ಶ್ರೀ ಗುರುದೇವ ಸೇವಾ ಬಳಗ ಮತ್ತು ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರ ಪುಣೆ ಇದರ 22 ನೇ ವಾರ್ಷಿಕೋತ್ಸವ ಸಮಾರಂಭವು ನವೆಂಬರ್ 9 ರವಿವಾರದಂದು ಅಪರಾಹ್ನ ಘಂಟೆ 2.30 ರಿಂದ ಬಾಣೆರ್ ನಲ್ಲಿರುವ ಬಂಟರ ಭವನದ ಓಣಿಮಜಲು ಜಗನ್ನಾಥ್ ಶೆಟ್ಟಿ ಸಾಂಸ್ಕ್ರತಿಕ ಭವನದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕ್ರತಿಕ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಶ್ರೀ ಗುರುದೇವ ದತ್ತ ಸಂಸ್ಥಾನಮ್ ಶ್ರೀ ದತ್ತಗುರು ವೀರಾಂಜನೇಯ ಸ್ವಾಮಿ ಕ್ಷೇತ್ರ ಒಡಿಯೂರಿನ ಪರಮ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ಸಾದ್ವಿ ಮಾತಾನಂದಮಯೀಯವರು ದಿವ್ಯ ಉಪಸ್ಥಿತರಿರುವರು. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಪಾದುಕ ಪೂಜೆ, ಗುರುವಂದನೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಧಾರ್ಮಿಕ ಸಭೆಯಲ್ಲಿ ಒಡಿಯೂರಿನ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಗಳು ಮತ್ತು ಸಾದ್ವಿ ಮಾತಾನಂದಮಯಿಯವರು ಅಶೀರ್ವಚನದ ಮೂಲಕ ಜ್ಞಾನ ಸಂದೇಶ ನೀಡಲಿದ್ದಾರೆ. ಧಾರ್ಮಿಕ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪುಣೆ ಬಂಟರ ಸಂಘದ ಅಧ್ಯಕ್ಷರಾದ ಅಜಿತ್ ಹೆಗ್ಡೆ ಕೆಂಜಾರು ಗುತ್ತು ಗೌರವ ಅತಿಥಿಗಳಾಗಿ, 2016-17 ರ ಪುಣೆ ಡಿಸ್ಟ್ರಿಕ್ಟ್ ಗವರ್ನರ್ ಲಯನ್ಸ್ ಇಂಟರ್ನ್ಯಾಷನಲ್ ಮತ್ತು ಕನ್ನಡ ಸಂಘದ ಟ್ರಸ್ಟಿ ಎಂ.ಜೆ.ಎಫ್ ಲಯನ್ ಡಾ| ಚಂದ್ರಹಾಸ್ ಶೆಟ್ಟಿ, ಮೀರಾ ಭಯಂದರ್ ತುಳುನಾಡ ಸಮಾಜ ಸೇವಾ ಸಂಘದ ಅಧ್ಯಕ್ಷ, ತುಳು ಸಾಹಿತ್ಯ ಅಕಾಡೆಮಿ ಸಮಿತಿ ಸದಸ್ಯರಾದ ಡಾ. ರವಿರಾಜ್ ಸುವರ್ಣ, ಪುಣೆ ದೇವಾಡಿಗ ಸಂಘದ ಅಧ್ಯಕ್ಷ ಸತೀಶ್ ದೇವಾಡಿಗರವರು ಉಪಸ್ಥಿತರಿರುವರು. ಪುಣೆ ಬಳಗದ ಅಧ್ಯಕ್ಷರಾದ ಪ್ರಭಾಕರ ವಿ ಶೆಟ್ಟಿ ಮತ್ತು ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಶ್ರೀಮತಿ ಜಯಲಕ್ಷ್ಮಿ ಪಿ ಶೆಟ್ಟಿಯವರು ಉಪಸ್ಥಿತರಿರುವರು.




