಾರಿ ಜೋಗಿ ಮಹಿಳಾ ವೇದಿಕೆ (ರಿ) ಉಡುಪಿ ಜಿಲ್ಲೆ ಇವರುಗಳ ಸಹಯೋಗದಲ್ಲಿ ‘ಸಿದ್ದ ಕಣ್ಣಿನ ಹನಿ ಕಾರ್ಯಕ್ರಮ’ ಫೆಬ್ರವರಿ 8 ರಂದು ವಿಷ್ಣುಮೂರ್ತಿ ಫ್ರೆಂಡ್ಸ್ ದೊಡ್ಡಣ್ಣಗುಡ್ಡೆ ಇವರ ಕಚೇರಿಯ ಬಳಿ ಇರುವ ಸಾರ್ವಜನಿಕ ಆಟದ ಮೈದಾನದ ವಠಾರದಲ್ಲಿ ಉದ್ಘಾಟನೆಗೊಂಡಿತು. ಕಾರ್ಯಕ್ರಮವನ್ನು ಉಡುಪಿ ವಿಧಾನಸಭಾ ಕ್ಷೇತ್ರದ ನಿಕಟ ಪೂರ್ವ ಶಾಸಕರಾದ ಕೆ. ರಘುಪತಿ ಭಟ್ ರವರು ದೀಪ ಬೆಳಗಿಸಿ ಉದ್ಘಾಟಿಸಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದಂತಹ ವಿಷ್ಣುಮೂರ್ತಿ ಫ್ರೆಂಡ್ಸ್ ಸಂಘವನ್ನು ಮತ್ತು ಅವರ ಕಾರ್ಯ ಚಟುವಟಿಕೆಯನ್ನು ಪ್ರಶಂಸಿಸಿದರು. ಸಂಘದ 20 ನೇ ವರ್ಷದ ಕಾರ್ಯಘಟ್ಟದಲ್ಲಿ ಉತ್ತಮ ಕಾರ್ಯಕ್ರಮಗಳನ್ನು ನಡೆಸಿಕೊಂಡು ಸಾರ್ವಜನಿಕರಿಗೂ ಸಾಮಾಜಿಕವಾಗಿ ಸೇವೆಗಳನ್ನು ನೀಡುತ್ತಾ ಬಂದಿರುವಿರಿ. ಅದೇ ರೀತಿ ಸಿದ್ಧ ಕಣ್ಣಿನ ಹನಿ ಕಾರ್ಯಕ್ರಮವು ಪ್ರಪ್ರಥಮವಾಗಿ ಉಡುಪಿಯಲ್ಲಿ ನಡೆದಿರುವುದರಿಂದ ಕಾರ್ಯಕ್ರಮದ ನಿರ್ವಾಹಕರಿಗೂ ಪ್ರೋತ್ಸಾಹಿಸಿದರು. ಸಿದ್ಧ ಕಣ್ಣಿನ ಹನಿಯ ಉಪಯೋಗವನ್ನು ಪಡೆದುಕೊಂಡು ಕಣ್ಣಿನ ತೊಂದರೆಗಳನ್ನು ದೂರ ಮಾಡಿಕೊಳ್ಳಿ ಎಂದು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ ಮುಂಬರುವ ಎಲ್ಲಾ ನಿಮ್ಮಕಾರ್ಯಗಳಲ್ಲಿ ಸಫಲತೆ ಸಿಗಲಿ ಎಂದು ಶುಭ ಹಾರೈಸಿದರು. ರಾಜ್ಯ ಸಮಿತಿಯ ಸಂಯೋಜಕರಾದ ಕೆ.ಪಿ ಜಗದೀಶ್ ಅಧಿಕಾರಿ ಕಾರ್ಯಕ್ರಮವನ್ನು ಶ್ಲಾಘಿಸಿ ಪ್ರೋತ್ಸಾಹದ ಹಿತನುಡಿಗಳನ್ನು ತಿಳಿಸಿದರು.

