ಮಂಗಳೂರಿನ ಬೋಳಾರದ ಉದ್ಯಮಿ ಮಂಜರಿ ಫುಡ್ಸ್, ಎಸ್.ಆರ್ ಎಂಟರ್ಪ್ರೈಸಸ್ ಮಾಲಕ ರಮೇಶ್ ಶೆಟ್ಟಿ ಕಲ್ಕಾರು ಅವರ ತಾಯಿ ಹರಿಣಾಕ್ಷಿ ಎಂ ಶೆಟ್ಟಿ ಅವರಿಗೆ ನುಡಿನಮನ ರವಿವಾರ ಕದ್ರಿ ಶ್ರೀ ಮಂಜುನಾಥೇಶ್ವರ ಕ್ಷೇತ್ರದ ಮಂಜುಶ್ರೀ ಹಾಲ್ ನಲ್ಲಿ ನೆರವೇರಿತು. ಸವಣೂರು ವಿದ್ಯಾರಶ್ಮಿ ಸಂಸ್ಥೆಗಳ ಮುಖ್ಯಸ್ಥ ಕೆ ಸೀತಾರಾಮ ರೈ ಸವಣೂರು ಅವರು ಮಾತನಾಡಿ, ಹರಿಣಾಕ್ಷಿ ಎಂ ಶೆಟ್ಟಿಯವರು ನಾಲ್ಕು ಜನ ಗಂಡು ಮಕ್ಕಳನ್ನು ಸಲಹಿ ಒಳ್ಳೆ ವಿದ್ಯಾವಂತರನ್ನಾಗಿ ಮಾಡಿ ಧರ್ಮ ನಿಷ್ಠರಾಗಿ ಬೆಳೆಸಿದ್ದಾರೆ. ಸಮಾಜಕ್ಕೆ ದಾನ ಧರ್ಮ ಮಾಡುವ ಮೂಲಕ ದೊಡ್ಡ ಶಕ್ತಿಯಾಗಿಸಿದ್ದು ಅವರು ಹಾಕಿಕೊಟ್ಟ ಹಾದಿಯನ್ನು ಮಕ್ಕಳು ಮುನ್ನಡೆಸಲಿ ಎಂದರು. ಕಂಬಳ ಪ್ರೇಮಿ, ಚಲನಚಿತ್ರ ನಟ ಎಡ್ತೂರು ರಾಜೀವ ಶೆಟ್ಟಿ ಅವರು ನುಡಿ ನಮನ ಸಲ್ಲಿಸಿದರು.

ಭಾಗವತ ಪಟ್ಟ ಸತೀಶ್ ಶೆಟ್ಟಿ, ಸಂತೋಷ್ ಕುಮಾರ್ ರೈ ಬೋಳಿಯಾರ್, ಪ್ರಶಾಂತ್ ಕಾಜವ ಮಿತ್ತಕೋಡಿ, ಜಗದೀಶ ಶೆಟ್ಟಿಕುವೆತ್ತ ಬೈಲ್, ಎ ಸಿ ಭಂಡಾರಿ, ಸುಧಾಕರ ರೈ ಮೈಸೂರು, ವಸಂತ ಶೆಟ್ಟಿ ಜೆಪ್ಪು, ಲಯನ್ ಮನೋಜ್ ಚಂದ್ರ ಶೆಟ್ಟಿ ಅವರು ಉಪಸ್ಥಿತರಿದ್ದರು.







































































