ಪುಣೆ ಶ್ರೀ ಗುರುದೇವ ಸೇವಾ ಬಳಗದ ವತಿಯಿಂದ ಈ ಬಾರಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಯುವ ವೈದ್ಯರುಗಳಾದ ಡಾ. ಪ್ರಖ್ಯಾತ್ ಪ್ರಭಾಕರ್ ಶೆಟ್ಟಿ, ಡಾ. ವಿಜಯಲಕ್ಷ್ಮಿ ಪ್ರಜ್ವಲ್ ಶಾಂತಿ, ಡಾ. ಕುಶಿ ಉಷಾಕುಮಾರ್ ಶೆಟ್ಟಿ ಮತ್ತು ಡಾ. ಶ್ರದ್ಧಾ ನಾಗರಾಜ್ ಶೆಟ್ಟಿಯವರಿಗೆ ‘ಗುರು ಪ್ರಸಾದ’ ಗೌರವ ನೀಡಿ ಸನ್ಮಾನಿಸಲಾಗುವುದು. ಧಾರ್ಮಿಕ ಕಾರ್ಯಕ್ರಮದ ನಂತರ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ಜರಗಲಿರುವುದು. ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಗುರುದೇವ ಸೇವಾ ಬಳಗ ಮತ್ತು ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಸದಸ್ಯೆಯರಿಂದ ಭಜನೆ, ನಂತರ ಕಲ್ಲಡ್ಕ ವಿಟ್ಟಲ್ ನಾಯಕ್ ರವರಿಂದ ಗೀತಾ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ನಡೆಯಲಿದೆ. ನಂತರ ಪುಣೆಯ ಕಲಾವಿದರು, ಮಹಿಳೆಯರಿಂದ ಮತ್ತು ಮಕ್ಕಳಿಂದ ಕುಣಿತ ಭಜನೆ, ಭಕ್ತಿ ನಾಟ್ಯ ವೈಭವ ನಡೆಯಲಿದೆ. ಈ ಧಾರ್ಮಿಕ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮಕ್ಕೆ ಕಲಾಭಿಮಾನಿಗಳು, ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀಗಳಿಂದ ಆಶಿರ್ವಾದ ಪಡೆದು ಗುರು ಕೃಪೆಗೆ ಪಾತ್ರರಾಗಬೇಕೆಂದು ಪುಣೆ ಶ್ರೀ ಗುರುದೇವಾ ಸೇವಾ ಬಳಗದ ಅದ್ಯಕ್ಷರಾದ ಶ್ರೀ ಪ್ರಭಾಕರ ವಿ ಶೆಟ್ಟಿ, ಪ್ರ. ಕಾರ್ಯದರ್ಶಿ ರೋಹಿತ್ ಡಿ ಶೆಟ್ಟಿ ನಗ್ರಿಗುತ್ತು, ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಜಯಲಕ್ಷ್ಮಿ ಪಿ ಶೆಟ್ಟಿ ಮತ್ತು ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿ ಕೊಂಡಿರುತ್ತಾರೆ. ಪೂಜ್ಯ ಶ್ರೀಗಳು ಎರಡು ದಿನಗಳ ದಾರ್ಮಿಕ ಕಾರ್ಯಕ್ರಮದ ನಿಮಿತ್ತ ಪುಣೆಯಲ್ಲಿರಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 7875758040, 9960337625, 9372647923 ನಂಬರಿಗೆ ಸಂಪರ್ಕಿಸಬಹುದು. ಕಾರ್ಯಕ್ರಮದ ದಿನದಂದು ಅಪರಾಹ್ನ ಗಂಟೆ 1.00ರಿಂದ ಬಾಲಾಜಿ ನಗರದಿಂದ ಕಾತ್ರಜ್, ಅಂಬೆಗಾಂವ್, ವಡ್ಗಾಂವ್, ವಾರ್ಜೆ ಮೂಲಕ ಮತ್ತು ರಾಸ್ತಾ ಪೇಟ್, ಸೋಮವಾರ್ ಪೇಟ್, ಗೋಖಲೆ ನಗರ್, ಪಾಷಾಣ್ ಮೂಲಕ ಬಂಟರ ಭವನಕ್ಕೆ ಬಸ್ಸಿನ ವ್ಯವಸ್ಥೆ ಮಾಡಲಾಗಿದೆ.
ಚಿತ್ರ, ವರದಿ: ಹರೀಶ್ ಮೂಡಬಿದ್ರಿ, ಪುಣೆ











































































































