ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಸಂಘದ ನೂತನ ಪೋಷಕ ಸದಸ್ಯರಾಗಿ ಸೇರ್ಪಡೆಯಾದ ಹೈದರಾಬಾದ್ ನ ನಿರ್ಮಲ ಜಿಲ್ಲೆಯ ಯುವ ಹೋಟೆಲ್ ಉದ್ಯಮಿ ನಂದ್ರೋಳಿ ಹಣೆಮಕ್ಕಿ ಗಣೇಶ್ ಶೆಟ್ಟಿಯವರನ್ನು ಅವರ ಸ್ವಗೃಹ ಮುಳ್ಳಿಕಟ್ಟೆಯಲ್ಲಿ ಕುಂದಾಪುರ ತಾಲೂಕು ಯುವ ಬಂಟರ ಸಂಘದ ಸ್ಥಾಪಕ ಅಧ್ಯಕ್ಷರಾದ ಡಾ| ಅಂಪಾರು ನಿತ್ಯಾನಂದ ಶೆಟ್ಟಿ ಹಾಗೂ ಬಂಟರ ಯಾನೆ ನಾಡವರ ಮಾತೃ ಸಂಘ ಕುಂದಾಪುರ ತಾಲೂಕು ಸಮಿತಿಯ ಸಹ ಸಂಚಾಲಕರಾದ ಅಶೋಕ್ ಶೆಟ್ಟಿ ಸಂಸಾಡಿ ಸನ್ಮಾನಿಸಿ ಗೌರವಿಸಿದರು. ಯುವ ಬಂಟರ ಸಂಘದ ನಿಕಟಪೂರ್ವ ಕಾರ್ಯದರ್ಶಿ ಉದಯ್ ಕುಮಾರ್ ಶೆಟ್ಟಿ ಮಚ್ಚಟ್ಟು, ಪ್ರಶಾಂತ್ ಶೆಟ್ಟಿ ಶಿರೂರು, ರಾಘವೇಂದ್ರ ಶೆಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