ಸಮಿತಿಯ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ ಮಾತನಾಡಿ, ಸಿದ್ದ ಕಣ್ಣಿನ ಹನಿಯ ಉಪಯೋಗವನ್ನು ಎಲ್ಲರೂ ಪಡೆದುಕೊಂಡು ಆರೋಗ್ಯವನ್ನು ವೃದ್ಧಿಸಿ ಎಂದು ತಿಳಿ ಹೇಳಿದರು. ನಮ್ಮ ಸಮಿತಿ ಹಲವರು ಜನಪರ ಯೋಜನೆಗಳನ್ನು ಮಾಡುತ್ತಲೇ ಇದೆ. ಮುಂಬರುವ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಇತರ ಭಾಗಗಳಲ್ಲಿ ಕೂಡಾ ಇಂತಹ ಕಾರ್ಯಕ್ರಮಗಳನ್ನು ಮಾಡುವ ಇಚ್ಛೆ ಇದ್ದು ನಮ್ಮ ಸಹಕಾರ ನಿಮಗೆ ಸದಾ ಇದೆ ಎಂದು ಭರವಸೆಯ ಮಾತಾಡಿದರು. ಜೋಗಿ ಸಮಾಜದ ಅಧ್ಯಕ್ಷ ರಮೇಶ್ ರವರು ಮಾತನಾಡಿ, ಈ ಕಾರ್ಯಕ್ರಮವು ವಿಶೇಷತೆಯನ್ನು ಹೊಂದಿದ್ದು ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಿ ಎಂದು ತಿಳಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷ ರಾಧಾಕೃಷ್ಣನ್ ಅವರು ಮಾತನಾಡಿ, ಸಿದ್ದ ಕಣ್ಣಿನ ಹನಿಯನ್ನು ಪ್ರತಿ ತಿಂಗಳಿನ ಎರಡನೇ ಭಾನುವಾರ ನಮ್ಮ ಈ ಕಚೇರಿಯಲ್ಲಿ ನಡೆಯಲಿದ್ದು ಎಲ್ಲರೂ ಇದರ ಉಪಯೋಗವನ್ನು ಪಡೆದುಕೊಂಡು ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಶುಭ ಹಾರೈಸಿದರು. ಸುಮಾರು 350 ಕ್ಕಿಂತಲೂ ಹೆಚ್ಚು ನಾಗರೀಕರು ಕಾರ್ಯಕ್ರಮದ ಸದುಪಯೋಗ ಪಡೆದರು.
ಈ ಕಾರ್ಯಕ್ರಮದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ರಘುಪತಿ ಭಟ್, ಸಮಿತಿಯ ರಾಜ್ಯ ಸಂಯೋಜಕ ಜಗದೀಶ್ ಅಧಿಕಾರಿ, ಸಮಿತಿಯ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಎಂ ಶೆಟ್ಟಿ, ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಅರುಣ್ ಪ್ರಕಾಶ್ ಶೆಟ್ಟಿ, ವಿಶ್ವಕರ್ಮ ಸಹಕಾರಿ ಬ್ಯಾಂಕ್ ನಿರ್ದೇಶಕ ಜಗದೀಶ್ ಆಚಾರ್ಯ, ನಾಥಪಂಥ ಅಲೆಮಾರಿ ಜೋಗಿ ಮಹಿಳಾ ವೇದಿಕೆ ಉಡುಪಿ ಜಿಲ್ಲೆಯ ಅಧ್ಯಕ್ಷೆ ಅನುಪಮಾ ಎಂ ಜೋಗಿ, ಜೋಗಿ ಸಮಾಜ ಸೇವಾ ಸಮಿತಿ ಗೌರವಾಧ್ಯಕ್ಷರಾದ ಹರೀಶ್ಚಂದ್ರ ಜೋಗಿ, ಕುಂದಾಪುರ ಜೋಗಿ ಸಮಾಜ ಸೇವಾ ಸಮಿತಿ ಅಧ್ಯಕ್ಷರಾದ ರಮೇಶ್ ಎಚ್ ಎಸ್, ಸಿದ್ದ ಕಣ್ಣಿನ ಹನಿ ಕಾರ್ಯಕ್ರಮದ ನಿರ್ವಾಹಕರಾದ ಶಿವ ಕುಮಾರ್ ಮತ್ತು ನವೀನ್ ಕುಮಾರ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಷ್ಣುಮೂರ್ತಿ ಫ್ರೆಂಡ್ಸ್ ಅಧ್ಯಕ್ಷ ರಾಧಾಕೃಷ್ಣನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅನುಪಮಾ ಎಂ ಜೋಗಿ ನಿರೂಪಿಸಿ ವಂದಿಸಿದರು.





















































































































