
ಗ್ರಾಹಕರ ಮೆಚ್ಚುಗೆಗೆ ಪಾತ್ರವಾದ ಸೆವೆನ್ತ್ ಹೆವೆನ್ ಕೇಕ್ ಶಾಪ್ ನ 23ನೇ ಶಾಖೆ ಡಿಸೆಂಬರ್ 12ರಂದು ಕುಂದಾಪುರದ ಪಾರಿಜಾತ ಹೋಟೆಲ್ ಸಮೀಪವಿರುವ ಶಂಕರ್ ಟವರ್ಸ್ ನೆಲಮಹಡಿಯಲ್ಲಿ ಶುಭಾರಂಭಗೊಂಡಿತು. ಮಾಲಕ ಶಮಿತ್ ಶೆಟ್ಟಿ ಕೆಮ್ತೂರು ಅವರ ತಾಯಿ ದೇವಕಿ ಶೆಟ್ಟಿ ನೂತನ ಶಾಖೆಯನ್ನು ಉದ್ಘಾಟಿಸಿದರು. ಕಟ್ಟಡದ ಮಾಲಕ ಉದ್ಯಮಿ ಸುರೇಶ್ ಭಂಡಾರ್ಕರ್ ರವರು ದೀಪ ಬೆಳಗಿದರು. ಅಶೋಕ್ ಶೆಟ್ಟಿ ಕೆಮ್ತೂರು, ರವೀಂದ್ರ ಶೆಟ್ಟಿ ಮೂಲ್ಕಿ, ರತ್ನಾಕರ ಶೆಟ್ಟಿ ಕಟ್ಟಂಗೇರಿ, ಅಶೋಕ್ ಶೆಟ್ಟಿ ಪೂನಾ, ಜೀವನ್ ಬೆಂಗಳೂರು, ಕುಸುಮ ಶೆಟ್ಟಿ ಮೂಲ್ಕಿ, ವನಿತಾ ಶಿರ್ವ, ಮಾಲಕರಾದ ಶಮಿತ್ ಶೆಟ್ಟಿ, ರಶ್ಮಿ ಶೆಟ್ಟಿ, ಸುಕೇಶ್ ಶೆಟ್ಟಿ, ಸರಿತಾ ಶೆಟ್ಟಿ ಉಪಸ್ಥಿತರಿದ್ದರು.

ಶುದ್ಧ ಸಸ್ಯಹಾರಿ ಉತ್ಪನ್ನಗಳನ್ನು ತಯಾರಿಸುವ ಈ ಬೇಕರಿಯ ಶಾಖೆಗಳು ದೇಶದ ವಿವಿಧ ನಗರಗಳಲ್ಲಿ ಕಾರ್ಯಾಚರಿಸುತ್ತಿದೆ. ಗ್ರಾಹಕರಿಗೆ ಸ್ಥಳದಲ್ಲಿಯೇ ಬೇಕರಿ ಉತ್ಪನ್ನಗಳನ್ನು ತಯಾರಿಸಿ ಕೊಡುವುದು ಇಲ್ಲಿನ ವಿಶೇಷತೆಯಾಗಿದೆ. ಇಲ್ಲಿ ಶುಚಿ ರುಚಿಯಾದ ವೈವಿಧ್ಯಮಯ ಕೇಕ್ ಐಟಂಗಳು ಗ್ರಾಹಕರ ಕೈಗೆಟಗುವ ಬೆಲೆಯಲ್ಲಿ ದೊರೆಯಲಿದೆ. ಅತ್ಯುತ್ತಮ ಆತಿಥ್ಯ, ರುಚಿಕರ ತಿನಿಸುಗಳು ಮತ್ತು ಉತ್ತಮ ಅನುಭವ ಒದಗಿಸಲು ಸಂಸ್ಥೆ ಬದ್ಧವಾಗಿದ್ದು, ಗ್ರಾಹಕರ ತೃಪ್ತಿಯೇ ಸಂಸ್ಥೆಯ ಧ್ಯೇಯವಾಗಿದೆ. ಅಲ್ಲದೇ ಗ್ರಾಹಕರ ನಂಬಿಕೆ ಮತ್ತು ಬೆಂಬಲ ಸಂಸ್ಥೆಯ ಬೆಳವಣಿಗೆಯ ಪ್ರಮುಖ ಕಾರಣವಾಗಿದೆ. ಗ್ರಾಹಕರಿಗೆ ಅನುಕೂಲವಾಗುವಂತೆ ಕೇವಲ ಏಳು ನಿಮಿಷಗಳಲ್ಲಿ ಕೇಕ್ ರೆಡಿ ಆಗುತ್ತದೆ. ಗ್ರಾಹಕರು ಇಷ್ಟಪಡುವ ಕೇಕ್ ತಯಾರಿಸಿ ಕೊಡಲಾಗುವುದು ಎಂದು ಮಾಲಕ ಶಮಿತ್ ಶೆಟ್ಟಿ ತಿಳಿಸಿದರು.





















































































































