ಬೇರೆಯವರಲ್ಲಿ ನಿರೀಕ್ಷಿಸುವ ಗುಣಮಟ್ಟ ನಮ್ಮಲ್ಲೂ ಇರಬೇಕು. ಜೀವನದಲ್ಲಿ ಒಮ್ಮೆಯಾದರೂ ಸತ್ಯ, ನ್ಯಾಯ, ಆದರ್ಶ ಮೌಲ್ಯಕ್ಕಾಗಿ ದೃಢವಾಗಿ ನಿಂತರೆ ನಿಮ್ಮ ಜೀವನ ಸಾರ್ಥಕ ಎಂದು ಜಿಲ್ಲಾ ಎಸ್ ಪಿ ಹರಿರಾಮ್ ಶಂಕರ್ ಹೇಳಿದರು. ಆಗಸ್ಟ್ 24 ರಂದು ಕುಂದಾಪುರ ಬಂಟರ ಭವನದ ಆರ್.ಎನ್ ಶೆಟ್ಟಿ ಸಭಾಭವನದಲ್ಲಿ ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ನಡೆದ ಪ್ರೋತ್ಸಾಹ ಧನ ವಿತರಣೆ, ಪ್ರತಿಭಾ ಪುರಸ್ಕಾರ, ದಿ. ಎಂ ಗೋಪಾಲಕೃಷ್ಣ ಶೆಟ್ಟಿ ಸಂಸ್ಮರಣ ಪ್ರಗತಿಪರ ಕೃಷಿಕ ಪ್ರಶಸ್ತಿ, ಹಿರಿಯ ಸಾಧಕ ಗಣ್ಯರಿಗೆ ಗೌರವಾರ್ಪಣೆ, ದಿ. ಡಾ| ಮಧುಕರ ಶೆಟ್ಟಿ ಸಂಸ್ಮರಣ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಜೆ.ಎನ್.ಎಸ್ ಕನ್ಸ್ಟ್ರಕ್ಷನ್ ಮತ್ತು ಮನಿಷ್ ಗ್ರೂಪ್ ಆಫ್ ಹೋಟೆಲ್ಸ್ ಇದರ ಸಿಎಂಡಿ ಜಯಶೀಲ ಶೆಟ್ಟಿ ಘಟಪ್ರಭಾ, ಹೆರಂಭ ಗ್ರೂಪ್ ನ ಸಿಎಂಡಿ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಮಾತನಾಡಿದರು. ಸಂಘದ ಅಧ್ಯಕ್ಷ ನಿತೀಶ್ ಶೆಟ್ಟಿ ಬಸ್ರೂರು ಅಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ಕೃಷಿಕ ನೀರ್ಕೋಡ್ಲು ಚಂದ್ರಶೇಖರ ಶೆಟ್ಟಿ ಅವರಿಗೆ ದಿ. ಎಂ ಗೋಪಾಲಕೃಷ್ಣ ಶೆಟ್ಟಿ ಸಂಸ್ಮರಣ ಪ್ರಗತಿಪರ ಕೃಷಿಕ ಪ್ರಶಸ್ತಿಯನ್ನು ನೀಡಲಾಯಿತು. ಡಾ. ಅರುಣ್ ಕುಮಾರ್ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು. ಯುವ ಮೆರಿಡಿಯನ್ ಕೋಟೇಶ್ವರ ಇದರ ಸಿಎಂಡಿ ಬಿ ವಿನಯ್ ಕುಮಾರ್ ಶೆಟ್ಟಿ ಅವರು ಮಂಗಳೂರು ವಿವಿ ಡಾಕ್ಟರೇಟ್ ಪುರಸ್ಕೃತ ಡಾ| ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಅವರನ್ನು