ಸಮಾಜಸೇವಕ, ಯುವ ಉದ್ಯಮಿ, ರಾಜಕೀಯ ಮುಖಂಡ ಅನಿಲ್ ಶೆಟ್ಟಿ ಅವರ ಮೊದಲ ಚಿತ್ರದ ಟೈಟಲ್ ಟೀಸರ್ ಗಣೇಶ ಚತುರ್ಥಿಯ ದಿನ ಲಾಂಚ್ ಆಗಿದೆ. ಚಿತ್ರಕ್ಕೆ ‘ಲಂಭೋದರ 2.0’ ಎಂದು ಹೆಸರಿಡಲಾಗಿದೆ. ಸಿನಿಮಾದ ರೂಪದಲ್ಲಿ ಗಣೇಶ ಯಾವಾಗ ಬರುತ್ತಾನೆ ಎಂಬ ಭಕ್ತರ ಪ್ರಶ್ನೆಗೆ ಉತ್ತರಿಸುತ್ತ ಗಣೇಶ, ‘ನಿಮ್ಮ ಬಳಿಗೆ ಒಬ್ಬನನ್ನು ಕಳುಹಿಸುತ್ತಿದ್ದೇನೆ. ಆದರೆ ನಿಮ್ಮ ಮೊಬೈಲ್ ಪಾಸ್ವರ್ಡ್ ಗೆ ನೀವೇ ಜವಾಬ್ದಾರರು’ ಎಂದು ಭಕ್ತರನ್ನು ಎಚ್ಚರಿಸುವ ಟೈಟಲ್ ಟೀಸರ್ ಇದೀಗ ವೈರಲ್ ಆಗಿದೆ.

ಲಂಬೋದರ 2.0 ಚಿತ್ರದಲ್ಲಿ ಅನಿಲ್ ಶೆಟ್ಟಿ ನಾಯಕ ನಟರಾಗಿ ಅಭಿನಯಿಸುತ್ತಿದ್ದು, ನಿರ್ದೇಶಕ ಅಭಿಜಿತ್ ಮಹೇಶ್ ಲಂಬೋದರ 2.0 ಸಿನಿಮಾಾಕೆ ಚಿತ್ರಕಥೆ ಮತ್ತು ಸಂಭಾಷಣೆ ಬರೆಯುತ್ತಿದ್ದಾರೆ. ಸದ್ಯದಲ್ಲೇ ಚಿತ್ರತಂಡದ ಬಗ್ಗೆ ವಿವರ ಘೋಷಣೆಯಾಗಲಿದೆ.