ಜನ್ಮ ಕ್ರಿಯೇಷನ್ ಪುತ್ತೂರು ಅರ್ಪಿಸುವ ಉದ್ಯಮಿ, ಪುತ್ತೂರು ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಡಾ| ಹರ್ಷಕುಮಾರ್ ರೈ ಮಾಡಾವು ನಿರ್ಮಾಣದಲ್ಲಿ ಮೂಡಿ ಬಂದಿರುವ ಇರ್ದೆ ಶ್ರೀ ವಿಷ್ಣುಮೂರ್ತಿ ದೇವರ ಕುರಿತಾದ ಮೊಟ್ಟ ಮೊದಲ ತುಳು ಭಕ್ತಿಗೀತೆ ‘ಇರ್ದೆ ವಿಷ್ಣುಮೂರ್ತಿ’ ಇದರ ಪೋಸ್ಟರನ್ನು ಶಾಸಕ ಅಶೋಕ್ ಕುಮಾರ್ ರೈ ಮತ್ತು ಸುಮಾ ಅಶೋಕ್ ರೈಯವರು ಮಠಂತಬೆಟ್ಟು ಶ್ರೀ ಮಹಿಷಮರ್ಧಿನಿ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ನಿರ್ಮಾಪಕರಾದ ಡಾ| ಹರ್ಷಕುಮಾರ್ ರೈ, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿರಂಜನ ರೈ ಮಠಂತಬೆಟ್ಟು, ರೈ ಚಾರಿಟೇಬಲ್ ಟ್ರಸ್ಟ್ ಇದರ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ, ಸದಾಶಿವ ರೈ ಮಠಂತಬೆಟ್ಟು, ದೇವಸ್ಥಾನದ ವ್ಯವಸ್ಥಾಪಕ ಸಂತೋಷ್ ಕುಮಾರ್ ರೈ ಕೆದಿಕಂಡೆ ಗುತ್ತು ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

ಅಕ್ಟೋಬರ್ 2ರಂದು ಇರ್ದೆಯಲ್ಲಿ ನಡೆಯುವ ಶಾರದೋತ್ಸವ ಕಾರ್ಯಕ್ರಮದಲ್ಲಿ ಅನು ಆಡಿಯೋಸ್ ಯೌಟ್ಯೂಬ್ ಚಾನೆಲ್ ನಲ್ಲಿ ಭಕ್ತಿಗೀತೆ ಬಿಡುಗಡೆಗೊಳ್ಳಲಿದೆ. ಚರಣ್ ಉಪ್ಪಳಿಗೆ, ಸಾರಥ್ಯ ಶೆಟ್ಟಿ, ಅಜಯ್ ರಾಜ್ ಸಾಹಿತ್ಯದಲ್ಲಿ ಮೂಡಿ ಬಂದಿರುವ ಭಕ್ತಿಗೀತೆಗೆ ಭರತ್ ಗಟ್ಟಿ ಹಿನ್ನೆಲೆ ಗಾಯಕರಾಗಿ ಧ್ವನಿ ನೀಡಿದ್ದು, ಎಸ್.ಡಿ.ಎಸ್ ಮಿಕ್ಸಿಂಗ್ ಆಂಡ್ ಮಾಸ್ಟರಿಂಗ್ ಸಮೀರ್ ಮುಡಿಪು, ನಿಶಾಂತ್ ಬನ್ನೂರುರವರ ಛಾಯಾಗ್ರಹಣವಿದೆ.