ಗೌರವಿಸಿದರು ವಿವಿಧ ಕ್ಷೇತ್ರದ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಲೈಫ್ ಲೈನ್ ಫೀಡ್ಸ್ ಸಂಸ್ಥೆಯ ಆಡಳಿತ ನಿರ್ದೇಶಕ ಕಿಶೋರ್ ಕುಮಾರ್ ಹೆಗ್ಡೆ, ಉದಯ ಕುಮಾರ್ ಹೆಗ್ಡೆ ಗಿಳಿಯಾರು, ಉದ್ಯಮಿ ಸಟ್ಟಾಡಿ ವಿಜಯ ಶೆಟ್ಟಿ, ಎಂ ಮಹೇಶ್ ಹೆಗ್ಡೆ, ಡಾ. ರಂಜನ್ ಶೆಟ್ಟಿ, ದಯಾನಂದ ಶೆಟ್ಟಿ, ಲಯನ್ ಹರಿಪ್ರಸಾದ್ ರೈ, ಉದ್ಯಮಿ ಅನಿಲ್ ಪ್ರಸಾದ್ ಶೆಟ್ಟಿ ಬೆಂಗಳೂರು, ಜಡ್ಡಾಡಿ ವಿಜಯ ಶೆಟ್ಟಿ, ಪ್ರಶಾಂತ ಶೆಟ್ಟಿ ಶಿರೂರು ಆರ್ಮಕ್ಕಿ, ವಸಂತ ಶೆಟ್ಟಿ, ಸಂಪತ್ ಕುಮಾರ್ ಶೆಟ್ಟಿ ಕಾವ್ರಾಡಿ, ಹಿರಿಯ ವಕೀಲ ಆವರ್ಸೆ ರತ್ನಾಕರ ಶೆಟ್ಟಿ, ಸಂತೋಷ ಕುಮಾರ ಶೆಟ್ಟಿ ಚಿತ್ತೂರು, ಬಿ.ಎಸ್ ಪ್ರಶಾಂತ ಶೆಟ್ಟಿ, ಸಂಪತ್ ಕುಮಾರ್ ಶೆಟ್ಟಿ, ಸಾಲ್ಗದ್ದೆ ಶಶಿಧರ ಶೆಟ್ಟಿ, ಹಿರಿಯ ವಕೀಲ ಟಿ.ಬಿ ಶೆಟ್ಟಿ ಕುಂದಾಪುರ, ಉದ್ಯಮಿ ಶಂಕರ ಹೆಗ್ಡೆ, ವಿನಯ ಆಸ್ಪತ್ರೆಯ ಡಾ. ರಂಜಿತ್ ಕುಮಾರ್ ಶೆಟ್ಟಿ, ಸಿಎ ಸುಧಾಕರ ಹೆಗ್ಡೆ, ಅರುಣ್ ಕುಮಾರ್ ಹೆಗ್ಡೆ, ಕಾರ್ತಿಕ್ ಶೆಟ್ಟಿ ಮಜಿಬೈಲು, ಅಶೋಕ ಶೆಟ್ಟಿ ಸಂಸಾಡಿ, ಅಶೋಕ್ ಶೆಟ್ಟಿ ಹೈದರಾಬಾದ್, ಹುಂತ್ರಿಕೆ ಸುಧಾಕರ ಶೆಟ್ಟಿ, ವತ್ಸಲಾ ದಯಾನಂದ ಶೆಟ್ಟಿ, ಮುರಳಿದರ ಶೆಟ್ಟಿ ಹುಯ್ಯಾರು, ಭರತ್ ರಾಜ್ ಶೆಟ್ಟಿ ಜಾಂಬೂರು ಉಪಸ್ಥಿತರಿದ್ದರು.
ಸ್ಥಾಪಕ ಅಧ್ಯಕ್ಷ ಡಾ| ಅಂಪಾರು ನಿತ್ಯಾನಂದ ಶೆಟ್ಟಿ, ಮಾಜಿ ಅಧ್ಯಕ್ಷ ಸುಕೇಶ್ ಶೆಟ್ಟಿ ಹೊಸ್ಮಠ ಸನ್ಮಾನ ಪತ್ರ ವಾಚಿಸಿ, ಕಾರ್ಯಕ್ರಮ ಸಂಚಾಲಕ ಸಚಿನ್ ಕುಮಾರ್ ಶೆಟ್ಟಿ ಹಂಚನಿ, ಸ್ವಾಗತಿಸಿ, ಡಾ| ಚೇತನ್ ಶೆಟ್ಟಿ ಕೋವಾಡಿ ನಿರ್ವಹಿಸಿ, ಪ್ರತಾಪ ಚಂದ್ರ ಶೆಟ್ಟಿ ಹಳ್ನಾಡು ಪ್ರಸ್ತಾವಿಸಿದರು.