ಗಣಿತನಗರ : ಬದುಕು ಆಕರ್ಷಣೆಯ ಗುಚ್ಚ. ಅದರಾಚೆಗಿರುವ ಮೌಲ್ಯವನ್ನು ಅರಿತರೆ ಜೀವನ ಸ್ವಚ್ಛವಾಗಿರಲು ಸಾಧ್ಯ. ಸಮಾಜದೆದುರು ನಾವು ಏನು ಅನ್ನೋದನ್ನು ತೋರಿಸಿಕೊಡುವಲ್ಲಿ ತಲೆತಗ್ಗಿಸದಂತೆ ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ನಮ್ಮೊಳಗಿನ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಂಡು ಮುನ್ನಡೆದ ಪ್ರಾಮಾಣಿಕರು ಆರೋಗ್ಯವಾಗಿರುತ್ತಾರೆ ಎಂದು ಹಿಪ್ನೋಥೆರಪಿಸ್ಟ್ ಶ್ರೀಮತಿ ಜ್ಯೋತಿ ಮಹಾದೇವ್ ಹೇಳಿದರು. ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಕಳದ ರೋಟರಿ ಕ್ಲಬ್, ಆನ್ಸ್ ಕ್ಲಬ್ ಹಾಗೂ ಕಾಲೇಜಿನ ಎನ್.ಎಸ್.ಎಸ್ ಮತ್ತು ಎನ್.ಸಿ.ಸಿ ಘಟಕದ ವತಿಯಿಂದ ನಡೆದ ಮಕ್ಕಳು ಎದುರಿಸುತ್ತಿರುವ ಮನೋಸಮಸ್ಯೆಗಳ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ನ ಅಧ್ಯಕ್ಷ ರೊ.ನವೀನ್ಚಂದ್ರ ಶೆಟ್ಟಿ ಮಾತನಾಡಿದರು, ಇದೇ ಸಂದರ್ಭ ರೋ.ವೃಂದ ಶೆಟ್ಟಿ ಸ್ವಾಗತಿಸಿ, ಆನ್ಸ್ಕ್ಲಬ್ ಅಧ್ಯಕ್ಷೆ ಜಯಂತಿ ನಾಯ್ಕ್ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಕಾರ್ಯಕ್ರಮದಲ್ಲಿ ಮುಖ್ಯಅತಿಥಿ ಶ್ರೀಮತಿ ಜ್ಯೋತಿ ಮಹಾದೇವ್ ಅವರಿಗೆ ಮೇಜರ್ ಡೋನರ್ ಲೆವಲ್ ೨ ರೋ.ಸುವರ್ಣ ನಾಯಕ್ ನೇತೃತ್ವದಲ್ಲಿ ಉಡಿ ತುಂಬಿಸಿ ಸನ್ಮಾನಿಸಲಾಯಿತು. ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿನೇಶ್ ಎಂ ಕೊಡವೂರ್, ಉಪಪ್ರಾಂಶುಪಾಲ ಶ್ರೀ ಸಾಹಿತ್ಯ, ಪಿ.ಆರ್.ಒ ಜ್ಯೋತಿ ಪದ್ಮನಾಭ ಭಂಡಿ, ಎನ್.ಎಸ್.ಎಸ್ ಘಟಕಾಧಿಕಾರಿ ಶ್ರೀ ಶೈಲೇಶ್ ಶೆಟ್ಟಿ ಹಾಗೂ ಎನ್.ಸಿ.ಸಿ. ಲೆಫ್ಟಿನೆಂಟ್ ಮ0ಜುನಾಥ್ ಮುದೂರು ಉಪಸ್ಥಿತರಿದ್ದರು. ಜೀವಶಾಸ್ತ ಉಪನ್ಯಾಸಕಿ ಕು.ಸಹನಾ ಕುಲಾಲ್ ನಿರೂಪಿಸಿ ವಂದಿಸಿದರು.