ಸಮಾಜದ ಆಶೋತ್ತರಗಳಿಗೆ ಸ್ಪಂದಿಸುವ ಜೊತೆಗೆ ಆರ್ಥಿಕ ಶಕ್ತಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸ್ಥಾಪನೆಗೊಂಡಿರುವ ಶ್ರೀಶಂ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು ಆದಿ ಉಡುಪಿ ಎಪಿಎಂಸಿ ಬಿಲ್ಡಿಂಗ್ ನಲ್ಲಿ ಲೋಕಾರ್ಪಣೆಗೊಂಡಿತು. ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ ಜಯಕರ ಶೆಟ್ಟಿ ಇಂದ್ರಾಳಿ ಶ್ರೀಶಂ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯನ್ನು ಉದ್ಘಾಟಿಸಿ, ಸಹಕಾರಿ ಕ್ಷೇತ್ರ ಅಭಿವೃದ್ಧಿಗೊಂಡರೆ ದೇಶದ ಆರ್ಥಿಕತೆ ಶಕ್ತಿಯನ್ನು ಬಲಪಡಿಸಲು ಸಾಧ್ಯವಿದೆ. ರಾಷ್ಟ್ರೀಕತ ಬ್ಯಾಂಕುಗಳಿಗೆ ಪೈಪೋಟಿಯಂತೆ ಸಹಕಾರಿ ಕ್ಷೇತ್ರ ಬೆಳೆಯುತ್ತಿದ್ದು, ಈ ಸಾಲಿಗೆ ಶ್ರೀಶಂ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಸೇರ್ಪಡೆಗೊಂಡಿದೆ. ಈ ಸಂಸ್ಥೆ ಉತ್ತುಂಗ ಶ್ರೇಣಿಯಲ್ಲಿ ಬೆಳವಣಿಗೆ ಕಾಣಲಿ ಎಂದರು.

ಸಭಾ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಸಹಕಾರಿ ಮೂಲತತ್ವದ ಆಶಯದಂತೆ ಕಾರ್ಯಚರಿಸಿ ಸಂಸ್ಥೆ ಅಭಿವೃದ್ಧಿ ಕಾಣಲಿ ಎಂದು ಶುಭ ಹಾರೈಸಿದರು. ಕಚೇರಿ ದೀಪ ಪ್ರಜ್ವಲಿಸಿದ ಮಾಜಿ ಶಾಸಕ ಕೆ ರಘುಪತಿ ಭಟ್ ಮಾತನಾಡಿ, ಪ್ರಾಮಾಣಿಕತೆ ನಿಸ್ವಾರ್ಥ ಮನೋಭಾವ ನೆರವಿನ ಗುಣವಿದ್ದರೆ ಸಂಸ್ಥೆ ಏಳಿಗೆ ಸಾಧ್ಯ ಎಂದರು. ಗಣಕಯಂತ್ರ ಉದ್ಘಾಟಿಸಿದ ಉದ್ಯಮಿ ಪ್ರಸಾದ್ ರಾಜ್ ಕಾಂಚನ್ ಮಾತನಾಡಿ, ದೇಶದ ಜನಸಾಮಾನ್ಯರು ಮಧ್ಯಮ ವರ್ಗದ ಜನರು ಸಹಕಾರಿ ಕ್ಷೇತ್ರವನ್ನು ಅವಲಂಬಿತರಾಗಿದ್ದಾರೆ. ಸಹಕಾರಿ ಕ್ಷೇತ್ರ ಬೆಳೆದರೆ ದೇಶದ ಆರ್ಥಿಕತೆಗೆ ಬಲ ಬರುತ್ತದೆ ಎಂದರು.
