ಸುಳ್ಯ ತಾಲೂಕು ಬಂಟರ ಯಾನೆ ನಾಡವರ ಸಂಘದಿಂದ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ ಸಮಾರಂಭವು ಡಿಸೆಂಬರ್ ತಿಂಗಳ 28 ರಂದು ನಡೆಯಲಿದ್ದು, 2024- 25 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡ 85ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರುವ ಸ್ವಜಾತಿಯ ವಿದ್ಯಾರ್ಥಿಗಳು ಅಂಕಪಟ್ಟಿಯ ಜೆರಾಕ್ಸ್ ಪ್ರತಿಯೊಂದಿಗೆ ಭಾವಚಿತ್ರ ಮತ್ತು ಸ್ವವಿಳಾಸದ ವಿವರವನ್ನು ತಮ್ಮ ತಮ್ಮ ವಲಯದ ಅಧ್ಯಕ್ಷರಲ್ಲಿ ಅಥವಾ ಕಚೇರಿ ಕಾರ್ಯದರ್ಶಿ ಕುಸುಮೋಧರ ರೈ (9343243257) ಯವರಲ್ಲಿ ಡಿಸೆಂಬರ್ 2ರ ಮೊದಲು ನೀಡಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬಿಪಿಎಲ್ ಪಡಿತರ ಚೀಟಿ ಹೊಂದಿದವರಿಗೆ ಅಂಕಗಳ ಪರಿಗಣನೆ ಇರುವುದಿಲ್ಲ. ಅದೇ ರೀತಿ ಜಿಲ್ಲಾಮಟ್ಟದ ವಿಜೇತ ಪ್ರತಿಭಾನ್ವಿತ ವಿದ್ಯಾರ್ಥಿಗಳು ಕೂಡ ತಮ್ಮ ಸಾಧನೆಯ ವಿವರಗಳನ್ನು ನೀಡಬಹುದೆಂದು ತಿಳಿಸಿದ್ದಾರೆ.










































































































