ಅಡ್ವೆ ಕೆಲ್ಲಾರ್ ಪಲಿಮಾರು ದಿವಂಗತ ವಿಠಲ ಶೆಟ್ಟಿ ಅವರ ಧರ್ಮ ಪತ್ನಿ ಹಾಗೂ ಮಲಾಡ್ ಪಶ್ಚಿಮ ಡ್ರೀಮ್ ಪ್ಯಾಲೇಸ್ ಮತ್ತು ಚಾರ್ ಕೋಪ್ ಲೇಕ್ ಗಾರ್ಡನ್ ಹೊಟೇಲ್ ನ ಸುರೇಶ್ ಶೆಟ್ಟಿ ಹಾಗೂ ಸಹೋದರರ ಮಾತೃಶ್ರೀಯವರಾದ ಕಡಂಜ ಹರೇಕಳ ಸರೋಜಿನಿ ಶೆಟ್ಟಿ ಅವರು ಇತ್ತೀಚೆಗೆ ನಿಧನರಾಗಿದ್ದಾರೆ. ಮೃತರು ಸುರೇಶ್ ಶೆಟ್ಟಿ, ದಿವಾಕರ ಶೆಟ್ಟಿ, ಸತೀಶ್ ಶೆಟ್ಟಿ, ಶ್ರೀಕರ್ ಶೆಟ್ಟಿ, ಮಗಳು ವೀಣಾ ರವೀಂದ್ರನಾಥ ಶೆಟ್ಟಿ, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿರುತ್ತಾರೆ.

ದಿವಂಗತರ ಆತ್ಮಸದ್ಗತಿ ಪ್ರಯುಕ್ತ ವೈಕುಂಠ ಸಮಾರಾಧನೆ ಇದೇ ಬರುವ ಜನವರಿ 3, 2026 ರಂದು ನಂದಿಕೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜರುಗಲಿದ್ದು, ಮೃತರ ಕುಟುಂಬಿಕರು, ಬಂಧು ಮಿತ್ರರು ಆಗಮಿಸಿ ಅಗಲಿದ ಮೃತರ ಆತ್ಮಕ್ಕೆ ಸದ್ಗತಿ ದೊರೆಯಲೆಂದು ಪ್ರಾರ್ಥಿಸಬೇಕೆಂದು ಮಗಲಾದ ವೀಣಾ ರವೀಂದ್ರನಾಥ ಶೆಟ್ಟಿ ಮತ್ತು ಬಂಧು ಬಾಂಧವರು ವಿನಂತಿಸಿಕೊಂಡಿದ್ದಾರೆ.

















































































































