ಬ್ರಹ್ಮಾವರ ನ. 14: ಇಲ್ಲಿನ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನಲ್ಲಿ ಮಕ್ಕಳ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಫೆÇ್ರ. ಡಾ. ಈಶ್ವರೀ ಕೆ. ಆಗಮಿಸಿದ್ದರು. ಅವರು ಚಿಣ್ಣರ ಹಬ್ಬವನ್ನು ದೀಪ ಬೆಳಗಿ ಉದ್ಘಾಟಿಸಿ ಮಾತನಾಡಿ ಪೆÇೀಷಕರಿಗೆ ದೇವರು ಕೊಟ್ಟ ಅತ್ಯಮೂಲ್ಯವಾದ ಕೊಡುಗೆ ಎಂದರೆ ಮಕ್ಕಳು. ನಿಮ್ಮೆಲ್ಲರ ನಗುವನ್ನು ನೋಡುವಾಗ ಎಲ್ಲಾ ಚಿಂತೆಗಳು ಮರೆತುಹೋಗುತ್ತದೆ. ನೀವೆಲ್ಲರೂ ಆರೋಗ್ಯ ಮತ್ತು ಜ್ಞಾನದ ಸಂಪಾದನೆಗೆ ಪ್ರಾಮುಖ್ಯತೆಯನ್ನು ಕೊಡಬೇಕು. ಯಾವುದೇ ಉನ್ನತ ಹುದ್ದೆಯನ್ನು ಪಡೆದರೂ ಇತರರ ಬಗ್ಗೆ ಕರುಣೆ ನಿಮ್ಮಲ್ಲಿರಬೇಕು. ಸಾಮಾಜಿಕ ಮಾಧ್ಯಮಗಳನ್ನು ಜವಾಬ್ದಾರಿಯಿಂದ ಸಕಾರಾತ್ಮಕವಾಗಿ ಬಳಕೆ ಮಾಡಬೇಕೆಂದರು.

ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿಯವರು ವಿದ್ಯಾರ್ಥಿಗಳಿಗೆ ಮಕ್ಕಳ ದಿನಾಚರಣೆಯ ಶುಭಾಶಯ ತಿಳಿಸಿ ವಿದ್ಯಾರ್ಥಿಗಳಿಗೆ ಪೆÇೀಷಕರು, ಹಿರಿಯರು ಮತ್ತು ಶಿಕ್ಷಕರು ನೀಡುವ ಒಳ್ಳೆಯ ಸಲಹೆಗಳನ್ನು ಆಲಿಸಿರಿ ಮತ್ತು ಪಾಲಿಸಿರಿ ಎಂದು ತಿಳಿಸಿದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಮಾತನಾಡಿ ನೀವೆಲ್ಲರೂ ಇಂದು ಹೊಸ ಚೈತನ್ಯದೊಂದಿಗೆ ಪ್ರಕಾಶಿಸುತ್ತಿದ್ದೀರಿ. ಇಂದಿನ ಅನುಭವದೊಂದಿಗೆ ಮುಂದಿನ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ನಿಮ್ಮನ್ನು ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳದೆ ಧೈರ್ಯದಿಂದ ಮುನ್ನಡೆಯಬೇಕೆಂದರು. ಸಂಸ್ಥೆಯ ಶಿಕ್ಷಕ ವೃಂದದವರು ನೃತ್ಯ ಗಾಯನ, ಪ್ರಹಸನಗಳ ಮೂಲಕ ಮನೋರಂಜನೆಯ ರಸದೌತಣವನ್ನು ಉಣಬಡಿಸಿದರು. ವಿದ್ಯಾರ್ಥಿಗಳು ಪ್ರತಿಭಾ ಪ್ರದರ್ಶನ ಮಾಡಿದರು. ಕಾರ್ಯಕ್ರಮದಲ್ಲಿ ಜಿ ಎಮ್ ಗ್ಲೋಬಲ್ ಸ್ಕೂಲ್ನ ಆಡಳಿತ ನಿರ್ದೇಶಕರಾದ ಪ್ರಣವ್ ಶೆಟ್ಟಿ, ಶಾಲಾ ಆಡಳಿತ ಮಂಡಳಿಯ ಸದಸ್ಯೆ ತಾರಾ ಪ್ರಕಾಶ್ಚಂದ್ರ ಶೆಟ್ಟಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.








































































































