
ಜೇಸಿಐ ಕಾರ್ಕಳ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜೇಸಿ ಇಂಟರ್ನ್ಯಾಷನಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಕಾರ್ಕಳ ಇಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ವಹಿಸಿದ್ದ ಘಟಕದ 2025ನೇ ಸಾಲಿನ ಅಧ್ಯಕ್ಷೆ ಶ್ವೇತಾ ಎಸ್ ಜೈನ್ ತನ್ನ ಒಂದು ವರ್ಷದ ಸಾಧನೆ ಮತ್ತು ಕಾರ್ಯಕ್ರಮಗಳ ಸಂಕ್ಷಿಪ್ತ ವರದಿಯನ್ನು ಮಂಡಿಸಿ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದರು. 2026 ರ ಸಾಲಿನ ನೂತನ ಅಧ್ಯಕ್ಷ ಅವಿನಾಶ್ ಶೆಟ್ಟಿಯವರಿಗೆ ನಿಕಟ ಪೂರ್ವಾಧ್ಯಕ್ಷೆ ಶ್ವೇತಾ ಎಸ್ ಜೈನ್ ಹಾಗೂ ನೂತನ ಸದಸ್ಯರಿಗೆ ಜೇಸಿ ವಲಯ 15ರ ವಲಯ ಅಧ್ಯಕ್ಷ ಸಂತೋಷ್ ಶೆಟ್ಟಿ ಪ್ರತಿಜ್ಞಾ ವಿಧಿ ಬೋಧಿಸಿ ಶುಭ ಹಾರೈಸಿದರು.

ಜೇಸಿ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚಿತ್ತರಂಜನ್ ಶೆಟ್ಟಿ ಮಾತನಾಡಿ, ನಿಕಟ ಪೂರ್ವಾಧ್ಯಕ್ಷರ ಕಾರ್ಯಕ್ರಮಗಳನ್ನು ಶ್ಲಾಘಿಸಿ, ನೂತನ ಅಧ್ಯಕ್ಷರು ಇನ್ನೂ ಉತ್ತಮ ಕೆಲಸ ಕಾರ್ಯಗಳನ್ನು ಮಾಡುವಂತಾಗಲಿ ಎಂದು ಶುಭ ಹಾರೈಸಿದರು. ವಲಯ ಉಪಾಧ್ಯಕ್ಷ ಜಿತೇಶ್ ಪಿರೇರಾ, 2025ರ ಕಾರ್ಯದರ್ಶಿ ಸುಶ್ಮಿತಾ ರಾವ್, ಲೇಡಿ ಜೇಸಿ ಸಂಯೋಜಕಿ ಶಹಿನ್ ರಿಜ್ವಾನ್ ಖಾನ್, ಜೂನಿಯರ್ ಜೇಸಿ ಅಧ್ಯಕ್ಷೆ ಅಭಿಜ್ಞಾ ಆರ್ ವರ್ಮ, ಪೂರ್ವ ಅಧ್ಯಕ್ಷ ಪ್ರಚಿತ್ ಕುಮಾರ್, 2026 ರ ಸಾಲಿನ ಲೇಡಿ ಜೇಸಿ ಸಂಯೋಜಕಿ ಪವಿತ್ರಾ ಶೆಟ್ಟಿ, ಜೂನಿಯರ್ ಜೇಸಿ ಅಧ್ಯಕ್ಷ ಆಸ್ತಿಕ್ ಕುಲಾಲ್, ಕಾರ್ಯಕ್ರಮ ಸಂಯೋಜಕ ನಿತಿನ್ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಇಬ್ಬರು ವಿದ್ಯಾರ್ಥಿಗಳಿಗೆ ತಲಾ ರೂ. 10,000/- ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಶಿಕ್ಷಕ ಹರಿಶ್ಚಂದ್ರ ಆಚಾರ್ ಸ್ವಾಗತಿಸಿದರು. ಜೇಸಿ ವಾಣಿಯನ್ನು ರೇವತಿ ಶೆಟ್ಟಿ ವಾಚಿಸಿದರು. ಕಾರ್ಯದರ್ಶಿ ಸುಶಾಂತ್ ಶೆಟ್ಟಿ ವಂದಿಸಿದರು.


















































































































