ಜಾಗತಿಕ ಭೂಪಟದಲ್ಲಿ ಭಾರತವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವ ಮಹಾರಾಷ್ಟ್ರದ ಹೊಸ ಯುಗದ ಆರಂಭ ಎನ್ನುವಂತೆ ಅಕ್ಟೋಬರ್ 8 ರಂದು ನವಿ ಮುಂಬೈಯಲ್ಲಿ “ಡಿ. ಪಾಟೀಲ್” ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಭವ್ಯ ಉದ್ಘಾಟನೆಯನ್ನು ದೇಶದ ಉನ್ನತ ನಾಯಕ ಭಾರತದ ಪ್ರಧಾನಿ ಗೌರವಾನ್ವಿತ ನರೇಂದ್ರ ಮೋದಿಜಿಯವರು ನೆರವೇರಿಸಿದರು. ಈ ಐತಿಹಾಸಿಕ ಕ್ಷಣದಲ್ಲಿ ಪಾಲ್ಗೊಂಡಿದ್ದ ನವಿ ಮುಂಬೈಯ ನ್ಯೂ ಪನ್ವೇಲ್ ನ ಮಾಜಿ ಕಾರ್ಪೊರೇಟರ್, ಹೋಟೆಲ್ ಉದ್ಯಮಿ ಸಂತೋಷ್ ಜಿ ಶೆಟ್ಟಿ ಪಾಲ್ಗೊಂಡು ಪ್ರಧಾನಿಯವರಿಗೆ ಗೌರವ ನಮನ ಸಲ್ಲಿಸಿದರು.

ಪ್ರಧಾನಿಯವರ ವಿಮಾನ ನಿಲ್ದಾನದ ಉದ್ಘಾಟನೆಯ ಪೂರ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂತೋಷ್ ಜಿ ಶೆಟ್ಟಿ ಅವರು ಇದು ನನಗೆ ಹೆಮ್ಮೆ ಮತ್ತು ಹೃದಯ ಸ್ಪರ್ಶಿಸುವ ಘಟನೆಯಾಗಿದೆ. ಆ ಸ್ಥಳಕ್ಕೆ ಹಾಜರಾಗುವುದು ನವ ಭಾರತದ ಪ್ರಗತಿಯ ಪ್ರತಿಜ್ಞೆಯನ್ನು ಅನುಭವಿಸಿದ ಕ್ಷಣವಾಗಿದೆ ಎಂದು ತಿಳಿಸಿದ್ದಾರೆ. ಕಾರ್ಯಕ್ರಮದ ಸಮಯದಲ್ಲಿ ಮೋದಿಜಿಯವರನ್ನು ವೈಯಕ್ತಿಕವಾಗಿ ಭೇಟಿಯಾಗುವ ಅವಕಾಶ ಸಿಕ್ಕಿತು. ಅದನ್ನು ಪದಗಳಲ್ಲಿ ವ್ಯಕ್ತಪಡಿಸುವುದು ಕಷ್ಟ. ಅವರ ಉಪಸ್ಥಿತಿಯಲ್ಲಿನ ಹೊಳಪು, ಅವರ ಕಣ್ಣುಗಳಲ್ಲಿ ವಿಶ್ವಾಸ ಮತ್ತು ದೇಶ ನಿಷ್ಠೆಯನ್ನು ನೋಡುವುದು ಮನಸ್ಸಿನಲ್ಲಿ ವಿಭಿನ್ನ ಶಕ್ತಿ, ಸ್ಫೂರ್ತಿ ಮತ್ತು ವಿಶ್ವಾಸವನ್ನು ಸೃಷ್ಟಿಸಿತು.
ಇಂತಹ ಶಕ್ತಿಯುತ ಮತ್ತು ದೂರದೃಷ್ಟಿಯ ನಾಯಕತ್ವವನ್ನು ಸ್ವಾಗತಿಸಲು ನಾನು ಧನ್ಯನಾಗಿದ್ದೇನೆ. ಇದು ನನ್ನ ಜೀವನದಲ್ಲಿ ಒಂದು ಸುವರ್ಣ ಕ್ಷಣವಾಗಿದೆ. ಈ ಭೇಟಿಯು ರಾಷ್ಟ್ರೀಯ ಸೇವೆಯ ಕೆಲಸದಲ್ಲಿ ಇನ್ನಷ್ಟು ಸೇರಿಕೊಳ್ಳಲು ನನ್ನನ್ನು ಪ್ರೇರೇಪಿಸಿದೆ. ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಕೇವಲ ಒಂದು ಯೋಜನೆಯಲ್ಲ. ಇದು “ನವ ಭಾರತದ ನವ ಅಭಿವೃದ್ಧಿ”ಯ ಕನಸಿನ ವಾಸ್ತವವಾಗಿದೆ ಎಂದು ಸಂತೋಷ್ ಜಿ ಶೆಟ್ಟಿ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಚಿತ್ರ, ವರದಿ : ದಿನೇಶ್ ಕುಲಾಲ್