ಶ್ರೀಶಂ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೆ ಶಿವಪ್ರಸಾದ್ ಶೆಟ್ಟಿ ಮಜಲುಮನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ವಸಹಾಯ ಗುಂಪುಗಳ ರಚನೆ, ಗುಡಿ ಕೈಗಾರಿಕೆಗಳಿಗೆ ಉತ್ತೇಜನ, ಬಡ ಮಧ್ಯಮ ವರ್ಗದವರಿಗೆ ಆರ್ಥಿಕ ಸಹಾಯಹಸ್ತ, ಸಾಮಾಜಿಕ ಚಟುವಟಿಕೆಯ ಉದ್ದೇಶದಿಂದ ಈ ಸೊಸೈಟಿಯನ್ನು ಸ್ಥಾಪಿಸಿದ್ದೇವೆ. ನಮ್ಮ ಮೇಲೆ ನಂಬಿಕೆ ವಿಶ್ವಾಸವಿಟ್ಟು ಯಾವುದೇ ಸ್ವಾರ್ಥವಿಲ್ಲದೆ ನೂರಾರು ಮಂದಿ ಷೇರು ಖರೀದಿಸಿದ್ದು ಸದೃಢ ಆರ್ಥಿಕ ಸಂಸ್ಥೆಯನ್ನಾಗಿಸುವ ಪಣತೊಟ್ಟಿದ್ದೇವೆ ಎಂದರು. ಕೊಡವೂರು ಶ್ರೀ ಸಾಯಿಬಾಬಾ ಮಂದಿರದ ಧರ್ಮದರ್ಶಿ ದಿವಾಕರ ಶೆಟ್ಟಿ ಸಿರಿ ನಗದು ಠೇವಣಿ ಪತ್ರ ಬಿಡುಗಡೆಗೊಳಿಸಿದರು. ಎಪಿಎಂಸಿ ಕಾರ್ಯದರ್ಶಿ ಗೋಪಾಲ ಕಾಕನೂರ, ಬಂಟರ ಯಾನೆ ನಾಡವರ ಮಾತೃ ಸಂಘ ಉಡುಪಿ ತಾಲೂಕು ಸಮಿತಿ ಸಂಚಾಲಕ ಶಿವಪ್ರಸಾದ್ ಹೆಗ್ಡೆ, ಗುರು ನಿತ್ಯಾನಂದ ಕ್ರೆಡಿಟ್ ಆಪರೇಟಿವ್ ಸೊಸೈಟಿ ಅಧ್ಯಕ್ಷ ಸುರೇಶ್ ಶೆಟ್ಟಿ, ಕೊಡವೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಬಲ್ಲಾಳ್, ಪಂದುಬೆಟ್ಟು ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಪಿ ಕೃಷ್ಣ ಶೆಟ್ಟಿ, ಬಿಲ್ಲವರ ಸಮಾಜ ಸೇವಾ ಸಂಘ ಮಲ್ಪೆ ಅಧ್ಯಕ್ಷ ಗೋಪಾಲ ಸಿ ಬಂಗೇರ, ನಗರಸಭೆ ಸದಸ್ಯೆ ಸವಿತಾ ಹರೀಶ್ ರಾಮ್ ಶುಭ ಹಾರೈಸಿದರು.
ಶ್ರೀಶಂ ಕ್ರೆಡಿಟ್ ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ಸಂತೋಷ್ ಶೆಟ್ಟಿ, ಪಂಚರತ್ನ ಬೈಲುಮನೆ, ನಿರ್ದೇಶಕರಾದ ನವೀನ್ ಶೆಟ್ಟಿ ಪಡುಮನೆ, ಶಂಕರ್ ಶೆಟ್ಟಿ ಆದಿ ಉಡುಪಿ, ಸಂಜೀವ ಶೆಟ್ಟಿ ಕಪ್ಪೆಟ್ಟು, ಪುಷ್ಪರಾಜ್ ಶೆಟ್ಟಿ ಆದಿ ಉಡುಪಿ, ಅರುಣ್ ಶೆಟ್ಟಿ ಗಂಗೋತ್ರಿ, ಅರುಣ್ ಕುಮಾರ್ ಎಸ್ ಶೆಟ್ಟಿ, ಭರತ್ ಶೆಟ್ಟಿ ಕೊಡಂಕೂರು, ಆನಂದ್ ಶೆಟ್ಟಿ ಕಟ್ಟದಮನೆ, ರಾಕೇಶ್ ಶೆಟ್ಟಿ ಕಂಬಳಕಟ್ಟ, ಸತೀಶ್ ಶೆಟ್ಟಿ ತೆಂಕುಮನೆ, ಅಶ್ವಿನಿ ವಿಜೇತ್ ಶೆಟ್ಟಿ ಜನ್ನಿಬೆಟ್ಟು, ಕಾರ್ಯ ನಿರ್ವಹಣಾಧಿಕಾರಿ ನಿತಿನ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಶ್ರೀಶಂ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕ ಅಮೃತ್ ಶೆಟ್ಟಿ ಕಂಬಳಕಟ್ಟ ಸ್ವಾಗತಿಸಿದರು. ಸ್ಮಿತಾ ವಿದ್ಯಾಧರ್ ಶೆಟ್ಟಿ ಗರ್ಡೆ ವಂದಿಸಿದರು. ತೇಜೇಶ್ ಜೆ ಬಂಗೇರ ಕಾರ್ಯಕ್ರಮ ನಿರೂಪಿಸಿದರು.