ಪರ್ಕಳ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ಮಹಿಷಮರ್ದಿನಿ ದೇವಸ್ಥಾನದ ವಠಾರದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಉಡುಪಿ ಘಟಕ, ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಪರ್ಕಳ, ಮಹಾಲಿಂಗೇಶ್ವರ ಮಹಾಗಣಪತಿ ಯಕ್ಷಗಾನ ಮಂಡಳಿ ಪರ್ಕಳ ಮತ್ತು ವಾಲಿಬಾಲ್ ಫ್ರೆಂಡ್ಸ್ ಪರ್ಕಳ ಇವರ ಸಹಯೋಗದಲ್ಲಿ ಪಾವಂಜೆ ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ದೇವಿ ಭಟ್ರು ಎಂದೇ ಖ್ಯಾತರಾದ ರಮೇಶ್ ಭಟ್ ಬಾಯಾರು ಇವರನ್ನು ಗೌರವಿಸಲಾಯಿತು. ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ಯಕ್ಷಗಾನ ಮಂಡಳಿ ಹಾಗೂ ವಾಲಿಬಾಲ್ ಫ್ರೆಂಡ್ಸ್ ಪರ್ಕಳ ವತಿಯಿಂದ ಮೇಳದ ಸಂಚಾಲಕ, ಪ್ರಧಾನ ಭಾಗವತರಾದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರನ್ನು ಗೌರವಿಸಲಾಯಿತು.

ಶ್ರೀ ಕ್ಷೇತ್ರ ಪಾವಂಜೆಯ ಆಡಳಿತ ಮೊಕ್ತೇಸರರಾದ ಶಶೀಂದ್ರ ಕುಮಾರ್, ಉಡುಪಿ ಘಟಕದ ಗೌರವಾಧ್ಯಕ್ಷರಾದ ಪುರುಷೋತ್ತಮ ಶೆಟ್ಟಿ, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ನಿರುಪಮಾ ಶೆಟ್ಟಿ, ಎಚ್ ಪಿ ಆರ್ ವಿದ್ಯಾಸಂಸ್ಥೆಯ ಛೇರ್ಮನ್ ಲಯನ್ ಹರಿಪ್ರಸಾದ್ ರೈ, ಕರುಣಾಕರ ಶೆಟ್ಟಿ, ಸುಧಾಕರ ಆಚಾರ್ಯ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಉಡುಪಿ ಘಟಕದ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿ, ಡಾ| ಹರೀಶ್ ಜೋಷಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.









































































































